Advertisement

ತಲಪಾಡಿಯಲ್ಲಿ ಬಸ್- ಸ್ಕೂಟರ್ ಅಪಘಾತ: ಗಂಭೀರ ಗಾಯಗೊಂಡ ಸವಾರ

09:54 AM Mar 22, 2021 | Team Udayavani |

ಉಳ್ಳಾಲ: ಬಸ್-ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಟಯರ್ ಅಂಗಡಿ ಮಾಲೀಕ ಗಂಭಿರವಾಗಿ ಗಾಯಗೊಂಡಿರುವ ಘಟನೆ ತಲಪಾಡಿ ಬಳಿ ಸಂಭವಿಸಿದೆ.

Advertisement

ಸ್ಕೂಟರ್ ಸವಾರ ಉದ್ಯಾವರ ಮಾಡ ನಿವಾಸಿ ತುಳಸಿ (35) ಗಂಭೀರವಾಗಿ ಗಾಯಗೊಂಡವರು.

ಇದನ್ನೂ ಓದಿ:ಮತ್ತೆ ಮಿಂಚಿದ ಶ್ರೀನಿವಾಸ ಗೌಡ: ನೇಗಿಲು ಹಿರಿಯ ವಿಭಾಗದಲ್ಲಿ ಇರುವೈಲು ಪಾಣಿಲ ಚಾಂಪಿಯನ್

ತಲಪಾಡಿಯಲ್ಲಿ ಟಯರ್ ಅಂಗಡಿ ಹೊಂದಿರುವ ಇವರು ಮನೆಯಿಂದ ಸ್ಕೂಟರಿನಲ್ಲಿ ಬರುತ್ತಿದ್ದ ಸಂದರ್ಭ ಡಿವೈಡರ್ ಬಳಿ ಸ್ಕೂಟರ್ ತಿರುಗಿಸುತ್ತಿದ್ದಾಗ ಮಂಗಳೂರಿನಿಂದ ಕಾಸರಗೋಡು ಬರುತ್ತಿದ್ದ ಕರ್ನಾಟಕ ಸಾರಿಗೆ ಬಸ್ಸು ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಸ್ಕೂಟರ್ ಮತ್ತು ಸವಾರ ಬಸ್ಸಿನಡಿಗೆ ಸಿಲುಕಿದ್ದಾರೆ.

Advertisement

ನಾಗುರಿ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ‌.

ಇದನ್ನೂ ಓದಿ: ಯುವತಿ ಜತೆ ಮತ್ತೂಬ್ಬ ಉತ್ತರದ ಶಾಸಕನಿಗೆ ಸಂಪರ್ಕ?

Advertisement

Udayavani is now on Telegram. Click here to join our channel and stay updated with the latest news.

Next