Advertisement

ಕುಡುಪು: ಬ್ರಹ್ಮರಥೋತ್ಸವಕ್ಕೆ  ಸಾವಿರಾರು ಭಕ್ತರ ದಂಡು

11:14 AM Dec 14, 2018 | |

ವಾಮಂಜೂರು (ಕುಡುಪು) : ಶ್ರೀ ಅನಂತ ಪದ್ಮನಾಭ ದೇವಸ್ಥಾನ ಕುಡುಪಿನಲ್ಲಿ ನಡೆದ ಷಷ್ಠಿ ಮಹೋತ್ಸವದ ಸಂಭ್ರಮ ಮುಗಿಲು ಮುಟ್ಟಿದ್ದು, ಮಧ್ಯಾಹ್ನದ ವೇಳೆ ನಡೆದ ಬ್ರಹ್ಮರಥೋತ್ಸವಕ್ಕೆ ಸಾವಿರಾರು ಮಂದಿ ಭಕ್ತರು ಆಗಮಿಸಿ ದೇವರ ದಿವ್ಯ ದರ್ಶನ ಪಡೆದರು.

Advertisement

ಬೆಳಗ್ಗಿನಿಂದಲೇ ಜಿಲ್ಲೆಯ ನಾನಾ ಕಡೆಗಳಿಂದ ಆಗಮಿಸಿದ ಭಕ್ತರು ಸರದಿ ಸಾಲಿನಲ್ಲಿ ನಿಂತು ಅನಂತಪದ್ಮನಾಭನ ದರ್ಶನ ಪಡೆದರು. ಹಲವು ಭಕ್ತರು ಮಡೆಸ್ನಾನದಲ್ಲಿ ಪಾಲ್ಗೊಂಡರು. ದೇಗುಲದ ಹಿಂಭಾಗದಲ್ಲಿರುವ ನಾಗಬನದಲ್ಲಿ ದೇವರ ದರ್ಶನ ಪಡೆದರು. ಅನಂತ ಪದ್ಮನಾಭನ ಪ್ರೀತ್ಯರ್ಥ ವಾಗಿರುವ ತಂಬಿಲ ಸೇವೆ, ಆಶ್ಲೇಷಾ, ಸೀಯಾಳ ಅಭಿಷೇಕ, ಪಂಚಾಮೃತ, ಕ್ಷೀರಾಭಿಷೇಕ ಹರಕೆ ಸಲ್ಲಿಸಿದರು. ಬೆಳ್ಳಿ ಹರಕೆ ಸಮರ್ಪಿಸಿದರು.

ಬ್ರಹ್ಮರಥೋತ್ಸವ
ನವಕಲಷಾಭಿಷೇಕ, ರಥ ಕಲಶ ಮಹಾ ಪೂಜೆ ನಡೆದ ಬಳಿಕ ದೇವರ ಬಲಿ ಉತ್ಸವ ನಡೆದು ಮಧ್ಯಾಹ್ನ ರಥಬೀದಿಯಲ್ಲಿ ಬ್ರಹ್ಮರಥೋತ್ಸವ ನಡೆಯಿತು.  ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ರಾದ ಕುಡುಪು ನರಸಿಂಹ ತಂತ್ರಿ, ಕೃಷ್ಣ ರಾಜ ತಂತ್ರಿ, ಆನುವಂಶಿಕ ಅರ್ಚಕ ಮನೋಹರ ಭಟ್‌, ಪವಿತ್ರಪಾಣಿ ಬಾಲಕೃಷ್ಣ ಭಟ್‌, ಕ್ಷೇತ್ರದ ಆಡಳಿತ ಮೊಕ್ತೇಸರ ಭಾಸ್ಕರ್‌ ಕೆ., ಕಾರ್ಯನಿರ್ವಹಣಾಧಿಕಾರಿ ಅರವಿಂದ ಎ. ಸುತಗುಂಡಿ, ಸುಜನ್‌ ದಾಸ್‌ ಕುಡುಪು, ವಾಸುದೇವ ರಾವ್‌ ಕುಡುಪು, ಉದಯಕುಮಾರ್‌ ಕುಡುಪು ಇದ್ದರು.

ಸ್ಥಳೀಯರಿಂದ ಮಜ್ಜಿಗೆ ವಿತರಣೆ
ಬಿಸಿಲಿನ ಝಳಕ್ಕೆ ಬಾಯಾರಿದವರಿಗಾಗಿ ಸ್ಥಳೀಯ ಯುವಕರ ಸಹಕಾರದಿಂದ ಮಜ್ಜಿಗೆಯ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಮಜ್ಜಿಗೆ ಸೇವಿ ಸಿದರು. ಬುಧವಾರ ರಾತ್ರಿ ರಾತ್ರಿ ಸವಾರಿ ಬಲಿ, ಕಟ್ಟೆಪೂಜೆಗಳು, ತೆಪ್ಪೋತ್ಸವ, ಎರಡನೇ ಬಲಿ ಉತ್ಸವ, ಚಂದ್ರಮಂಡಲ ಉತ್ಸವ, ಅಶ್ವವಾಹನೋತ್ಸವ, ಪಾಲಕಿ ಉತ್ಸವ ನಡೆದ ಬಳಿಕ ಪ್ರಸಾದ ವಿತರಣೆ ನಡೆದಿತ್ತು.

ಪಾರ್ಕಿಂಗ್‌ ಸಮಸ್ಯೆ
ಜಿಲ್ಲೆಯನ್ನಲ್ಲದೆ ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸಿದ್ದರಿಂದ ಪಾರ್ಕಿಂಗ್‌ ಸಮಸ್ಯೆ ತಲೆದೋರಿತ್ತು. ಸ್ವಯಂ ಸೇವಕರು, ಟ್ರಾಫಿಕ್‌ ಪೊಲೀಸರು ಹಾಗೂ ಪೊಲೀಸರು ಟ್ರಾಫಿಕ್‌ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೋಡಿಕೊಂಡರು.

Advertisement

ಸಾರಿಗೆ ವಾಹನಗಳಿಗೆ ನಿರ್ಬಂಧ
ಕುಡುಪು ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ ಇದ್ದ ಕಾರಣ 12.30ರ ಬಳಿಕ ನೀರುಮಾರ್ಗ ಕ್ರಾಸ್‌ ಹಾಗೂ ವಾಮಂಜೂರು ಮಂಗಳಜ್ಯೋತಿ ಸಮೀಪದ ಮಂಗಳೂರು ಕ್ರಾಸ್‌ ವರೆಗೆ ಸಾರಿಗೆ ವಾಹನಗಳಿಗೆ ನಿರ್ಬಂಧ ಹೇರಿದ್ದು, ಕೇವಲ ದೇವಸ್ಥಾನಕ್ಕೆ ಬರುವ ಭಕ್ತರ ವಾಹನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಬ್ರಹ್ಮರಥವು ದೇವಸ್ಥಾನದ ರಥಬೀದಿಯಲ್ಲಿ ಸಾಗಿ ಕುಡುಪು ಕಟ್ಟೆಗೆ ಬಂದು ಯಥಾಸ್ಥಾನದಕ್ಕೆ ತೆರಳಿ ನಿಲ್ಲುವವರೆಗೆ ಈ ನಿರ್ಬಂಧ ವಿಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಮೂಡುಬಿದಿರೆ-ಕಾರ್ಕಳಕ್ಕೆ ಸಾಗುವ ವಾಹನಗಳು ನಂತೂರಿನಿಂದ ಕೆಪಿಟಿ ರಸ್ತೆಯಾಗಿ ಪಚ್ಚನಾಡಿ ಬೋಂದೆಲ್‌ ಮುಖಾಂತರ ವಾಮಂಜೂರಿಗೆ ಸಾಗಿ ಬಂದು ತಮ್ಮ ಗಮ್ಯ ಸ್ಥಾನವನ್ನು ತಲುಪಿದವು. ಈ ಕಾರಣದಿಂದ ಮಂಗಳೂರಿಗೆ ಸಾಗುವ ಭಕ್ತರು ದೇವಸ್ಥಾನದಿಂದ ನೀರುಮಾರ್ಗ ಕ್ರಾಸ್‌ ತನಕ, ಕುಡುಪುನಿಂದ ಗುರುಪುರ, ಕೈಕಂಬ ಮುಂತಾದ ಕಡೆ ಸಾಗುವ ಭಕ್ತರು ವಾಮಂಜೂರಿನ ಮಂಗಳಜ್ಯೋತಿ ತನಕ ಸುಮಾರು 1 ಕಿ.ಮೀ. ವರೆಗೆ ನಡೆದುಕೊಂಡು ಸಾಗಿದ್ದಾರೆ. ರಿಕ್ಷಾ ಬಾಡಿಗೆಗೆ ವ್ಯವಸ್ಥೆ ಮಾಡಿದ್ದರಿಂದ ರಿಕ್ಷಾ ಚಾಲಕರ ಮೊಗದಲ್ಲಿ ಸಂತಸ ಮೂಡಿತ್ತು.

ನಿರಂತರ ಅನ್ನದಾನ 
ಭಕ್ತರ ಅನುಕೂಲಕ್ಕಾಗಿ ಕುಡುಪು ದೇವಸ್ಥಾನದಲ್ಲಿ ನಿರತಂತರ ಅನ್ನದಾನವನ್ನು ಬೆಳಗ್ಗಿನಿಂದಲೇ ಕಲ್ಪಿಸಲಾಗಿತ್ತು. ಭಕ್ತರಿಗೆ ಯಾವುದೇ ಅನನುಕೂಲವಾಗದಂತೆ 15 ಕೌಂಟರ್‌ಗಳಲ್ಲಿ ಅನ್ನದಾನಕ್ಕೆ ವ್ಯವಸ್ಥೆ ಮಾಡಿದ್ದರಿಂದ ಯಾವುದೇ ನೂಕುನುಗ್ಗಲು ಉಂಟಾಗಿಲ್ಲ. ಸಂಜೆಯ ತನಕವೂ ನಿರಂತರ ಅನ್ನದಾನ ನಡೆದಿದ್ದು, ಸಾವಿರಾರು ಮಂದಿ ಭಕ್ತರು ಭೋಜನ ಸವಿದಿದ್ದಾರೆ. ಸ್ವಯಂಸೇವಕರು ಭೋಜನ ಬಡಿಸುವ ಸೇವೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಜೋಡು ದೇವರ ಉತ್ಸವ 
ಷಷ್ಠಿ ಮಹೋತ್ಸವದ ಪ್ರಯುಕ್ತ ಶುಕ್ರವಾರ ಬೆಳಗ್ಗೆ ಜೋಡು ದೇವರ ಉತ್ಸವ ನಡೆಯಲಿದ್ದು, ಕುಡುಪುವಿನಲ್ಲಿ ಇದು ವಿಶೇಷವಾಗಿರುವುದರಿಂದ ಇದಕ್ಕೂ ಸಾವಿರಾರು ಭಕ್ತರು ಸೇರು ವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next