Advertisement
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ 1.84 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ 1 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಭಕ್ತರು ತಮ್ಮ ಇಷ್ಟಾರ್ಥ ನೆರವೇರಿಸಿಕೊಳ್ಳಲು ಕ್ಷೇತ್ರ ಸಂದರ್ಶನ ಮಾಡುತ್ತಾರೆ. ಅವರಿಗೆ ಸೂಕ್ತ ಮೂಲಸೌಕರ್ಯಗಳನ್ನು ದೇಗುಲದದ ವತಿಯಿಂದ ಪೂರೈಸಲು ಆಡಳಿತ ಮಂಡಳಿ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.
ಶ್ರೀ ದೇಗುಲದ ಶೃಂಗೇರಿ ಮಠದ ನೆಲ ಹಾಸುಗಳಿಗೆ ಮಾರ್ಬಲ್ ಅಳವಡಿಕೆಗೆ ಶಂಕುಸ್ಥಾಪನೆ ನೆರವೇರಿತು. ಪುರೋಹಿತ ಸುಬ್ರಹ್ಮಣ್ಯ ಕೋರ್ನಾಯ ಧಾರ್ಮಿಕ ವಿಧಿ- ವಿಧಾನ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು. ಕೆ.ಎಸ್.ಎಸ್. ಕಾಲೇಜಿನ ಕಟ್ಟಡಗಳಿಗೆ ಬಣ್ಣ ಬಳಿಯುವ ವ್ಯವಸ್ಥೆಗೆ ಚಾಲನೆ, ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ರಂಗಮಂದಿರಕ್ಕೆ ಇಂಟರ್‌ಲಾಕ್ ಅಳವಡಿಕೆಗೆ ಶಂಕುಸ್ಥಾಪನೆ, ವಸತಿ ಗೃಹದ ಬಳಿ ಮಹಿಳೆ ಯರ, ಪುರುಷರ ಶೌಚಾಲಯ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿತು. ದೇಗುಲದ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಮಹೇಶ್ ಕುಮಾರ್ ಕೆ.ಎಸ್. ಕರಿಕ್ಕಳ, ಕೃಷ್ಣಮೂರ್ತಿ ಭಟ್, ಬಾಲಕೃಷ್ಣ ಬಳ್ಳೇರಿ, ಮಾಧವ ಡಿ., ರಾಜೀವಿ ಆರ್. ರೈ, ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವರಾಮ ರೈ, ಲೋಲಾಕ್ಷ ಕೈಕಂಬ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ, ಅಭಿಯಂತರ ಉದಯ ಕುಮಾರ್, ದೇಗುಲದ ಹೆಬ್ಟಾರ್ ಷಣ್ಮುಖ ಉಪರ್ಣ, ಕೆ.ಎಸ್.ಎಸ್. ಕಾಲೇಜಿನ ಪ್ರಾಂಶುಪಾಲ ಪ್ರೊ| ಕೆ.ಆರ್. ಶೆಟ್ಟಿಗಾರ್, ಎಸ್ ಎಸ್‌ಪಿಯು ಕಾಲೇಜಿನ ಪ್ರಾಂಶುಪಾಲೆ ಸಾವಿತ್ರಿ ಕೆ., ಪ್ರೌಢಶಾಲಾ ಮುಖ್ಯಗುರು ಕೆ. ಯಶವಂತ ರೈ, ಗುತ್ತಿಗೆದಾರರಾದ ಪ್ರಕಾಶ್ ಎಸ್. ಶೆಟ್ಟಿ ಬನ್ನಾಡಿ, ಸಿ.ಎನ್. ಎಸ್. ಮೂರ್ತಿ ಬೆಂಗಳೂರು, ಉದಯ ಕುಮಾರ್ ಪಡುಕೋಣೆ, ಸೋಮಶೇಖರ ನಾಯಕ್, ಶ್ರೀ ದೇಗುಲದ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.
Related Articles
ಅರ್ಚಕ ಪ್ರಸನ್ನ ಭಟ್ ಧಾರ್ಮಿಕ ವಿಧಿ-ವಿಧಾನ ನೆರವೇರಿಸಿ, ಪೂಜೆ ಸಲ್ಲಿಸಿದರು. ಶ್ರೀ ದೇಗುಲದ ಆಡಳಿತ ಕಚೇರಿಗೆ ಅಳವಡಿಸಿ ಲಿಫ್ಟ್, ಬ್ಯಾಟರಿ ಚಾಲಿತ ಪರಿಸರ ಸ್ನೇಹಿ ವಾಹನ, ಅಕ್ಷರಾ ವಸತಿ ಗೃಹದ ಲಿಫ್ಟ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿಗೆ ನಿರ್ಮಿಸಲಾದ ಮೆಟ್ಟಿಲು, ಶ್ರೀ ದೇಗುಲದ ವಾಹನಗಳಿಗೆ ನಿರ್ಮಿತವಾದ ನೂತನ ಶೆಡ್ ಉದ್ಘಾಟನೆ ಮಾಡಲಾಯಿತು.
Advertisement