Advertisement

ಕುಕನೂರು; ವಿವಿಧ ಗ್ರಾಮ ವ್ಯಾಪ್ತಿಯಲ್ಲಿ ಉತ್ತಮ ಮಳೆ

12:19 PM Jun 02, 2020 | Team Udayavani |

ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ವಿವಿಧ ಗ್ರಾಮ ವ್ಯಾಪ್ತಿಯಲ್ಲಿ ಸೋಮವಾರ ಉತ್ತಮ ಮಳೆಯಾಗಿದ್ದು, ಹಳ್ಳ-ಕೊಳ್ಳಗಳು ಹರಿದಿವೆ. ಕೊಪ್ಪಳ ತಾಲೂಕಿನ ಕೆಲವು ಹೋಬಳಿಯಲ್ಲಿ ತುಂತುರು ಹನಿಯಾಗಿದ್ದು, ಗಂಗಾವತಿ ಹಾಗೂ ಕುಷ್ಟಗಿಯಲ್ಲಿ ಮೋಡ ಕವಿದ ವಾತಾವರಣವಿತ್ತು.

Advertisement

ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ರೈತಾಪಿ ವರ್ಗವು ಕೃಷಿ ಚಟುವಟಿಕೆಯಲ್ಲಿ ಖುಷಿಯಿಂದಲೇ ತೊಡಗಿಕೊಂಡಿದೆ. ಉತ್ತಮ ಮಳೆಗಳ ನಿರೀಕ್ಷೆಯಲ್ಲಿಯೇ ಬಿತ್ತನೆಗೆ ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ವಿವಿಧ ಹೋಬಳಿಗಳಲ್ಲಿ ಮುಂಗಾರು ಪೂರ್ವ ಮಳೆಗಳು ಉತ್ತಮವಾಗಿ ಸುರಿದಿದ್ದು, ರೈತರು ಭೂಮಿ ಹಸನ ಮಾಡಿಕೊಂಡಿದ್ದಾರೆ. ಯಲಬುರ್ಗಾ ಭಾಗ ಹೆಸರು ಬಿತ್ತನೆ ಕಾರ್ಯ ನಡೆದಿವೆ. ಇನ್ನೂ ಸೋಮವಾರ ಕುಕನೂರು ತಾಲೂಕಿನ ಚಿಕ್ಕೇನಕೊಪ್ಪ, ಬಿನ್ನಾಳ, ಭಟಪ್ಪನಹಳ್ಳಿ, ಯರೆ ಹಂಚಿನಾಳ ಸೇರಿದಂತೆ ಇತರೆ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದ್ದು ರೈತರಲ್ಲಿ ಖುಷಿ ಮೂಡಿಸಿದೆ.

ಇನ್ನು ಕೊಪ್ಪಳ ತಾಲೂಕಿನ ವಿವಿಧ ಹೋಬಳಿಯಲ್ಲಿ ಜಿನುಗು ಮಳೆಯಾಗಿದೆ. ಗುಡುಗು-ಸಿಡಿಲಿನ ಆರ್ಭಟವೂ ಜೋರಾಗಿತ್ತು. ಆದರೆ ಅಂತಹ ದೊಡ್ಡ ಮಟ್ಟದ ಮಳೆಯಾಗಿಲ್ಲ. ಇನ್ನೂ ಗಂಗಾವತಿ, ಕನಕಗಿರಿ, ಕುಷ್ಟಗಿ ತಾಲೂಕು ವ್ಯಾಪ್ತಿಯಲ್ಲೂ ಸಂಜೆ ಮೋಡ ಕವಿದ ವಾತಾವರಣವಿದ್ದರೆ ಕೆಲವು ಗ್ರಾಮಗಳಲ್ಲಿ ತುಂತುರು ಮಳೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next