Advertisement
ಸೀರೆಗೆ ಕುಚ್ಚು ಇದ್ದರೇನೇ ಆಕರ್ಷಣೆ ಎನ್ನುವುದನ್ನು ಫ್ಯಾಶನ್‌ಲೋಕ ಅರಿತುಕೊಂಡಿದೆ. ಸಾಂಪ್ರದಾಯಿಕ ರೇಷ್ಮೆ ಸೀರೆಯೋ, ಹೊಸ ವಿನ್ಯಾಸದ ಮಾಡರ್ನ್ ಸೀರೆಯೋ ಅಥವಾ ಒಂದು ಕಾಟನ್ ಸೀರೆಯೋ… ಯಾವುದೋ ಒಂದು, ಇದಕ್ಕೆ ಕಲಾತ್ಮಕ ಕುಚ್ಚೊಂದು ಇರಲೇಬೇಕು ಎನ್ನುವುದೀಗ ಹೆಂಗಳೆಯರ ಗಟ್ಟಿ ನಂಬಿಕೆ. ಈಗಂತೂ, ರೇಷ್ಮೆ ಸೀರೆಯ ಸೆರಗಿಗೆ; ಬಣ್ಣ ಬಣ್ಣದ ರೇಷ್ಮೆ ದಾರದ ಕುಚ್ಚು, ಟ್ಯಾಸೆಲ್, ಗೊಂಡೆ ಎಂದೆಲ್ಲಾ ಕರೆಸಿಕೊಳ್ಳುವ ಈ ಅದ್ಭುತ ಕಲಾಕೃತಿ ಇದ್ದರೆ ಮಾತ್ರ ಸೀರೆಯ ಸೆರಗಿನ ಅಂದ ಹೆಚ್ಚುವುದು ಎನ್ನುವ ಭಾವನೆ ಆವರಿಸಿದೆ.
Related Articles
ಕುಚ್ಚು ಅಥವಾ ಟ್ಯಾಸಲ್ ಎಂಬ ನೇತಾಡುವ ರೇಶಿಮೆ ದಾರಗಳ ಗುಂಪು, ಹಿಂದೆಲ್ಲಾ ನಾರೀಮಣಿಯರ ಸೀರೆಯ ಸೆರಗನ್ನು ಅಲಂಕರಿಸುತ್ತಿತ್ತು. ಅದೀಗ ಆಧುನಿಕ ಫ್ಯಾಷನ್ ಜಗತ್ತಿಗೂ ಲಗ್ಗೆ ಇಟ್ಟು, ಎಲ್ಲಾ ವಸ್ತುಗಳ ಮೇಲೂ ಮೋಡಿ ಮಾಡಿದೆ. ಹೇಗೆನ್ನುವಿರಾ? ಹಗುರಾದ ತಂತಿಯೊಂದಿಗೆ ಹೆಣೆದುಕೊಂಡ ಬಣ್ಣ ಬಣ್ಣದ ಕುಚ್ಚು ಕಿವಿಯ ಆಭರಣವಾಗುತ್ತದೆ. ಕೈಬಳೆಯಲ್ಲಿ ನೇತಾಡುವ ಕುಚ್ಚುಗಳು ಬಳೆಯ ಅಂದ ಹೆಚ್ಚಿಸುತ್ತವೆ. ಉದ್ದದ ಸರಕ್ಕೆ ಕುಚ್ಚುಗಳ ಪದಕ, ಸಿಲ್ಕ್ ದಾರವನ್ನು ದಪ್ಪನಾಗಿ ಸುತ್ತಿ ಮಣಿಗಳಿಂದ ಅಲಂಕರಿಸಿ, ಅದಕ್ಕೆ ಕುಚ್ಚುಗಳ ಪೆಂಡೆಂಟ್‌ನ ನೆಕ್ಲೇಸ್… ಹೀಗೆ ಒಡವೆಗಳ ಲೋಕದಲ್ಲೂ ಕುಚ್ಚು ರಾರಾಜಿಸುತ್ತಿದೆ.
Advertisement
ಸೀರೆಯ ನಂತರದ ಮಹಿಳೆಯರ ಅಚ್ಚುಮೆಚ್ಚಿನ ಉಡುಗೆಯಾದ ಚೂಡಿದಾರ್‌ನಲ್ಲಿಯೂ ಅಲಂಕಾರಿಕವಾಗಿ ಡಿಸೈನ್ ಮಾಡಿ ಕುಚ್ಚು ಸೇರಿಸಿದರೆ ಆಕರ್ಷಣೀಯ. ಕುರ್ತಾ, ಜೀನ್ಸ್ ಪ್ಯಾಂಟ್, ಡಿಸೈನರ್ ಬ್ಲೌಸ್‌ನ ಹಿಂಭಾಗದಲ್ಲಿ, ಕೈ ತೋಳಿನಲ್ಲಿ… ಹೀಗೆ ಅವರವರ ಅಭಿರುಚಿಗೆ ತಕ್ಕಂತೆ ಅಲಂಕಾರಿಕವಾಗಿ ಹೆಣೆದ ಕುಚ್ಚು ಹೊಸತನಕ್ಕೆ ನಾಂದಿ ಹಾಡಿದೆ.
ಕುಚ್ಚು ಮನಸ್ಸಿನ ಹತ್ತು ಮುಖಗಳುಜಂಬದ ಚೀಲವೆಂದು ಕರೆಸಿಕೊಳ್ಳುವ ಹ್ಯಾಂಡ್ ಬ್ಯಾಗ್‌ನಲ್ಲೂ ಕುಚ್ಚುಗಳ ವಿನ್ಯಾಸ ಮಿಂಚುತ್ತಿದೆ. ಬಣ್ಣದ ಕುಚ್ಚಿರುವ ಪಾದರಕ್ಷೆಗಳೂ ಮಾರ್ಕೆಟ್‌ಗೆ ಕಾಲಿಟ್ಟಿವೆ. ಸೀರೆ, ಸಲ್ವಾರ್, ಜೀನ್ಸ್ ಹೀಗೆ ಎಲ್ಲದಕ್ಕೂ ಹೊಂದುವ ಕುಚ್ಚು ಇರುವ ಚಪ್ಪಲಿಗಳು ಸದ್ಯಕ್ಕೆ ಚಾಲ್ತಿಯಲ್ಲಿರುವ ಫ್ಯಾಷನ್. ಮನೆಯ ಪರದೆಗಳಿಗೆ, ಒರಗು ದಿಂಬುಗಳಿಗೆ ಕುಚ್ಚು ಸೇರಿಸಿ ಹೊಲಿದರೆ ಮತ್ತಷ್ಟು ಸೊಬಗು. ಶಾರದಾ ಮೂರ್ತಿ