Advertisement

ಕೆಎಸ್‌ಆರ್‌ಪಿ ಸಿಬಂದಿಗೂ ಸಿವಿಲ್‌ ಸೇವೆಗೆ ಅವಕಾಶ

12:17 AM Aug 20, 2021 | Suhan S |

ಕಲಬುರಗಿ: ಕರ್ನಾಟಕ ರಾಜ್ಯ ಮೀಸಲು ಪಡೆಯ ಸಿಬಂದಿ (ಕಾನ್‌ಸ್ಟೆಬಲ್‌)ಗೆ  ಇನ್ನು ಮುಂದೆ ಸಿವಿಲ್‌ ಪೊಲೀಸರಾಗಿ ಸೇವೆ ಸಲ್ಲಿಸುವ ಅವಕಾಶ ಸಿಗಲಿದೆ. ಈ ಮೂಲಕ ಅವರ ಬಹು ದಿನಗಳ ಬೇಡಿಕೆ ಈಡೇರಲಿದೆ.

Advertisement

ಈಗಾಗಲೇ ಗೃಹ ಇಲಾಖೆಯಲ್ಲಿ ಈ ಕುರಿತು ನಿಯಮಾವಳಿ ಬದಲಾವಣೆ ಮಾಡಲಾಗಿದೆ. ಮುಖ್ಯಮಂತ್ರಿಗಳು, ಗೃಹಸಚಿವರು, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರನ್ನೊಳಗೊಂಡ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪರೀಕ್ಷೆ ನಿಗದಿ :

ಕೆಎಸ್‌ಆರ್‌ಪಿಗೆ ಸೇರಿ 10 ವರ್ಷ ಪೂರೈಸದಿರುವ ಸಿಬಂದಿಗೆ ಮಾತ್ರ ಈ ಅವಕಾಶ ಸಿಗಲಿದೆ. ಇವರನ್ನೂ ಪರೀಕ್ಷೆ ಮೂಲಕ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮಾತ್ರ ಸಿವಿಲ್‌ ಸೇವೆಗೆ ಪಾದಾರ್ಪಣೆ ಮಾಡಬಹುದು.

ಸಿವಿಲ್‌ ಸೇವೆ ಆಯ್ಕೆ ಏಕೆ? :

Advertisement

ಯುವಕರು ಉತ್ಸುಕತೆಯಿಂದ ಕೆಎಸ್‌ಆರ್‌ಪಿಗೆ ಸೇರುತ್ತಾರೆ. ವರ್ಷಗಳ ಬಳಿಕ ದಿನವೂ ಸೇವೆ ಸಲ್ಲಿಸಲು ಅವಕಾಶ ಇಲ್ಲದಿರು

ವುದು, ಅಹಿತಕರ ಘಟನೆಗಳು ನಡೆದಂತಹ ಸ್ಥಳಗಳಲ್ಲಷ್ಟೇ ಕರ್ತವ್ಯ ನಿಭಾಯಿಸಬೇಕೆಂಬ ಹಿನ್ನೆಲೆ, ಸಿವಿಲ್‌ನಂತೆ ಸಾಮಾಜಿಕವಾಗಿ ಸೇವೆ

ಸಲ್ಲಿಸಲು ಅವಕಾಶ ಇಲ್ಲವಲ್ಲ ಎನ್ನುವ ಕೊರಗು, ಖನ್ನತೆ ಆರಂಭವಾಗುತ್ತದೆ. ಕೆಎಸ್‌ಆರ್‌ಪಿ ಹಾಗೂ ಸಿವಿಲ್‌ ಪೊಲೀಸ್‌ಗೂ ಒಂದೇ ತೆರನಾದ ವೇತನ ಇರುತ್ತದೆ. ಆದರೆ ಸಿವಿಲ್‌ ಪೊಲೀಸರಂತೆ ಕೆಎಸ್‌ಆರ್‌ಪಿ ಸಿಬಂದಿಗೆ ಕೆಲವು ವಿಶೇಷ ಭತ್ತೆಗಳು ಸಿಗುವುದಿಲ್ಲ. ಈ ಎಲ್ಲ ಕಾರಣಗಳಿಂದ ಅವರು ಸಿವಿಲ್‌ ಸೇವೆಗೆ ಸೇರುವ ಬಗ್ಗೆ ಉತ್ಸುಕರಾಗುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next