Advertisement

ಕುಟುಂಬಶ್ರೀ ಸ್ವಸಹಾಯ ಸಂಘ ಇತರ ರಾಜ್ಯಗಳಿಗೆ ಮಾದರಿ: ಚಂದ್ರಶೇಖರನ್‌

10:57 PM Nov 16, 2019 | Sriram |

ಕಾಸರಗೋಡು: ಸಮಾಜದಲ್ಲಿ ಏಕಾಂಗಿಯಾಗಿ ಬದುಕುತ್ತಿದ್ದು, ಅನೇಕ ಸಂಕಷ್ಟ ಅನುಭವಿಸುತ್ತಿರುವವರಿಗೆ ಬೆಂಬಲ ನೀಡಿ, ಸಹಾಯ ಒದಗಿಸುವ ನಿಟ್ಟಿನಲ್ಲಿ ರಚಿಸಿರುವ ಯೋಜನೆ “ಸ್ನೇಹಿತೆ ಕಾಲಿಂಗ್‌ ಬೆಲ್‌’ನ ಸಪ್ತಾಹ ಆರಂಭಗೊಂಡಿತು.

Advertisement

ನ.21 ವರೆಗೆ ಈ ಸಪ್ತಾಹ ನಡೆಯಲಿದೆ. ಈ ಕಾರ್ಯಕ್ರಮದ ಜಿಲ್ಲಾ ಮಟ್ಟದ ಉದ್ಘಾಟನೆ ಚೆಮ್ನಾಡ್‌ ಗ್ರಾಮ ಪಂಚಾಯತ್‌ ಸಭಾಂಗಣದಲ್ಲಿ ಜರುಗಿತು. ಕುಟುಂಬಶ್ರೀ ಜಿಲ್ಲಾ ಮಿಷನ್‌ ವತಿಯಿಂದ, ಚೆಮ್ನಾಡ್‌ ಗ್ರಾಮ ಪಂಚಾಯತ್‌, ಕುಟುಂಬಶ್ರೀ ಸಿ.ಡಿ.ಎಸ್‌. ಸಹಕಾರೊಂದಿಗೆ ಕಾರ್ಯಕ್ರಮ ನಡೆಯಿತು. ಕಂದಾಯ ಸಚಿವ ಇ.ಚಂದ್ರಶೇಖರನ್‌ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು ರಾಜ್ಯ ಸಾಮಾಜಿಕ-ಆರ್ಥಿಕ ವಲಯಗಳಲ್ಲಿ ಕುಟುಂಬಶ್ರೀ ಸ್ವಸಹಾಯ ಸಂಘ ವಹಿಸುತ್ತಿರುವ ಪಾಲುದಾರಿಕೆ ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದರು.

ಶಾಸಕ ಕೆ.ಕುಂಞಿರಾಮನ್‌ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್‌ ಮಟ್ಟದ ನೆರೆಕೂಟಗಳ ವ್ಯಾಪ್ತಿಯಲ್ಲಿ ಏಕಾಂಗಿಯಾಗಿ ಬದುಕು ಸವೆಸುತ್ತಿರುವವರನ್ನು ಪತ್ತೆಮಾಡಲಾಗಿದ್ದು, ಅವರಿಗೆ ಪೋಷಕಾಹಾರಗಳ ಕಿಟ್‌ ವಿತರಣೆ ನಡೆಸಲಾಗುತ್ತಿದೆ. ಈ ಕಿಟ್‌ ವಿತರಣೆ ಯೋಜನೆಯ ಉದ್ಘಾಟನೆಯನ್ನು ಗ್ರಾಮ ಪಂಚಾಯತ್‌ ಅಧ್ಯಕ್ಷ ಕಲ್ಲಟ್ರ ಅಬ್ದುಲ್‌ ಖಾದರ್‌ ನಡೆಸಿದರು. ಕುಟುಂಬಶ್ರೀ ಜಿಲ್ಲಾ ಯೋಜನೆ ಪ್ರಬಂಧಕ ಆರತಿ ಮೆನನ್‌ ಯೋಜನೆ ಸಂಬಂಧ ಪ್ರತಿಜ್ಞೆ ಸ್ವೀಕಾರಕ್ಕೆ ನೇತೃತ್ವ ನೀಡಿದರು. ಜಿಲ್ಲಾ ಪಂಚಾಯತ್‌ ಸದಸ್ಯೆ ಸುಫೈಝಾ ಅಬೂಬಕ್ಕರ್‌, ಬ್ಲಾಕ್‌ ಪಂಚಾಯತ್‌ ಸದಸ್ಯ ಟಿ.ಡಿ.ಕಬೀರ್‌, ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ಶಕುಂತಲಾ ಕೃಷ್ಣನ್‌, ಸ್ಥಾಯೀ ಸಮಿತಿ ಅಧ್ಯಕ್ಷರಾದ ಶಂಸುದ್ದೀನ್‌ ತೆಕ್ಕಿಲ್‌, ಸಿ.ಎಂ.ಷಾಸಿಯಾ, ಗೀತಾ ಬಾಲಕೃಷ್ಣನ್‌, ಸದಸ್ಯರಾದ ರೇಣುಕಾ ಭಾಸ್ಕರನ್‌, ಕೆ.ಮಾಧವನ್‌ ನಾಯರ್‌, ಕುಟುಂಬಶ್ರೀ ಎ.ಡಿ.ಎಂ.ಸಿ. ಡಿ.ಹರಿದಾಸ್‌, ಗ್ರಾಮಪಂಚಾಯತ್‌ ಕಾರ್ಯದರ್ಶಿ ಪಿ.ರವಿದಾಸ್‌, ಸಿ.ಡಿ.ಎಸ್‌. ಸದಸ್ಯ ಕಾರ್ಯದರ್ಶಿ ಬಿ.ವಿ.ವಿಜಯಕುಮಾರ್‌, ಸಿ.ಡಿ.ಎಸ್‌. ಅಧ್ಯಕ್ಷೆ ಮುಂತಾಝ್ ಅಬೂಬಕ್ಕರ್‌, ಕುಟುಂಬಶ್ರೀ ಕಾರ್ಯಕರ್ತೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.

ಬಡವರ ಪರ
ದುರ್ಬಲ ಜನತೆಗೆ ಬೆಂಬಲ ನೀಡುವ ಮೂಲಕ ಪರಸ್ಪರ ಸೌಹಾರ್ದ, ಸಹಕಾರ ಪೂರ್ಣರೂಪದಲ್ಲಿ ಒದಗಿಸುವಲ್ಲಿ ಕುಟುಂಬಶ್ರೀಗೆ ಸಾಧ್ಯವಾಗಿದೆ
-ಇ.ಚಂದ್ರಶೇಖರನ್‌
ಕಂದಾಯ ಸಚಿವ

Advertisement

ದುರ್ಬಲರಿಗೆ ಸಹಾಯ
ಗ್ರಾಮ ಮಟ್ಟದಲ್ಲಿ ಸಮೀಕ್ಷೆ ನಡೆಸಿ ಒಂಟಿ ಜೀವನ ನಡೆಸುವವರನ್ನು ಗುರುತಿಸಿ ಅಂಥವರಿಗೆ ಪೌಷ್ಟಿಕ ಆಹಾರ ನೀಡುವ ಸಲುವಾಗಿ ಕಿಟ್‌ ವಿತರಿಸಲು ನಿರ್ಧಸಲಾಗಿದೆ.
-ಕೆ.ಕುಂಞಿರಾಮನ್‌
ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next