ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಅ. 1ರಿಂದ ಮಂಗಳೂರು-ಹೈದರಾಬಾದ್ ಮಾರ್ಗದಲ್ಲಿ ಅಂಬಾರಿ ಡ್ರೀಮ್‌ಕ್ಲಾಸ್ ಮಲ್ಟಿ ಆ್ಯಕ್ಸಿಲ್ ಎಸಿ ಸ್ಲಿಪರ್ ದರ್ಜೆಯ ಬಸ್ ಹಾಗೂ ಉಡುಪಿ-ಹೈದರಾಬಾದ್ ಮಾರ್ಗದಲ್ಲಿ ರಾಜಹಂಸ ಬಸ್ ಸೇವೆ ಪ್ರಾರಂಭಿಸಲಿದೆ. ಕೊರೊನಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪ್ರಯಾಣಿಸಲು ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಸಾರಿಗೆ ವಿವರ
ಅಂಬಾರಿ ಡ್ರೀಮ್‌ಕ್ಲಾಸ್ ಮಲ್ಟಿ ಆ್ಯಕ್ಸಿಲ್ ಎಸಿ ಸ್ಲಿಪರ್ ಬಸ್ ಮಧ್ಯಾಹ್ನ 3ಕ್ಕೆ ಮಂಗಳೂರಿನಿಂದ ಹೊರಟು ಸುರತ್ಕಲ್, ಮೂಲ್ಕಿ, ಉಡುಪಿ, ಕುಂದಾಪುರ, ಭಟ್ಕಳ, ಹುಬ್ಬಳ್ಳಿ, ಗದಗ, ಕೊಪ್ಪಳ, ರಾಯಚೂರು ಮೂಲಕ ಹೈದರಾಬಾದ್‌ಗೆ ಮರುದಿನ ಬೆಳಗ್ಗೆ 8.30ಕ್ಕೆ ತಲುಪಲಿದೆ. ಹೈದರಾಬಾದ್‌ನಿಂದ ಸಂಜೆ 5ಕ್ಕೆ ಹೊರಟು ಅದೇ ಮಾರ್ಗವಾಗಿ ಮಂಗಳೂರಿಗೆ ಮರುದಿನ ಬೆಳಗ್ಗೆ 10 ಗಂಟೆಗೆ ತಲುಪಲಿದೆ. ಪ್ರಯಾಣ ದರ 1,700 ರೂ.
ರಾಜಹಂಸ ಬಸ್ ಉಡುಪಿಯಿಂದ ಬೆಳಗ್ಗೆ 11.30ಕ್ಕೆ ಹೊರಟು ಮಣಿಪಾಲ, ಕುಂದಾಪುರ, ಸಿದ್ದಾಪುರ, ತೀರ್ಥಹಳ್ಳಿ, ಶಿವಮೊಗ್ಗ, ಹರಿಹರ, ಹರಪನಹಳ್ಳಿ, ಹೊಸಪೇಟೆ, ಗಂಗಾವತಿ, ಮಾನ್ವಿ, ರಾಯಚೂರು ಮೂಲಕ ಹೈದರಾಬಾದ್‌ಗೆ ಮರುದಿನ ಬೆಳಗ್ಗೆ 6.30ಕ್ಕೆ ತಲುಪಲಿದೆ. ಹೈದರಾಬಾದ್‌ನಿಂದ ಸಂಜೆ 5.30ಕ್ಕೆ ಹೊರಟು ಉಡುಪಿಗೆ ಮರುದಿನ ಬೆಳಗ್ಗೆ 11 ಗಂಟೆಗೆ ತಲುಪಲಿದೆ. ಪ್ರಯಾಣ ದರ 970 ರೂ. ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದೆ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟನೆ ತಿಳಿಸಿದೆ.