Advertisement

ಮನೆ ಬಾಗಿಲಿಗೆ ಸರ್ಕಾರಿ ಸೇವೆ: ಎ.ಮಂಜು

09:05 AM Feb 20, 2022 | Team Udayavani |

ಕುದೂರು: ಹಳ್ಳಿಗಳ ಜನರು ಸಣ್ಣಪುಟ್ಟ ಸಮಸ್ಯೆಗಳಿಗೂ ಜಿಲ್ಲಾಧಿಕಾರಿ, ತಹಶೀಲ್ದಾರ್‌ ಕಚೇರಿಗೆ ಅಲೆಯುವುದನ್ನುತಪ್ಪಿಸಲು ಸರ್ಕಾರ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಗಳ ಕಡೆಗೆಕಾರ್ಯಕ್ರಮ ರೂಪಿಸಿದೆ ಎಂದು ಶಾಸಕ ಎ.ಮಂಜುನಾಥ್‌ ಹೇಳಿದರು.

Advertisement

ಮಾಗಡಿ ತಾಲೂಕು ತಿಪ್ಪಸಂದ್ರ ಹೋಬಳಿಯ ಹುಳ್ಳೇನಹಳ್ಳಿ ಗ್ರಾಪಂ ವ್ಯಾಪ್ತಿಯ ದ್ಯಾವಯ್ಯನಪಾಳ್ಯ ಗ್ರಾಮದಲ್ಲಿ ಕಂದಾಯ ಇಲಾಖೆ, ಮಾಗಡಿ ತಾಲೂಕು ಆಡಳಿತ, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಹಯೋಗದೊಂದಿಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗ್ರಾಮದ ಎಲ್ಲ ರೈತರಿಗೆ ಇಲಾಖೆಯ ಸವಲತ್ತುಗಳನ್ನು ನೇರವಾಗಿ ತಮ್ಮ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮ ಇದಾಗಿದ್ದು. ಎಲ್ಲರೂ ಸದ್ಬಳಕೆ ಮಾಡಿ ಕೊಳ್ಳಬೇಕು ಎಂದು ತಿಳಿಸಿದರು.

ಸಮಸ್ಯೆ ಬಗೆಹರಿಸಿಕೊಳ್ಳಿ: ಹುಳ್ಳೇನಹಳ್ಳಿ ಗ್ರಾಪಂ ವ್ಯಾಪ್ತಿಯ ದ್ಯಾವಯ್ಯನಪಾಳ್ಯ ತಾಲೂಕಿನ ಗಡಿಗ್ರಾಮವಾಗಿದ್ದು, ಈ ಗ್ರಾಮದಲ್ಲಿ ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಲವು ಯೋಜನೆಗಳ ಬಗ್ಗೆ ಮತ್ತು ಇಲಾಖೆಯ ಸವಲತ್ತು ಹಾಗೂ ಸಾರ್ವಜನಿಕರು ಬಹುತೇಕ ರೈತರು ತಮ್ಮ ಸಮಸ್ಯೆ ನೇರವಾಗಿ ಆಯಾ ಇಲಾಖೆ ಕೌಂಟರ್‌ಗಳಲ್ಲಿ ಅರ್ಜಿಗಳನ್ನು ಸ್ವೀಕರಿಸಿ ತಕ್ಷಣ ಅಧಿಕಾರಿಯ ಗಮನಕ್ಕೆ ತಂದು ಸ್ಥಳದಲ್ಲಿಯೇ ರೈತರಿಗೆ ಪರಿಹಾರ ಒದಗಿಸಲಾಯಿತು.

ಮೂಲ ಸಮಸ್ಯೆಗಳು: ಪಿಂಚಣಿ,ಆಶ್ರಯಯೋಜನೆ, ಪೌತಿಖಾತೆ, ಪಹಣಿ ತಿದ್ದುಪಡಿ, ಭೂಒತ್ತುವರಿ ತೆರವು, ಮತದಾರರ ಪಟ್ಟಿ ಪರಿಷ್ಕರಣೆ ಅರ್ಹ ಕುಟುಂಬಗಳಿಗೆ ಬಿಪಿಎಲ್‌ ಕಾರ್ಡ್‌, ಪೋಡಿ ಪ್ರಕರಣ ಇತ್ಯರ್ಥದ ಬಗ್ಗೆ ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ಕ್ರಮ ಕೈಗೊಳ್ಳಲಾಯಿತು.

Advertisement

ಮಹಾತ್ವಕಾಂಕ್ಷಿ ಕಾರ್ಯಕ್ರಮ: ತಹಶೀಲ್ದಾರ್‌ ಬಿ.ಜಿ.ಶ್ರೀನಿವಾಸ್‌ ಪ್ರಸಾದ್‌ ಮಾತನಾಡಿ, ಗ್ರಾಮಗಳಲ್ಲಿನ ಜನರಿಗೆ ಸರ್ಕಾರದ ಸೌಲಭ್ಯ ಅಲ್ಲಿನ ಕುಂದುಕೊರತೆ ನಿವಾರಣೆಗಾಗಿ ಸರ್ಕಾರ ಈ ಮಹಾತ್ವಕಾಂಕ್ಷಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಗ್ರಾಮಸ್ಥರು ಈ ಕಾರ್ಯಕ್ರಮದ ಸದುಪ ಯೋಗ ಪಡೆದುಕೊಳ್ಳಬೇಕು. ಕೆಲವೊಮ್ಮೆ ತಾಂತ್ರಿಕ ದೋಷದಿಂದ ಗ್ರಾಮಸ್ಥರ ಕಾರ್ಯ ಆಗಿರುವುದಿಲ್ಲ.

ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯ ರಸ್ತೆ, ಸ್ವಚ್ಛತೆ, ಸೇತುವೆ, ಕುಡಿಯುವ ನೀರು, ಕೂಡ ಸ್ಥಳದಲ್ಲಿಯೇ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ತಾಲೂಕು ಮಟ್ಟದ ಅಧಿಕಾರಿಗಳುಹಾಜರಿರುತ್ತಾರೆ. ಸರ್ಕಾರದ ಯೋಜನೆಗಳ ಮಾಹಿತಿ ಜನ ಸಾಮಾನ್ಯರಿಗೆ ತಿಳಿಸಲು ಸಂಬಂಧಪಟ್ಟ ಎಲ್ಲ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದಾರೆ.

ವಿಶೇಷವಾಗಿ ಸರ್ವೆ ಇಲಾಖೆ, ಪಡಿತರ ಚೀಟಿ, ಮಾಸಾಶನ,ವಿಧವಾ ವೇತನ, ಸಂಧ್ಯಾಸುರಕ್ಷ ಇತ್ಯಾಧಿಗಳನ್ನು ಸ್ಥಳದಲ್ಲಿಯೇ ಮಂಜೂರು ಮಾಡಲಾಗುವುದು ಎಂದರು. ಒಟ್ಟು 102 ಅರ್ಜಿಗಳು ಬಂದಿದ್ದು ಅದರಲ್ಲಿ ಸ್ಥಳದಲ್ಲೇ 10 ಅರ್ಜಿಗಳು ವಿಲೇವಾರಿಯಾಗಿ ಪರಿಹಾರ ದೊರೆತಿದೆ.

ಈ ಸಂದರ್ಭದಲ್ಲಿ ಉಪತಹಶೀಲ್ದಾರ್‌ ಮಂಜುನಾಥ್‌, ಇಒ ಪ್ರದೀಪ್‌, ಗ್ರಾಪಂ ಅಧ್ಯಕ್ಷೆ ಪದ್ಮ ದೇವೇಂದ್ರಕುಮಾರ್‌, ಬಲರಾಮ,ಅಬಿಜುಲ್ಲಾ, ದಕ್ಷಿಣಮೂರ್ತಿ, ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next