Advertisement

ಕುಕ್ಕೆ ವಾರ್ಷಿಕ ಜಾತ್ರೆ: ರಸ್ತೆಗಳಿಗೆ ತಾತ್ಕಾಲಿಕ ದುರಸ್ತಿ ಭಾಗ್ಯ!

11:35 AM Nov 09, 2018 | Team Udayavani |

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮುಂದಿನ ತಿಂಗಳಲ್ಲಿ ನಡೆಯುವ ಚಂಪಾಷಷ್ಠಿ ಮಹೋತ್ಸವದ ಹಿನ್ನೆಲೆಯಲ್ಲಿ ಕುಮಾರಧಾರಾ-ಮುಖ್ಯ ಪೇಟೆ ನಡುವಿನ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸುವ ಕಾಮಗಾರಿಗೆ ಕ್ಷೇತ್ರದಲ್ಲಿ ಚಾಲನೆ ದೊರಕಿದೆ.

Advertisement

ಕುಮಾರಧಾರಾ-ಮುಖ್ಯ ಪೇಟೆ ತನಕದ ರಸ್ತೆಯಲ್ಲಿ ಅಲ್ಲಲ್ಲಿ ಡಾಮರು ಕಿತ್ತು ಹೋಗಿ, ಹೊಂಡಗಳು ನಿರ್ಮಾಣವಾಗಿದ್ದವು. ಈ ಸ್ಥಳಗಳಲ್ಲಿ ಜಲ್ಲಿ ತುಂಬಿ ಸಮತಟ್ಟುಗೊಳಿಸುವ ಕೆಲಸ ಎರಡು ದಿನಗಳಿಂದ ನಡೆಯುತ್ತಿದೆ. ಜಾತ್ರೆಯ ಪೂರ್ವಭಾವಿಯಾಗಿ ಅಲ್ಲಲ್ಲಿ ಡಾಮರು ಹಾಕಿ, ದುರಸ್ತಿ ಮಾಡಲಾಗುತ್ತಿದೆ. ಈ ರಸ್ತೆಯ ಅಭಿವೃದ್ಧಿ ಬಹುಕಾಲದ ಬೇಡಿಕೆ. ಕ್ಷೇತ್ರದಲ್ಲಿ 180 ಕೋಟಿ ರೂ. ವೆಚ್ಚದ ಮಾಸ್ಟರ್‌ ಪ್ಲಾನ್‌ ಅನುಷ್ಠಾನದಲ್ಲಿದೆ. ಇದೇ ಯೋಜನೆಯಲ್ಲಿ ಕುಮಾರಧಾರಾ-ಕಾಶಿಕಟ್ಟೆ ತನಕ ಚತುಷ್ಪಥ ಮಾರ್ಗ ನಿರ್ಮಾಣವೂ ಸೇರಿದೆ. ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿ ಸರಕಾರದ ಅನುಮೋದನೆ ದೊರೆತರೂ ಇನ್ನೂ ಕಾಮಗಾರಿ ಆರಂಭಕ್ಕೆ ಹಣಕಾಸು ಟೆಂಡರ್‌ ಬಿಡ್‌ ಪ್ರಕ್ರಿಯೆ ಅಂತಿಮವಾಗಿಲ್ಲ.

ಈ ಸಲದ ಜಾತ್ರೆ ವೇಳಗೆ ಚತುಷ್ಪಥ ರಸ್ತೆ ಕಾಮಗಾರಿ ಅರಂಭವಾಗುತ್ತದೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಈ ಹಿಂದೆ ಹೇಳಿದ್ದರೂ ತಾಂತ್ರಿಕ ತೊಂದರೆಗಳಿಂದ ಅದು ತಡವಾಗಲಿದೆ. ಈ ಸಲವೂ ಕಾಮಗಾರಿ ತೇಪಗಷ್ಟೇ ಸೀಮಿತವಾಗಲಿದೆ. ಆದರೆ, ಈ ರಸ್ತೆ ತೀರಾ ಹದಗೆಟ್ಟಿದ್ದು, ವಾರ್ಷಿಕ ಜಾತ್ರೆ ಸಮೀಪಿಸುತ್ತಿರುವ ತಾತ್ಕಾಲಿಕವಾಗಿ ದುರಸ್ತಿ ಮಾಡುವ ಕಾರ್ಯ ನಡೆದಿದೆ. ಆದರೆ ರಸ್ತೆಯ ಉದ್ದಕ್ಕೂ ಭಾರೀ ಪ್ರಮಾಣದಲ್ಲಿ ಧೂಳು ಏಳುತ್ತಿದ್ದು, ಅಂಗಡಿ ಮಾಲಕರು, ಸಾರ್ವಜನಿಕರು ಹಾಗೂ ಭಕ್ತರು ತೊಂದರೆ ಅನುಭವಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next