Advertisement

Kudala Sangama: ಐಕ್ಯ ಮಂಟಪ ಪ್ರವೇಶಕ್ಕೆ ಮಕ್ಕಳಿಂದ ಹಣ ವಸೂಲಿ‌

05:20 PM Dec 18, 2023 | |

ಕೂಡಲಸಂಗಮ: ಬಸವಣ್ಣನ ಐಕ್ಯ ಮಂಟಪ ದರ್ಶನಕ್ಕೆ ಸರ್ಕಾರ 1ರಿಂದ 10ನೇ ತರಗತಿಯ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಿದ್ದರೂ ಆದೇಶ ಧಿಕ್ಕರಿಸಿ ಶೈಕ್ಷಣಿಕ ಪ್ರವಾಸಕ್ಕೆ ಬರುವ ಪ್ರತಿ ಮಕ್ಕಳಿಂದ ಕೂಡಲಸಂಗಮ ಅಭಿವೃದ್ಧಿ ಮಂಡಳಿ 5 ರೂ. ಪ್ರವೇಶ ಶುಲ್ಕ ಪಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.

Advertisement

ಈಚೆಗೆ ಬೆಂಗಳೂರಿನ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ನಡೆದ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ 13ನೇ ಸಭೆಯಲ್ಲಿ ಮಂಡಳಿಯ ಅಧ್ಯಕ್ಷರು ಆದ ಮುಖ್ಯಮಂತ್ರಿ ಸಿದ್ಧರಾಮಯ್ಯ 1ರಿಂದ 10ನೇ ತರಗತಿಯ ಮಕ್ಕಳಿಗೆ ಉಚಿತ ಪ್ರವೇಶ ನೀಡುವಂತೆ ಮಂಡಳಿ ಆಯುಕ್ತರಿಗೆ ಸೂಚಿಸಿದ್ದರು.

ನಂತರ ಮಂಡಳಿಯು ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಿತ್ತು. ಉಚಿತ ಎಂಬ ನಾಮಫಲಕವನ್ನು ಹಾಕಿದ್ದರು. ಕಳೆದ ಕೆಲವು ದಿನಗಳಿಂದ ಮಂಡಳಿಯ ಸಿಬ್ಬಂದಿ ಮಕ್ಕಳಿಂದ ಪ್ರವೇಶ ಶುಲ್ಕ ಪಡೆಯುತ್ತಿದ್ದಾರೆ.

ಮಕ್ಕಳು ನೀಡಿದ ಹಣಕ್ಕೆ ಪ್ರವೇಶ ಶುಲ್ಕದ ಟಿಕೆಟ್‌ ಕೊಡುವುದಿಲ್ಲ. ಟಿಕೆಟ್‌ ಕೊಡಿ ಎಂದು ಕೇಳಿದರೆ ಮಾತ್ರ ಟಿಕೆಟ್‌ ಕೊಡುವರು. ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಇದನ್ನು ತಡೆದು ಉಚಿತ ಪ್ರವೇಶ ಕಲ್ಪಿಸಬೇಕು ಎಂದು ದಾವಣಗೆರೆ ಪ್ರವಾಸಿ ಶಶಿಕುಮಾರ ಶಿಂಧೆ ಹೇಳಿದರು.

ಮಕ್ಕಳಿಂದ ಪ್ರವೇಶ ಶುಲ್ಕ ಪಡೆಯುತ್ತಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ, ಪರಿಶೀಲಿಸುತ್ತೇನೆ.

Advertisement

ಬಸಪ್ಪ ಪೂಜಾರಿ, ಆಯುಕ್ತರು ಕೂಡಲಸಂಗಮ 
ಅಭಿವೃದ್ಧಿ ಮಂಡಳಿ

ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸ ಕಳೆದ 17 ದಿನಗಳಿಂದ ಆರಂಭಗೊಂಡಿದ್ದು, ನಿತ್ಯ ಸುಕ್ಷೇತ್ರ ದರ್ಶನಕ್ಕೆ 10ರಿಂದ 15 ಸಾವಿರ ಮಕ್ಕಳು ಬರುವರು. ಆ ಎಲ್ಲ ಮಕ್ಕಳಿಗೂ ಮಂಡಳಿಯ ಅಧಿ ಕಾರಿಗಳು ಪ್ರವೇಶ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಮಂಡಳಿಯ ಆಯುಕ್ತರು ಸಮರ್ಪಕ ಪರಿಶೀಲನೆ ಮಾಡದೆ ಇರುವ ಪರಿಣಾಮ ಆಡಳಿತ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಮಂಡಳಿಯ ಸಿಬ್ಬಂದಿಯೇ ಶೋಷಣೆಗೆ ಇಳಿದಿದ್ದಾರೆ ಎಂದು ಭಕ್ತರು, ಗ್ರಾಮಸ್ಥರು ಆರೋಪಿಸಿದ್ದಾರೆ.

ಬಸವಣ್ಣನ ಐಕ್ಯಮಂಟಪ ದರ್ಶನಕ್ಕೆ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಇದ್ದರೂ ಮಂಡಳಿಯ ಅ ಧಿಕಾರಿಗಳೇ ಪ್ರವೇಶ ಶುಲ್ಕ ವಸೂಲಿ ಮಾಡುತ್ತಿರುವುದು ದುರಂತ. ಮಂಡಳಿಯ ಅಧ್ಯಕ್ಷರು ಮುಖ್ಯಮಂತ್ರಿಗಳಾಗಿದ್ದೂ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಶಿಸ್ತು ಕ್ರಮ ಕೈಗೊಳ್ಳಬೇಕು.
ಬಸವಜಯ ಮೃತ್ಯುಂಜಯ ಸ್ವಾಮೀಜಿ, ಲಿಂಗಾಯತ ಪಂಚಮಸಾಲಿ ಪೀಠ, ಕೂಡಲಸಂಗಮ

Advertisement

Udayavani is now on Telegram. Click here to join our channel and stay updated with the latest news.

Next