Advertisement
ಕುದೂರಿನಲ್ಲಿ ಟಯೋಟಾ ಕಾರ್ಲೋಸ್ಕರ್ ಸಹಯೋಗದೊಂದಿಗೆ ಕೆಪಿಎಸ್ ಶಾಲಾ ಕಟ್ಟಡ ಶಂಕು ಸ್ಥಾಪನೆ, ಪಟ್ಟಣದಲ್ಲಿ ಪಾರ್ಕ್ ಅಭಿವೃದ್ಧಿಗೆ ಶಂಕುಸ್ಥಾಪನೆ, ಬಯಲು ರಂಗ ಮಂದಿರಕ್ಕೆ ಶಂಕುಸ್ಥಾಪನೆ, ರೈತರಿಗೆ ಸಾಗುವಳಿ ಚೀಟಿ ಹಾಗೂ ಹಕ್ಕು ಪತ್ರ ವಿತರಣೆ ಕಾರ್ಯಕ್ರಮಗಳು ಒಂದೇ ವೇದಿಕೆಯಲ್ಲಿ ನಡೆದವು.
Related Articles
Advertisement
ಗೃಹಲಕ್ಷ್ಮಿ ಸಮಸ್ಯೆ ಶೀಘ್ರ ಪರಿಹಾರ: ಶೇ.88 ರಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪಿದೆ. ಉಳಿದ ಅರ್ಜಿದಾರರಿಗೆ ಬ್ಯಾಂಕ್ ಸಮಸ್ಯೆ, ಆದಾರ್ ಲಿಂಕ್ ಗಳು ಸರಿಯಾಗಿ ಆಗದ ಕಾರಣ ಹಣ ತಲುಪಿಲ್ಲ. ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದರು.
ಸಚಿವ ರಾಮಲಿಂಗರೆಡ್ಡಿ ಭಾಷಣದ ಮಧ್ಯೆ ಶಾಸಕ ಬಾಲಕೃಷ್ಣ ಕುದೂರಿನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ ವ್ಯವಸ್ಥೆ ಮಾಡುವಂತೆ ಚೀಟಿ ಬರೆದು ಕಳುಹಿಸಿದರು. ಮೂದಲು ಜಾಗ ನಮ್ಮ ಇಲಾಖೆಗೆ ವರ್ಗಾವಣೆ ಮಾಡಿ ನಂತರ ಕೆಲಸ ಪ್ರರಂಭ ಮಾಡೋಣ ಎಂದರು.
ಸಂಸದ ಡಿ.ಕೆ.ಸುರೇಶ್ ಮಾತನಾಡಿ, ರಾಜ್ಯದಲ್ಲಿ ಸಾವಿರ ಮಾದರಿ ಶಾಲೆಗಳನ್ನು ನಿರ್ಮಾಣ ಮಾಡುವುದು ಡಿ.ಕೆ.ಶಿ. ಅವರ ಕನಸಿನ ಕೂಸು. ಹೀಗಾಗಿ ಕುದೂರಿನ ಮೂಲಕ ಇಂತಹ ಯೂಜನೆಗೆ ಅಡಿಗಲ್ಲು ಹಾಕಲಾಗಿದೆ ಎಂದರು.
ನಮ್ಮ ವಿರುದ್ದ ಟೀಕೆಗಳು ನಡೆಯುತ್ತಲೆ ಇದೆ. ರಾಜ್ಯದ ಜನ ನಮ್ಮ ಗ್ಯಾರಂಟಿಗಳ ಮೂಲಕ ಖುಷಿಯಾಗಿದ್ದಾರೆ. ಗ್ಯಾರಂಟಿಗೆ ಮಾತ್ರವಲ್ಲ ಶಿಕ್ಷ ಣ ಹಾಗೂ ಆರೋಗ್ಯಕ್ಕೂ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಶಾಸಕ ಹೆಚ್.ಸಿ.ಬಾಲಕೃಷ್ಣ ಮಾತನಾಡಿ, ನಮ್ಮ ಸರ್ಕಾರದ ಗ್ಯಾರಂಟಿ ಯೋಜನಗಳಿಂದ ಜನತೆಗೆ ಉಪಕಾರವಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಸಿದ್ದಗಂಗಾ ಶ್ರೀಗಳ ಪುತ್ಥಳಿ ಕಾರ್ಯವನ್ನು ನಿಲ್ಲಿಸಿದ್ದಾರೆ. ಅದನ್ನು ನಾವು ಮುಂದುವರೆಸುತ್ತೇವೆ ಎಂದರು.
ಕಳ್ಳರ ಕೈಚಳ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕಾರ್ಯಕ್ರಮದಲ್ಲಿ ಕಳ್ಳನೂಬ್ಬ ಶಾಸಕರ ಅಪ್ತ ಸಹಾಯಕರ ಲೂಕೇಶ್ ಜೇಬಿನಿಂದ 50 ಸಾವಿರ ಎಗರಿಸಿ ತನ್ನ ಕೈಚಳಕ ತೋರಿಸಿದ್ದಾನೆ. ಇದಕ್ಕೂ ಮುನ್ನ ಮರೂರು ಹ್ಯಾಂಡ್ ಪೋಸ್ಟ್ ಬಳಿ ಡಿಕೆಶಿಗೆ ಸ್ವಾಗತ ಕೂರುವ ವೇಳೆ ಕಾಂಗ್ರೆಸ್ ಮುಖಂಡ ಬಾಬು ಅವರ ಜೇಬಿಗೂ ಕತ್ತರಿ ಹಾಕಿ 4 ಸಾವಿರ ರೂ. ಎಗರಿಸಿದ್ದಾರೆ.
ಕಾದು ಹೈರಾಣಾದ ಮಕ್ಕಳು; ಕಾರ್ಯಕ್ರಮದಲ್ಲಿ ಮಕ್ಕಳೇ ವೇದಿಕೆ ಮುಂದಿನ ಸೀಟುಗಳಲ್ಲಿ ಅತಿಥಿಗಳಾಗಿ ಕುಳಿತಿದ್ದರು. ಮಕ್ಕಳಿಗೆ ಮಧ್ಯ ವಾರ್ಷಿಕ ಪರೀಕ್ಷೆ ಇತ್ತಾದರೂ ಅದನ್ನೂ ಮುಂದೂಡಲಾಗಿತ್ತು. ಬೆಳಗ್ಗೆ 10.30 ಕ್ಕೆ ನಡೆಯುವ ಕಾರ್ಯಕ್ರಮ ಮಧ್ಯಾಹ್ನ 1.30 ಕ್ಕೆ ಆರಂಭಗೊಂಡಿತ್ತು. ಡಿಕೆಶಿಗೆ ಬ್ಯಾಂಡ್ ಸೆಟ್, ಪೂರ್ಣಕುಂಭದ ಮೂಲಕ ಸ್ವಾಗತ ಕೋರಲು ತಯಾರಾಯಾಗಿದ್ದ ಮಕ್ಕಳು ಕಾದು ಕಾದು ಹೈರಾಣಾದರು.