Advertisement

ಬಾಲಿವುಡ್‌ ಆಫರ್‌ ಪಡೆದ ಕುಡ್ಲದ ಚಿತ್ರಾಲಿ!

02:27 PM Jul 19, 2018 | |

ಕನ್ನಡದ ಖಾಸಗಿ ವಾಹಿನಿಯಲ್ಲಿ ಆಯೋಜಿಸಿದ ‘ಡ್ರಾಮ ಜೂನಿಯರ್’ ರಿಯಾಲಿಟಿ ಶೋದಲ್ಲಿ ವಿಜೇತಳಾದ ಮಂಗಳೂರಿನ ಚಿತ್ರಾಲಿ ಅವರಿಗೆ ಈಗ ಬಾಲಿವುಡ್‌ ಆಫರ್‌ ಕೂಡ ಬಂದಿದೆ. ಕನ್ನಡದ ಡ್ರಾಮ ಜೂನಿಯರ್‌ ಬಳಿಕ ಹಿಂದಿಯ ಜನಪ್ರಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿರುವ ಚಿತ್ರಾಲಿ ತನ್ನ ಅದ್ಭುತ ನಟನೆಯ ಮೂಲಕ ಬಾಲಿವುಡ್‌ ಅಂಗಳದಲ್ಲಿ ಸದ್ದು ಮಾಡುತ್ತಿದ್ದಾರೆ. 

Advertisement

ಈಗಾಗಲೇ ಸ್ಯಾಂಡಲ್‌ವುಡ್‌ನ‌ಲ್ಲಿಯೂ ಮಿಂಚಿರುವ ಚಿತ್ರಾಲಿ ‘ಇಂಡಿಯಾಸ್‌ ಬೆಸ್ಟ್‌ ಡ್ರಾಮೇ ಬಾಜ್‌ ಸೀಸನ್‌ 3’ ಎಂಬ ಹಿಂದಿ ರಿಯಾಲಿಟಿ ಶೋ ಮೂಲಕ ಸಾಕಷ್ಟು ಹೆಸರಿಗೆ ಬಂದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಾಲಿವುಡ್‌ನ‌ಲ್ಲಿ ಸಾಕಷ್ಟು ಹಿಟ್‌ ಚಿತ್ರಗಳನ್ನು ಮಾಡಿದ ನಿರ್ದೇಶಕ ಒಮಂಗ್‌ ಅವರು ಚಿತ್ರಾಲಿ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿ ‘ನನ್ನ ಚಿತ್ರದಲ್ಲಿ ನಟಿಸುತ್ತೀಯಾ?’ ಎಂದು ಕೇಳಿದ್ದರು. ಅದಕ್ಕೆ ಚಿತ್ರಾಲಿ ಒಪ್ಪಿಗೆ ನೀಡಿದ್ದಾರೆ. ಈ ಮೂಲಕ ಹಿಂದಿ ಸಿನೆಮಾದಲ್ಲೂ ಚಿತ್ರಾಲಿ ಆಫರ್‌ ಗಿಟ್ಟಿಸಿಕೊಂಡಂತಾಗಿದೆ. ವಿಶೇಷವೆಂದರೆ ನಟಿ ಹುಮಾ ಖುರೇಶಿ ಹಾಗೂ ನಟ ವಿವೇಕ್‌ ಒಬರಾಯ್‌ ಕೂಡ ಚಿತ್ರಾಲಿ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಂದಹಾಗೆ, ನಿರ್ದೇಶಕ ಒಮಂಗ್‌ ಅವರು ಪ್ರಿಯಾಂಕಾ ಚೋಪ್ರಾ ಅಭಿನಯದ ‘ಮೇರಿ ಕೋಮ್‌’, ‘ಸರ್ಬಜಿತ್‌’ ಹಾಗೂ ಭೂಮಿ ಸಹಿತ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next