ಕುದೂರು : ಹೋಬಳಿಯಾದ್ಯಂತ ಇಂದು ಮಧ್ಯಾಹ್ನ ಸುರಿದ ಬಿರುಗಾಳಿ ಸಹಿತ ಮಳೆಗೆ ಹಲವು ಕಡೆ ಬೃಹತ್ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ ಕುದೂರು ಹೋಬಳಿಯ ಹುಲಿಕಲ್ ಗ್ರಾಮದಲ್ಲಿ ಸಾಲುಮರದ ತಿಮ್ಮಕ್ಕ ಬೆಳೆಸಿದ ಬೃಹತ್ ಗಾತ್ರದ ಮರವೊಂದು ಬಿರುಗಾಳಿ ಮಳೆಗೆ ಸಿಲುಕಿ ಮರವೊಂದು ರಸ್ತೆಗೆ ಅಡ್ಡಬಿದ್ದ ಪರಿಣಾಮ ಮರದ ಕೆಳೆಗೆ ನಿಲ್ಲಿಸಿದ್ದ ಟಾಟಾ ಎಸ್ ವಾಹನದ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಟಾಟಾ ಏಸ್ ಸಂಪೂರ್ಣ ಜಖಂಗೊಂಡಿದೆ.
ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ .ಬೆಂಗಳೂರಿನ ಕೋರಮಂಗಲದವರು ದೇವರ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಹುಲಿಕಲ್ ಗ್ರಾಮದ ಬಳಿ ಬಿಸಿಲಿಗೆ ಸ್ವಲ್ಪ ಹೊತ್ತು ನಿಲ್ಲಿಸಿ ವಿಶ್ರಾಂತಿ ಪಡೆದು ಹೋಗೋಣ ಎಂದು ಆಲದ ಮರದ ಕೆಳಗೆ ನಿಲ್ಲಿಸಿದ್ದರು.
ಇಂದು ಮಧ್ಯಾಹ್ನ ಸುರಿದ ಬಿರುಗಾಳಿ ಸಹಿತ ಮಳೆಗೆ ಸಾಲು ಮರದ ತಿಮ್ಮಕ್ಕ ನೆಟ್ಟಿದ್ದ ಆಲದ ಮರ ಒಂದು ಬಿದ್ದ ಪರಿಣಾಮ ವಾಹನ ಸಂಪೂರ್ಣ ಜಖಂಗೊಂಡಿದೆ. ತುಮಕೂರು -ಕುದೂರು ರಸ್ತೆ ಸಂಚಾರ ಬಂದ್ ಆಗಿದೆ.
ಇದನ್ನೂ ಓದಿ : ನಮ್ ಹೆಣದ್ ಮ್ಯಾಲ್ ಕಾರ್ಖಾನೆ ಕಟ್ರಿ : ಶ್ರೀ ಸಿಮೆಂಟ್ ಕಾರ್ಖಾನೆ ವಿರುದ್ಧ ರೈತರ ಆಕ್ರೋಶ