Advertisement
ಕರಾಮುವಿ ಮಾನ್ಯತೆ ನೀಡುವ ಸಂಬಂಧ ಯಾವ ಮನವಿಗಳಿಗೂ ಸ್ಪಂದಿಸದ ಯುಜಿಸಿ ವಿರುದ್ಧ ಕೆಎಸ್‌ಒಯು ಹೈಕೋರ್ಟ್ ಮೊರೆಹೋಗಿತ್ತು. ಕೆಎಸ್‌ಒಯು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್ ಎರಡು ವಾರದೊಳಗೆ ಅನುಮತಿ
ನೀಡುವಂತೆ ಯುಜಿಸಿಗೆ ನಿರ್ದೇಶಿಸಿ, ಅರ್ಜಿ ಇತ್ಯರ್ಥ ಪಡಿಸಿತ್ತು. ಆದರೆ ನ್ಯಾಯಾಲಯ ನೀಡಿದ್ದ ಗಡುವು ಮುಗಿದರೂ, ಯುಜಿಸಿಯು
ಕೆಎಸ್‌ಒಯು ಮಾನ್ಯತೆ ನವೀಕರಣ ಮಾಡಿಲ್ಲ. ಹೀಗಾಗಿ ಯುಜಿಸಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವ ಸಂಬಂಧ ಕೆಎಸ್
ಒಯು ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.
ಒಯು ಕುಲಸಚಿವ ಡಾ.ಕೆ.ಜಿ.ಚಂದ್ರಶೇಖರ್ “ಉದಯವಾಣಿ’ಗೆ ತಿಳಿಸಿದರು. ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿಲ್ಲ ಯುಜಿಸಿ ಮಾನ್ಯತೆ ನವೀರಕಣ ಮಾಡದೇ ಇರುವುದರಿಂದ 2015-16, 2016-17 ಮತ್ತು
ಪ್ರಸಕ್ತ ಸಾಲಿನಲ್ಲಿ ಕೆಎಸ್‌ಒಯು ಯಾವುದೇ ಕೋರ್ಸ್‌ಗೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿಲ್ಲ. ಪ್ರಸಕ್ತ ಸಾಲಿನ ಮಾನ್ಯತೆ
ನವೀಕರಣಕ್ಕಾಗಿ ಕೆಎಸ್‌ಒಯು ಅನೇಕ ರೀತಿಯ ಕಸರತ್ತು ಮಾಡಿತ್ತು. ಕೆಎಸ್‌ಒಯು ಮಾನ್ಯತೆಗಾಗಿ ಪ್ರಧಾನಿಯವರಿಗೆ ಸಿಎಂ ಅವರು ಪತ್ರ ಬರೆದು ಮನವಿ ಮಾಡಿಕೊಂಡಿದ್ದರೂ ಮಾನ್ಯತೆ ಸಿಕ್ಕಿಲ್ಲ.