ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಶ್ರೀ ದೇವರು ಶನಿವಾರ ಹೊರಾಂಗಣ ಪ್ರವೇಶಿಸಿ ದರು. ಬಳಿಕ ದೀಪಾವಳಿ ಪ್ರಯುಕ್ತ ಶ್ರೀ ದೇವರ ಪಾಲಕಿ ಮತ್ತು ಬಂಡಿ ಉತ್ಸವ ನೆರವೇರಿತು.
ಅರ್ಚಕ ಸತ್ಯನಾರಾಯಣ ನೂರಿತ್ತಾಯರು ಉತ್ಸವದ ವಿಧಿವಿಧಾನಗಳನ್ನು ನೆರವೇರಿಸಿ ದರು. ಈ ಮೂಲಕ ಶ್ರೀ ಕ್ಷೇತ್ರದಲ್ಲಿ ಶ್ರೀ ದೇವರ ಹೊರಾಂಗಣ ವರ್ಷಾವಧಿ ಉತ್ಸವಗಳು ಆರಂಭವಾದವು.
ಈ ಮೊದಲು ದೇಗುಲದಲ್ಲಿ ಪೂರ್ವಶಿಷ್ಟ ಸಂಪ್ರದಾಯದ ಪ್ರಕಾರ ಲಕ್ಷ್ಮಿ ಪೂಜೆ ನೆರವೇರಿತು. ಶನಿವಾರ ಮಹಾಪೂಜೆಯ ಬಳಿಕ ದೇವರು ಹೊರಾಂಗಣ ಪ್ರವೇಶಿಸಿದರು. ಅನಂತರ ಆನೆ, ಬಿರುದಾವಳಿ, ಮಂಗಳವಾದ್ಯಗಳ ನಿನಾದದೊಂದಿಗೆ ಶ್ರೀ ದೇವರ ಉತ್ಸವಾದಿಗಳು ನೆರವೇರಿದವು. ಆರಂಭದಲ್ಲಿ ದೀಪಾರಾಧನೆಯುಕ್ತ ಶ್ರೀ ದೇವರ ಬಂಡಿ ರಥೋತ್ಸವ ನೆರವೇರಿತು. ಅನಂತರ ಭಜನೆ ಸುತ್ತು, ನಾಗಸ್ವರ, ಬ್ಯಾಂಡ್, ವಾದ್ಯಗಳನ್ನು ಒಳಗೊಂಡ ದೀಪಾರಾಧನೆಯುಕ್ತ ಪಾಲಕಿ ಉತ್ಸವ ಸಂಪನ್ನವಾಯಿತು.
ಶಾಸಕಿ ಭಾಗೀರಥಿ ಮುರುಳ್ಯ, ದೇಗುಲದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಅಕೌಂಟೆಂಟ್ ರಾಜಲಕ್ಷ್ಮಿ ಶೆಟ್ಟಿಗಾರ್, ಹೆಬ್ಟಾರ್‌ಪ್ರಸನ್ನ ಭಟ್, ಲೋಕೇಶ್ ಮುಂತಾದವರಿದ್ದರು