Advertisement

ಚಹಾ ಸೇವಿಸಿ ಕರ್ತವ್ಯಕ್ಕೆ ತೆರಳಿದ್ದ ಚಾಲಕ

07:08 PM Apr 17, 2021 | Team Udayavani |

ಜಮಖಂಡಿ: ಶುಕ್ರವಾರ ಪವಿತ್ರ ರಮಜಾನ್‌ ಉಪವಾಸ ಮಾಡಲು ಬಯಸಿದ್ದ ವಾಯವ್ಯ ಸಾರಿಗೆ ಚಾಲಕ ನಭಿರಸೂಲ ಖಾದಿರಸಾಬ ಅವಟಿಗೆ ಸಾವು ಎದುರಾಗಿದ್ದು ದುರಂತ. ಕರ್ತವ್ಯ ನಿರ್ವಹಿಸುವ ಹಿನ್ನೆಲೆಯಲ್ಲಿ ಒತ್ತಡದಲ್ಲಿದ್ದ ಮನೆಯ ಕುಟುಂಬ ಸದಸ್ಯರೊಂದಿಗೆ ಕೇವಲ ಚಹಾ ಕುಡಿದು ತೆರಳಿದ್ದರು.

Advertisement

ಪವಿತ್ರ ರಮಜಾನ್‌ ತಿಂಗಳ ಆರಂಭಗೊಂಡಿದ್ದು, ಚಾಲಕನಿಗೆ ಶುಕ್ರವಾರ ರಜೆ ಇದ್ದರೂ ಸಾರಿಗೆ ನೌಕರರ ಮುಷ್ಕರ ಪರಿಣಾಮವಾಗಿ ಅಧಿ ಕಾರಿಗಳ ಒತ್ತಡಕ್ಕೆ ಮಣಿದ ಅವರು ಕರ್ತವ್ಯಕ್ಕೆ ಹಾಜರಾಗಿದ್ದರು. ಮುಷ್ಕರ ತೊರೆದು ಗುರುವಾರ ನೌಕರಿಗೆ ಆಗಮಿಸಿದ್ದರು. ಮೃತ ವಾಯವ್ಯ ಸಾರಿಗೆ ಚಾಲಕ ನಭಿರಸೂಲ ಖಾದಿರಸಾಬ ಅವಟಿ ಕುಟುಂಬಕ್ಕೆ ಅವರೇ ಪ್ರಮುಖ ಆಧಾರಸ್ಥಂಭ. ಪತ್ನಿ ಸಾಯಿರಾಬಾನು, ಪುತ್ರರಾದ ಮುಬಾರಕ, ಚಾಂದಪಾಷಾ, ಮಕಸುದ್‌, ಶಾನೂರ ಅವರನ್ನೊಳಗೊಂಡ ಕುಟುಂಬ ಆರ್ಥಿಕವಾಗಿ ಸದೃಢವಾಗಿಲ್ಲ.

ಧಾರವಾಡದ ವಾಯುವ್ಯ ಸಾರಿಗೆ ಆಯುಕ್ತ ಕೃಷ್ಣಾ ಭಾಜಪೇಯಿ, ಸಾರಿಗೆ ಅ ಧಿಕಾರಿಗಳು, ನೌಕರರು ಚಾಲಕನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಶಾಸಕ ಆನಂದ ನ್ಯಾಮಗೌಡ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಶ್ರೀಶೈಲ ದಳವಾಯಿ, ಸಂಗಮೇಶ ನಿರಾಣಿ ಸಹಿತ ಗಣ್ಯರು ಸಂತಾಪ ಸೂಚಿಸಿದ್ದು, ಕಲ್ಲು ಎಸೆದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next