Advertisement

KTM ರೈಡ್‌ ಕರೋ…

09:14 AM Jul 19, 2019 | sudhir |

ಕೆಟಿಎಂ ಎಂದರೆ ಸಾಕು ಯುವಕರ ಹೃದಯ ಬಡಿತ ಏರುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಹವಾ ಸೃಷ್ಟಿಸಿರುವ ಕೆಟಿಎಂ ಹೈ ಪರ್ಫಾಮೆನ್ಸ್‌ ಬೈಕ್‌ಗಳಿಗೆ ಪ್ರಸಿದ್ಧಿ. ಆದರೆ ಇದೀಗ ಭಾರತದ ಮಾರುಕಟ್ಟೆಯನ್ನು ಗಮನದಲ್ಲಿರಿಸಿಕೊಂಡು 125 ಸಿಸಿ ಬೈಕ್‌ಗಳನ್ನು ಬಿಡುಗಡೆಗೊಳಿಸಿದೆ. ಈಗಾಗಲೇ 125 ಸಿಸಿ ನೇಕೆಡ್‌ ಆವೃತ್ತಿ ಬಿಡುಗಡೆಯಾಗಿದ್ದು, ಉತ್ತಮ ಮಾರಾಟ ಪ್ರಗತಿಯನ್ನು ದಾಖಲಿಸಿದೆ. ಇದರ ಮುಂದುವರಿದ ಭಾಗವಾಗಿ ಫ‌ುಲ್‌ ಫೇರಿಂಗ್‌ ರೇಸಿಂಗ್‌ ಮಾದರಿಯ ಬೈಕ್‌ ಬಿಡುಗಡೆ ಮಾಡಿದೆ.

Advertisement

ಹೇಗಿದೆ ವಿನ್ಯಾಸ?
ಕೆಟಿಎಂನ ಆರ್‌ಸಿ 200 ಮತ್ತು ಆರ್‌ಸಿ 390 ಬೈಕ್‌ಗಳ ಮಾದರಿಯಲ್ಲೇ ಈ ಬೈಕ್‌ಅನ್ನೂ ವಿನ್ಯಾಸಗೊಳಿಸಲಾಗಿದೆ. ಹಗುರವಾದ ಬಾಡಿ, ಗಟ್ಟಿಮುಟ್ಟಾದ ಫ್ರೆàಂ, ಆಕರ್ಷಕ ಬಾಡಿ ಗ್ರಾಫಿಕ್ಸ್‌, ಮುಂಭಾಗದಲ್ಲಿ ಎರಡು ಪ್ರೊಜೆಕ್ಟರ್‌ ಹೆಡ್‌ಲ್ಯಾಂಪ್‌ಗ್ಳು, ಹಿಂಭಾಗದಲ್ಲಿ ಎಲ್‌ಇಡಿ ಬ್ರೇಕ್‌ಲೈಟ್‌ಗಳು, ಡಿಜಿಟಲ್‌ ಸ್ಪೀಡೋಮೀಟರ್‌ ಹೊಂದಿದೆ. ಕ್ಲಿಪ್‌ ಹ್ಯಾಂಡಲ್‌ ಬಾರ್‌ಗಳಿದ್ದು, ಸವಾರರು ಆರಾಮದಾಯಕವಾಗಿ ಆಸೀನರಾಗುವಂತೆ ವಿನ್ಯಾಸ ರೂಪಿಸಲ್ಪಟ್ಟಿದೆ. 125 ಸಿಸಿ ಬೈಕ್‌ ಕೂಡ ರೇಸಿಂಗ್‌ ಡೈನಾಮಿಕ್ಸ್‌ ಹೊಂದಿದ್ದು, ವೇಗವನ್ನು ಬಯಸುವ ಸವಾರರಿಗೆ ಹಿಡಿಸುವಂತಿದೆ.

ಹೈ ಪರ್ಫಾಮೆನ್ಸ್‌ ಬೈಕ್‌
ಭಾರತದ ಮಾರುಕಟ್ಟೆಯಲ್ಲಿರುವ 125 ಸಿಸಿ ಬೈಕ್‌ಗಳಲ್ಲಿಯೇ ಅತ್ಯಧಿಕ ಸಾಮರ್ಥ್ಯ ಹೊಂದಿದ ಬೈಕ್‌ ಎಂಬ ಹೆಸರಿಗೆ ಪಾತ್ರವಾಗಿರುವ ಕೆಟಿಎಂ ಆರ್‌ಸಿ 125 14.5 ಎಚ್‌ಪಿ, 12 ಎನ್‌ಎಂನಷ್ಟು ಟಾರ್ಕ್‌ ಅನ್ನು ಉತ್ಪಾದಿಸುತ್ತದೆ. ಆದ್ದರಿಂದ ಇದರ ಗರಿಷ್ಠ ವೇಗ ಗಂಟೆಗೆ ಸುಮಾರು 116-120 ಕಿ.ಮೀ.ನಷ್ಟು ಇದೆ. ಆರಂಭಿಕ ವೇಗವೂ ಇತರೆ 125 ಸಿಸಿ ಬೈಕ್‌ಗಳಿಗಿಂತ ದುಪ್ಪಟ್ಟಿದೆ. ಲಿಕ್ವಿಡ್‌ ಕೂಲ್ಡ್‌ ಎಂಜಿನ್‌ ಇದಾಗಿದೆ. ಅಲ್ಲದೆ ಈ ಬೈಕ್‌ನಲ್ಲಿ ಕೆಟಿಎಂ ತನ್ನ ಸೈಲೆನ್ಸರ್‌ ಶಬ್ದವನ್ನು ತುಸು ಸುಧಾರಣೆ ಮಾಡಿದೆ. ಯಾವುದೇ ರೀತಿಯ ವೈಬ್ರೇಷನ್‌ ಅನ್ನು ಇದು ಉಂಟುಮಾಡುವುದಿಲ್ಲ. 100 ಕಿ.ಮೀ. ವೇಗವನ್ನು ದಾಟಿದಾಗ ಬೈಕ್‌ ತುಸು ಅಲುಗಾಡಿದಂತಾಗುತ್ತದೆ ಎನ್ನುವುದು ಇದನ್ನು ಪರೀಕ್ಷಿಸಿದವರ ಅನುಭವದ ಮಾತು. ಆದರೆ ಇದರಿಂದ ಹ್ಯಾಂಡಲ್‌ಬಾರ್‌ನ ನಿಯಂತ್ರಣದ ಮೇಲೆ ಯಾವುದೇ ಪರಿಣಾಮ ಗೋಚರಿಸುವುದಿಲ್ಲ. ಆದ್ದರಿಂದ ವೇಗವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

ಬ್ರೇಕ್‌ ಮತ್ತು ಸಸ್ಪೆನÒನ್‌
ಬೈಕ್‌ ಎರಡು ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದ್ದು, ಸಿಂಗಲ್‌ ಚಾನೆಲ್‌ ಎಬಿಎಸ್‌ ಮಾತ್ರ ಇದೆ. ಅಪ್‌ಸೆçಡ್‌ ಆಂಡ್‌ ಡೌನ್‌ ಟೆಲಿಸ್ಕೋಪಿಕ್‌ ಶಾಕ್‌ಗಳಿರುವುದು ಇದರ ವಿಶೇಷತೆ. ಸ್ಟೀಲ್‌ ಸ್ಟ್ರೆಲಿಸ್‌ ಫ್ರೆàಮ್‌ಗಳನ್ನು ಹೊಂದಿದ್ದು, ಇದರಿಂದಾಗಿ ಸುಲಭ ನಿಯಂತ್ರಣ, ವೇಗ ಪಡೆದುಕೊಳ್ಳಲು ಮತ್ತು ಸುಗಮ ಚಾಲನೆಗೆ ನೆರವಾಗುವಂತೆ ಇದೆ. ಇದಕ್ಕೆ ಪೂರಕವಾಗಿ ಹಿಂಭಾಗದ ಮೋನೋ ಶಾಕ್‌ ಐದು ಹಂತಗಳಲ್ಲಿ ಅಡ್ಜಸ್ಟ್‌ ಮಾಡಿಕೊಳ್ಳುವಂತಿದೆ. ಸವಾರನ ಅನುಕೂಲತೆ ಅಥವಾ ರಸ್ತೆ ಪರಿಸ್ಥಿತಿಗೆ ಅನುಗುಣವಾಗಿ ಅದರಲ್ಲಿ ಬದಲಾವಣೆ ಮಾಡಿಕೊಳ್ಳಬಹುದು.

ಇಂದಿನ ಪೀಳಿಗೆಗಾಗಿ
ಕಡಿಮೆ ಬೆಲೆಯಲ್ಲಿ ಸಾಕಷ್ಟು ಪವರ್‌ ಉತ್ಪಾದಿಸಬಲ್ಲ, ವೇಗವನ್ನೂ ಉಳ್ಳ ರೇಸಿಂಗ್‌ ಮಾದರಿಯ ಬೈಕ್‌ ಬೇಕು ಎನ್ನುವವರಿಗೆ ಕೆಟಿಎಂ 125 ಉತ್ತಮ ಆಯ್ಕೆ. ಕಾಲೇಜು ಯುವಕರು ಈ ಬೈಕ್‌ಗಳ ದೊಡ್ಡ ಮಟ್ಟದ ಗ್ರಾಹಕರು. ಅವರನ್ನೇ ಗಮನದಲ್ಲಿಟ್ಟುಕೊಂಡು ಈ ಬೈಕ್‌ ರೂಪಿಸಿದಂತಿದೆ. ಇದರ ಎಕ್ಸ್‌ ಶೋರೂಂ ಬೆಲೆ 1.47 ಲಕ್ಷ ರು. ಮಾರುಕಟ್ಟೆಯಲ್ಲಿ ಇದೇ ಸೆಗೆ¾ಂಟ್‌ನಲ್ಲಿ ಸಿಗುವ ಯಮಹಾದ ವೈಝಡ್‌ಎಫ್- ಆರ್‌15 ಬೈಕ್‌ ಕೆಟಿಎಂ 125ನ ಪ್ರತಿಸ್ಪರ್ಧಿ.

Advertisement

ತಾಂತ್ರಿಕತೆ
124.7 ಸಿಸಿ ಲಿಕ್ವಿಡ್‌ ಕೂಲ್ಡ್‌ ಎಂಜಿನ್‌
14.5 ಎಚ್‌ಪಿ ಶಕ್ತಿ
12 ಎನ್‌ಎಂ ಟಾರ್ಕ್‌
6 ಸ್ಪೀಡ್‌ ಗೇರ್‌ ಬಾಕ್ಸ್‌
ಸಿಂಗಲ್‌ ಚಾನೆಲ್‌ ಎಬಿಎಸ್‌
154 ಕೆ.ಜಿ. ತೂಕ
9.5 ಲೀ. ಇಂಧನ ಟ್ಯಾಂಕ್‌

  • ಈಶ
Advertisement

Udayavani is now on Telegram. Click here to join our channel and stay updated with the latest news.

Next