Advertisement
ನಮ್ಮ ಮುಂದಿನ ಜನಾಂಗ ಅಭಿಮಾನ ಪೂರಕವಾಗಿ ಕನ್ನಡ, ಕನ್ನಡಿಗ, ಕರ್ನಾಟಕತ್ವ ಹೃದಯದಲ್ಲಿ ಸದಾ ಜಾಗೃತವಾಗಿರಬೇಕು. ಆಗ ಮಾತ್ರ ಈ ರಾಜ್ಯ ರಚನೆಯ ಸಾರ್ಥಕತೆ ಬರುವುದು ಎಂದರು.
Related Articles
Advertisement
ಸರ್ಕಾರಿ ಶಾಲಾ ಕಾಲೇಜುಗಳು ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆಂದು ನಡೆಯುತ್ತಾ, ಕುದೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಉದ್ಘಾಟನೆಗೊಂಡು 25 ವರ್ಷ ಕಳೆದಿದೆ. ಹಾಗಾಗಿ ಈ ಸವಿನೆನಪಿಗೆ ಕಾಲೇಜಿನಲ್ಲಿ ರಚತ ಮಹೋತ್ಸವವನ್ನು ಮುಂದಿನ ಜನವರಿ ತಿಂಗಳಲ್ಲಿ ಅದ್ದೂರಿಯಾಗಿ ಆಚರಿಸೋಣವೆಂದ ಅವರು, ವಿದ್ಯಾರ್ಥಿಗಳ ಶಿಕ್ಷಣ ಮತ್ತು ಕಾಲೇಜಿನ ಅಭಿವೃದ್ಧಿಗೆ ಸದಾ ಶ್ರಮಿಸುತ್ತೇನೆ ಎಂದು ಭರವಸೆಯಿತ್ತರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕನ್ನಡದ ನಿವೃತ್ತ ಪ್ರಾಧ್ಯಾಪಕ ಡಾ. ಬಿ.ಟಿ ನೇತ್ರಾವತಿ ಗೌಡ ವಿದ್ಯಾರ್ಥಿಗಳನ್ನು ಕುರಿತು ಕನ್ನಡದ ಮಹತ್ವ, ಕನ್ನಡಿಗರ ಅಭಿಮಾನದ ಪರಂಪರೆಯ ಹಿನ್ನೆಲೆ, ಕನ್ನಡದ ಪ್ರಸ್ತುತ ಸಂದರ್ಭದಲ್ಲಿ ಸ್ಥಿತಿ, ಕನ್ನಡ ಭಾಷೆಯ ಧ್ವನ್ಯಾಂಗ ವ್ಯವಸ್ಥೆ, ಕನ್ನಡಿಗರ ಸಾರ್ವಭೌಮತ್ವವನ್ನು ತಿಳಿಸಿದರು.
ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಭವಿಷ್ಯವನ್ನು ಎದುರಿಸುತ್ತಿರುವ ಆತಂಕದ ಕ್ಷಣಗಳನ್ನು ನುಡಿಯುತ್ತಾ, ವಿದ್ಯಾರ್ಥಿಗಳು ತಮ್ಮ ಏಕಾಗ್ರತೆಯ ಮನಸ್ಸನ್ನು ದೃಢೀಕರಿಸುತ್ತಾ, ಆತ್ಮವಿಶ್ವಾಸದಿಂದ ತನ್ಮಯತೆಯನ್ನು ಹೊಂದುವಂಥ ಸ್ವಭಾವವನ್ನ ಹೊಂದಬೇಕೆಂದು ತೇಜಸ್ವಿಯವರ ಕರ್ವಾಲೋ ಕಾದಂಬರಿಯ ಅನುಭವದ ಜೊತೆಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಗುರುಮೂರ್ತಿ ಕೆ.ಎಚ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಇಂದಿನ ದಿನಮಾನದಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ರೂಪಿಸುವಲ್ಲಿ ಕಾರ್ಯಯೋನ್ಮುಖರಾಗಿದ್ದೇವೆ. ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸುವ, ಸಮಾಜದಲ್ಲಿ ದೃಢವಾಗಿ ನಿಲ್ಲುವ ಆತ್ಮವಿಶ್ವಾಸವನ್ನು ಮತ್ತು ಶಿಸ್ತನ್ನು ರೂಢಿಸುವಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿರುವುದನ್ನು ವಿವರಿಸಿದರು. ಕಾಲೇಜಿನ ಹಲವು ಕಾರ್ಯಯೋಜನೆಯ ಬಗ್ಗೆ ಶಾಸಕರಿಗೆ ಕಾಲೇಜಿನ ಅಭಿವೃದ್ಧಿಯ ಸದಸ್ಯರಿಗೆ ವಿನಂತಿಸಿದರು.
ಕಾರ್ಯಕ್ರಮದಲ್ಲಿ ಕುದೂರು ಗ್ರಾಮದ ಮುಖಂಡರಾದ ಕೆಇಬಿ ರಾಜಣ್ಣ, ಹನುಮಂತಪ್ಪ, ಪ್ರಕಾಶ್, ಬೋರ್ವೆಲ್ ಗಿರೀಶ್, ಜಯರಾಮಣ್ಣ, ಯತೀಶ್, ವಿನಯ್, ಮರಿಗೌಡ್ರು ಯಾಸಿನ್, ಕುಮಾರ್, ಕಾಲೇಜಿನ ಬೋಧಕ ಮತ್ತು ಬೋಧಕೇತರು ಮತ್ತು ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಡಾ. ಮುರಳಿ ಕೂಡ್ಲೂರು ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಸಮಿತಿಯ ಸಂಚಾಲಕ ದೇವರಾಜ್ ಸ್ವಾಗತಿಸಿ ಜಗದೀಶ್ ಜೆ ಹೊಂದಿಸಿದರು.