Advertisement

Manipur ಉದ್ವಿಗ್ನ: ಇಬ್ಬರು ಕಮಾಂಡೋಗಳು ಸಾವು

12:14 AM Jan 18, 2024 | Team Udayavani |

ಇಂಫಾಲ: ಮಣಿಪುರ ಮೊರೆಹ್‌ ಪಟ್ಟಣದಲ್ಲಿ ಭದ್ರತಾ ಪಡೆಗಳ ಮೇಲೆ ಕುಕಿ ಉಗ್ರರು ಬುಧವಾರ ನಡೆಸಿದ ದಾಳಿಯಲ್ಲಿ ಇಬ್ಬರು ಪೊಲೀಸ್‌ ಕಮಾಂಡೊಗಳು ಮೃತಪಟ್ಟಿದ್ದಾರೆ.
ಮಣಿಪುರ ಪೊಲೀಸ್‌ ಇಲಾಖೆಗೆ ಸೇರಿದ ಇಂಡಿಯಾ ರಿಸರ್ವ್‌ ಬೆಟಾಲಿಯನ್‌ನ(ಐಆರ್‌ಬಿ) ಕಮಾಂ ಡೊಗಳಾದ ವಾಂಗೆ ಸೊಮೊರ್ಜಿತ್‌(32), ತಖೆಲ್ಲಂಬಂ ಶೈಲೇಶ್ವರ್‌ ಮೃತಪಟ್ಟವರು. ಸೊಮೊರ್ಜಿತ್‌ ಅವರು ಇಂಫಾಲ ಪಶ್ಚಿಮ ಜಿಲ್ಲೆಯ ಮಾಲೋಮ್‌ ಮೂಲದವರು.

Advertisement

ಕುಕಿ ಉಗ್ರರು ಮೊರೆಹ್‌ ಸಮೀಪದ ಪೊಲೀಸ್‌ ಪೋಸ್ಟ್‌ ಮೇಲೆ ಬಾಂಬ್‌ಗಳು, ಆರ್‌ಪಿಜಿ ಶೆಲ್‌ಗ‌ಳು, ರಾಕೆಟ್‌ ಚಾಲಿತ ಗ್ರೆನೇಡ್‌ಗಳಿಂದ ದಾಳಿ ನಡೆಸಿ ಸ್ಫೋಟಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಕೂಡ ಪ್ರತಿದಾಳಿ ನಡೆಸಿದ್ದು, ಗುಂಡಿನ ಚಕಮಕಿ ಮುಂದು ವರಿದಿದೆ. ಇನ್ನೊಂದೆಡೆ, ಭದ್ರತಾ ಪಡೆ ಗಳ ಟ್ರಕ್‌ಗಳು ಮೊರೆಹ್‌ ಪ್ರವೇಶಿಸಿ ದಂತೆ ಪ್ರತಿಭಟನಾಕಾರರು ತಡೆದಿ ದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಪೊಲೀಸ್‌ ಅಧಿಕಾರಿ ಚಿಂಗ್ತಮ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2 ದಿನಗಳ ಹಿಂದೆ ಮಣಿಪುರ ಪೊಲೀಸರು ಕುಕಿ ಸಮುದಾಯದ ಇಬ್ಬರನ್ನು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next