ಕೂಡ್ಲಿಗಿ: ಹಗಲು-ರಾತ್ರಿ ಸತತವಾಗಿಸುರಿಯುತ್ತಿರುವ ಮಳೆಯಿಂದಾಗಿಗುಡೇಕೋಟೆ ಹೋಬಳಿಯಲ್ಲಿಸಾಕಷ್ಟು ಪ್ರಮಾಣದಲ್ಲಿ ಮಳೆ ಅಬ್ಬರದಿಂದ ತಾಲೂಕಿನ ಗ್ರಾಮದಲ್ಲಿ ಕೆಲವರ ಮನೆಗಳ ಚಾವಣಿ ಕುಸಿದುನಷ್ಟ ಉಂಟಾದ ಘಟನೆ ಶುಕ್ರವಾರಸಂಭವಿಸಿದೆ.
ಗ್ರಾಮದ ತಾಲೂಕಿನರಾಮದುರ್ಗಾ ಮತ್ತು ಹುಲಿಕುಂಟೆಗ್ರಾಮದಲ್ಲಿ ತಡರಾತ್ರಿ 1 ಗಂಟೆಯಿಂದಸುರಿದ ಮಳೆಯಿಂದ ಎರಡುಮನೆಗಳು ಗೋಡೆಗಳು ಕುಸಿದು ಬಿದ್ದಿವೆ. ವಿರೂಪಾಕ್ಷಪ್ಪ ತಂದೆ ಬಸಪ್ಪರಾಮದುರ್ಗಾ ಮತ್ತು ಲಕ್ಷ¾ಮ್ಮ ಗಂಡಹುಲಸಿ ಓಬಯ್ಯ ಹುಲಿಕುಂಟೆಅವರ ಮನೆ ಕುಸಿದಿದೆ.
ಕೆಲವರಮನೆಗಳ ಮೇಲ್ಛಾವಣಿ ಕುಸಿದಿವೆ.ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ವ್ಯವಸಾಯ ಮಾಡಿ ಜೀವನನಡೆಸುತ್ತಿದ್ದ ವಿರೂಪಾಕ್ಷಪ್ಪ ಅವರಿಗೆಮನೆ ಕುಸಿತದಿಂದಾಗಿ ಆಶ್ರಯಇಲ್ಲದಂತಾಗಿದೆ. ಹುಲಿಕುಂಟೇಗ್ರಾಮದ ಮನೆ ಗೋಡೆ ಮಾತ್ರಕುಸಿತವಾಗದೆ. ಯಾವುದೇಹಾನಿಯಾಗಿಲ್ಲ ಮನೆ ಒಳಗಡೆ ಮಳೆನೀರು ಸಂಗ್ರಹವಾಗಿದೆ. ಯಾವುದೇಅಧಿ ಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಬಿದ್ದ ಮನೆಗಳಮಾಲೀಕರು ಕಂಗಾಲಾಗುವಂತೆ ಮಾಡಿದೆ.
ಕೂಡಲೇ ಸಂಬಂಧಪಟ್ಟಅಧಿ ಕಾರಿಗಳು ತಕ್ಷಣ ಗ್ರಾಮಕ್ಕೆಆಗಮಿಸಿ ಕುಸಿದ ಮನೆಗಳಿಗೆ ಭೇಟಿನೀಡಿ ಪರಿಶೀಲಿಸಿ ಕೂಡಲೇ ಪರಿಹಾರನೀಡಬೇಕು ಎಂಬುದು ಗ್ರಾಮಸ್ಥರುಒತ್ತಾಯ. ಆದರೆ ಸತತವಾಗಿ ಮಳೆಬೀಳುತ್ತಿರುವುದರಿಂದ ಯಾವಅ ಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ.ಗ್ರಾಮಗಳ ಮಾಹಿತಿಯನ್ನು ಪಡೆದುತಹಶೀಲ್ದಾರ್ ಅವರಿಗೆ ವರದಿಸಲ್ಲಿಸಿದ್ದೇವೆ ಎಂದು ಕಂದಾಯನಿರೀಕ್ಷಕರಾದ ಹರೀಶ ತಿಳಿಸಿದ್ದಾರೆ.
ಎಲ್ಲೆಲ್ಲಿ ಮನೆ ಕುಸಿತ?: ಕುಪ್ಪಿನಕೆರೆಗ್ರಾಮ- 1, ಗೋವಿಂದಗಿರಿ ತಾಂಡಾ-1,ಈಚಲಬೊಮ್ಮನಹಳ್ಳಿ-1, ಸೂಲದಹಳ್ಳಿ-3 ಕೆಳಗಿನಕರ್ನಾರ ಹಟ್ಟಿ 1, ಹುಲಿಕೆರೆ-1, ಭೀಮಸಮುದ್ರ-1, ಕಡೆಕೊಳದಲ್ಲಿಒಂದು ಮನೆ ಕುಸಿತಗೊಂಡಿದೆ.