Advertisement

ಕ್ಷತ್ರಿಯ ಸಮಾಜ ಸಂಘಟಿತವಾಗಲಿ

08:11 AM Feb 18, 2019 | |

ಹೊನ್ನಾಳಿ: ಕ್ಷತ್ರಿಯ ಸಮಾಜ ಬಾಂಧವರು ತಾವು ಅಲ್ಪಸಂಖ್ಯಾತರೆಂದು ಭಾವಿಸಬಾರದು. ಕ್ಷತ್ರಿಯರು ಶಕ್ತಿವಂತರು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

Advertisement

ತಾಲೂಕಿನ ಸೂರಟೂರು ಗ್ರಾಮದಲ್ಲಿ ಸೂರಟೂರು ಕ್ಷತ್ರಿಯ ಸಮಾಜ ಸೇವಾ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕ್ಷತ್ರಿಯ ಸಮುದಾಯ ಭವನದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯಾ ಪೂರ್ವ ಹಾಗೂ ನಂತರ ಕ್ಷತ್ರಿಯರ ಸಾಧನೆ ಅಪಾರ ಹಾಗೂ ಅದ್ಭುತ ಎಂದ ಅವರು, ಒಗ್ಗಟ್ಟು ಪ್ರದರ್ಶಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು. ಹೊನ್ನಾಳಿ ಪಟ್ಟಣದಲ್ಲಿ ಕ್ಷತ್ರಿಯ ಸಮಾಜದ ವತಿಯಿಂದ ಸಮುದಾಯ ಭವನಕ್ಕೆ ಬೇಡಿಕೆ ಬಂದಿದ್ದು, ಪಟ್ಟಣದ ಸುತ್ತಮುತ್ತ ಯಾವುದೇ ನಿವೇಶನವಿಲ್ಲ. ಸಮಾಜದವರು ನಿವೇಶನದ ವ್ಯವಸ್ಥೆ ಮಾಡಿದರೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಲಾಗುವುದು ಎಂದು ಹೇಳಿದರು.

ಕರ್ನಾಟಕ ಪ್ರದೇಶ ಹಿಂದೂ ಕ್ಷತ್ರಿಯ ಸಂಘದ ರಾಜ್ಯಾಧ್ಯಕ್ಷ ರಾಮನಗೌಡ ಬಿ.ಪಾಟೀಲ್‌ ಮಾತನಾಡಿ, ಕ್ಷತ್ರಿಯರಾದ ನಾವು ಶ್ರೀರಾಮನ ಆದರ್ಶಗಳನ್ನು ಪಾಲಿಸುವುದು ಮುಖ್ಯವಾಗಿದೆ. ಶ್ರೀರಾಮ ವಿಶ್ವಕ್ಕೆ ಆದರ್ಶ ಎಂದು ಹೇಳಿದರು. 

ಕ್ಷತ್ರಿಯ ಸಮಾಜದ ಸಂಘಟನೆಗಾಗಿ ರಾಜ್ಯ ಮಟ್ಟದ ಸಂಘ ರಚಿಸಲಾಗಿದೆ. ಸಮಾಜ ಬಾಂಧವರು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

Advertisement

ಬಾಗಲಕೋಟೆ ಜಿಲ್ಲಾಧ್ಯಕ್ಷ ಶಿವಾನಂದ ಪೂಜಾರ್‌ ಮಾತನಾಡಿ, ರಾಜ್ಯದಲ್ಲಿ ಎಲ್ಲಾ ಸಮಾಜದವರು ಸ್ವಾಮಿಗಳನ್ನು ನೇಮಕ ಮಾಡಿಕೊಂಡು ಸಮಾಜ ಸಂಘಟಿಸುತ್ತಿದ್ದಾರೆ. ನಮ್ಮ ಸಮಾಜಕ್ಕೆ ಸ್ವಾಮಿಗಳಿಲ್ಲ. ನಾವೂ ಸಂಘಟಿತರಾಗುವ ಬಗ್ಗೆ ಚಿಂತಿಸಬೇಕು ಎಂದು ಹೇಳಿದರು. ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಕ್ಷತ್ರಿಯ ಸಮಾಜ ಚಿಕ್ಕ ಹಾಗೂ ಚೊಕ್ಕ ಸಮಾಜವಾಗಿದೆ. 

ಇನ್ನೊಬ್ಬರಿಗೆ ತೊಂದರೆ ಕೊಡದಂತೆ ಬಾಳುವ ಸಮಾಜ ಕ್ಷತ್ರಿಯ ಸಮಾಜ ಎಂದು ಹೇಳಿದರು. ಸೊರಟೂರು ಕ್ಷತ್ರಿಯ ಸಮಾಜ ಸೇವಾ ಸಂಘದ ಸಹ ಕಾರ್ಯದರ್ಶಿ ಪಿ.ಎಚ್‌.ಹನುಮಂತಯ್ಯ ಪ್ರಾಸ್ತಾವಿಕ ಮಾತನಾಡಿದರು. ಗ್ರಾ.ಪಂ ಅಧ್ಯಕ್ಷ ಡಿ.ಹನುಮಂತಗೌಡ, ಕ್ಷತ್ರಿಯ ಸಮಾಜದ
ರಾಜ್ಯ ಕಾರ್ಯಾಧ್ಯಕ್ಷ ಶಿವನಗೌಡಪಾಟೀಲ್‌ ಬೆಳ್ಳಟ್ಟಿ ಮಾತನಾಡಿದರು.

ಸೊರಟೂರು ಕ್ಷತ್ರಿಯ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ.ಪರಸಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಸದಸ್ಯೆ ಉಮಾ ಎಂ.ಪಿ.ರಮೇಶ್‌, ಕ್ಷತ್ರಿಯ ಸಮಾಜದ ಗೌರವಾಧ್ಯಕ್ಷ ಎಚ್‌. ಚಂದ್ರಪ್ಪ, ಗ್ರಾ.ಪಂ ಸದಸ್ಯೆ ರೂಪ, ಸಮಾಜದ ಗಣ್ಯರಾದ ಸುಭಾಷ ಹಲಗತ್ತಿ, ಆಯನೂರು ರವಿಕುಮಾರ್‌, ಕೆ.ರಾಮಪ್ಪ, ಗೋಕಾಕ್‌ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ| ಪಿ.ಶಾಂತ ಉಪಸ್ಥಿತರಿದ್ದರು. ಶಿಕ್ಷಕ ಗಣೇಶ್‌ ಸ್ವಾಗತಿಸಿ, ನಿರೂಪಿಸಿದರು. ಇದಕ್ಕೂ ಮುನ್ನ ಸಿದ್ಧಗಂಗಾ ಶ್ರೀಗಳು ಹಾಗೂ ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next