Advertisement

ಚಿರು ಬರ್ತ್‌ಡೇಗೆ ಕ್ಷತ್ರಿಯ ಟೀಸರ್‌

01:54 PM Oct 16, 2020 | Suhan S |

ಅಕ್ಟೋಬರ್‌17- ನಟ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬ. ಪ್ರತಿ ವರ್ಷ ಅವರ ಅಭಿಮಾನಿಗಳು ಚಿರು ಜೊತೆ ಕೇಕ್‌ ಕತ್ತರಿಸಿ ಸಂಭ್ರಮಿಸುತ್ತಿದ ªರು. ಆದರೆ, ಈ ವರ್ಷ ಆ ಸಂಭ್ರಮವಿಲ್ಲ. ಚಿರು ನಮ್ಮನ್ನಗಲಿದ್ದಾರೆ. ಆದರೆ, ಅಭಿಮಾನಿಗಳು ಅವರ ಸಿನಿಮಾ ಮೂಲಕ ಸಂಭ್ರಮಿಸಲಿದ್ದಾರೆ. ಚಿರಂಜೀವಿ ಅವರ “ಶಿವಾರ್ಜುನ’ ಚಿತ್ರ ಮರು ಬಿಡುಗಡೆಯಾಗಿದೆ. ಈಗ ಚಿರಂಜೀವಿ ಅವರ ಮತ್ತೂಂದು ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಅದು”ಕ್ಷತ್ರಿಯ’. ಮೊದಲ ಹಂತವಾಗಿ ಈ ಚಿತ್ರದ ಟೀಸರ್‌ ಅಕ್ಟೋಬರ್‌ 17ರಂದು ಬಿಡುಗಡೆಯಾಗುತ್ತಿದೆ.

Advertisement

ಎ. ವೆಂಕಟೇಶ್‌ ಅವರ ನಿರ್ಮಾಣದ, ಅನಿಲ್‌ ಮಂಡ್ಯ ಅವರ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗಿದೆ. ಚಿರು ಸರ್ಜಾ ಅವರು ನಾಯಕನಾಗಿ ಅಭಿನಯಿಸಿರುವ ಈ ಚಿತ್ರಕ್ಕೆ ಈಗಾಗಲೇ ಶೇ.90ರಷ್ಟು ಭಾಗದ ಚಿತ್ರೀಕರಣ ಮುಗಿದಿದ್ದು, ಈ ತಿಂಗಳ ಅಂತ್ಯದಲ್ಲಿ ಕೊನೆಯ ಹಂತದ ಚಿತ್ರೀಕರಣ ಸಹ ಪ್ರಾರಂಭವಾಗಲಿದೆ. ಸಮಾಜದ ಒಳಿತಿಗಾಗಿ ಹೋರಾಡುವ ಒಬ್ಬ ಆಧುನಿಕ ಕ್ಷತ್ರಿಯನ ಪಾತ್ರದಲ್ಲಿ ನಟ ಚಿರಂಜೀವಿ ಸರ್ಜಾ ಅವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಮೊದಲಾರ್ಧದಲ್ಲಿ ಸೆಂಟಿಮೆಂಟ್‌ ಕಥಾವಸ್ತುವಿದ್ದರೆ, ದ್ವಿತೀಯಾರ್ಧ ಪಕ್ಕಾ ಕಮರ್ಷಿಯಲ್‌ ಅಂಶಗಳನ್ನೊಳಗೊಂಡಿದೆ.

ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿ ಚಿರಂಜೀವಿ ಸರ್ಜಾ, ಸಂಜನಾ ಆನಂದ್‌, ಸುಧಾರಾಣಿ, ದೇವರಾಜ್‌, ಶ್ರೀನಾಥ್‌, ಸಾಧು ಕೋಕಿಲ, ಅಚ್ಯುತ್‌ ಕುಮಾರ್‌, ವಿಶಾಲ್‌ ಹೆಗ್ಡೆ, ಮೋಹನ್‌, ಅಶ್ವಿ‌ನಿ ಗೌಡ, ಭಜರಂಗಿ ಚೇತನ್‌, ಹೊನ್ನವಳ್ಳಿ ಕೃಷ್ಣ, ಗಿರೀಶ್‌, ಶಾಲಿನಿ, ಸ್ವಪ್ನರಾಜ್‌, ಆರತಿ ಕುಲಕರ್ಣಿ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಭರ್ಜರಿ ಚೇತನ್‌ ಕುಮಾರ್‌ ಅವರು ಸಂಭಾಷಣೆ ರಚಿಸುತ್ತಿದ್ದಾರೆ. ರವಿ ವಿ. ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್‌ ಅವರ ಸಂಕಲನ ಈ ಚಿತ್ರಕ್ಕಿದೆ. ಧರ್ಮವಿಶ್‌ ಅವರ ಸಂಗೀತ ಸಂಯೋಜನೆಯ 5 ಹಾಡುಗಳು ಚಿತ್ರದಲ್ಲಿವೆ. ಕೆ.ರವಿವರ್ಮ ಅವರ ಸಾಹಸ ವಿ.ನಾಗೇಂದ್ರ ಪ್ರಸಾದ್‌ ಅವರ ಸಾಹಿತ್ಯ ಚಿತ್ರಕ್ಕಿದೆ. ಇದೇ ವೇಳೆ ಚಿರಂಜೀವಿ ಸರ್ಜಾ ಅಭಿನಯದ ಮತ್ತೂಂದು ಚಿತ್ರ “ರಾಜ ಮಾರ್ತಾಂಡ’ದ ಹಾಡೊಂದನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next