Advertisement
ಹಳೆಯ ನೆನಪು ಮರುಕಳಿಸಿತುಉದ್ಘಾಟಿಸಿ ಮಾತನಾಡಿದ ಮೇಯರ್ ಕವಿತಾ ಸನಿಲ್ ಅವರು, ಕೆಲವು ವರ್ಷಗಳ ಹಿಂದೆ ಗೂಡುದೀಪಗಳನ್ನು ಮನೆಯಲ್ಲೇ ತಯಾರಿಸುತ್ತಿದ್ದರು. ಆದರೆ ಈಗ ಎಲ್ಲರೂ ಕೆಲಸದ ಒತ್ತಡದಿಂದಲೇ ಇರುವುದರಿಂದ ರೆಡಿಮೇಡ್ ಗೂಡುದೀಪಗಳಿಗೆ ಮೊರೆ ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಗೂಡುದೀಪ ಸ್ಪರ್ಧೆ ಹಳೆಯ ನೆನಪು ಮರಕಳಿಸುವಂತೆ ಮಾಡುತ್ತದೆ ಎಂದರು.
ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ. ಬಿ. ಪುರಾಣಿಕ್ ಅವರಿಗೆ ‘ನಮ್ಮ ತುಳುವೆರ್’ ಪ್ರಶಸ್ತಿ, ಭರತನಾಟ್ಯ ಗುರು ಶಾಂತಲಾ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಮೋಹನ ಕುಮಾರ್ ಅವರಿಗೆ ‘ನಮ್ಮ ಕುಡ್ಲ’ ಪ್ರಶಸ್ತಿ ಹಾಗೂ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ವಿಶೇಷ ಸಾಧನೆ ಮಾಡಿದ ಸುಶಾನ್ ಅತ್ತಾವರ ಅವರನ್ನು ‘ನಮ್ಮ ಕುಡ್ಲ’ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಬಂಟ್ವಾಳದ ದಡ್ಡಲ ಕಾಡು ಸಹಿಪ್ರಾ ಶಾಲೆಯನ್ನು ದತ್ತು ಸ್ವೀಕರಿಸಿ ಬೆಳಗಿಸಿದ ಪ್ರಕಾಶ್ ಅಂಚನ್ ಅಧ್ಯಕ್ಷರಾಗಿರುವ ದುರ್ಗಾ ಫ್ರೆಂಡ್ಸ್ ಕ್ಲಬ್ ಕರೆಂಕಿ ಸಂಸ್ಥೆಗೆ ‘ಬಿ. ಪಿ. ಕರ್ಕೇರ’ ಪ್ರಶಸ್ತಿ ನೀಡಲಾಯಿತು. ಮೂರು ವಿಭಾಗಗಳಲ್ಲಿ ಸ್ಪರ್ಧೆ
ಸಾಂಪ್ರದಾಯಿಕ, ಆಧುನಿಕ ಮತ್ತು ವಿಶೇಷ ಮಾದರಿ (ಪ್ರತಿಕೃತಿ-ಮಾಡೆಲ್) ಸಹಿತ ಮೂರು ವಿಭಾಗಗಳಲ್ಲಿ ಗೂಡುದೀಪ ಸ್ಪರ್ಧೆ ಜರಗಿತು. ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಪದಕ ಪ್ರಾಯೋಜಿತರಾದ ಊರ್ಮಿಳಾ ರಮೇಶ್‌ಕುಮಾರ್, ಕುದ್ರೋಳಿ ಗೋಕರ್ಣ ನಾಥ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ನ್ಯಾಯವಾದಿ ಪದ್ಮರಾಜ್, ಡಾ| ಪಿ.ಜಿ.ಸುವರ್ಣ, ದೇವೇಂದ್ರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಪದಾಧಿಕಾರಿಗಳಾದ ಕದ್ರಿ ನವನೀತ ಶೆಟ್ಟಿ ಸ್ವಾಗತಿಸಿದರು. ಎಂ.ಎಸ್.ಕೋಟ್ಯಾನ್ ನಿರೂಪಿಸಿದರು.