Advertisement

ಕರ್ನಾಟಕ ಪ್ರೀಮಿಯರ್‌ ಲೀಗ್‌ ಬದಲು ಇನ್ನು ಕೆಎಸ್‌ಸಿಎ ಟಿ20 ಕೂಟ

03:39 PM Jun 30, 2022 | Team Udayavani |

ಬೆಂಗಳೂರು: ರಾಜ್ಯ ಕ್ರಿಕೆಟ್‌ ಸಂಸ್ಥೆ “ಕೆಎಸ್‌ಸಿಎ ಟಿ20 ಕ್ರಿಕೆಟ್‌ ಕೂಟ’ವನ್ನು ಆ.15ರಿಂದ 31ರವರೆಗೆ ಆಯೋಜಿಸಲು ನಿರ್ಧರಿಸಿದೆ. ವಿಶೇಷವೇನು ಗೊತ್ತಾ? ಈ ಹಿಂದೆ ವರ್ಷವರ್ಷ ನಡೆಯುತ್ತಿದ್ದ ಕರ್ನಾಟಕ ಪ್ರೀಮಿಯರ್‌ ಲೀಗ್‌ ಕೂಟಕ್ಕೆ ಬದಲಿಯಾಗಿ ಈ ಕೂಟ ನಡೆಯಲಿದೆ. ಅರ್ಥಾತ್‌ ಕೆಎಸ್‌ಸಿಎ ನಡೆಸುತ್ತಿದ್ದ ಕೆಪಿಎಲ್‌ ಕೂಟ ಹೊಸ ಹೆಸರಿನೊಂದಿಗೆ ಬರಲಿದೆ, ಜೊತೆಗೆ ಹೊಸ ಬದಲಾವಣೆಗಳನ್ನೂ ಹೊಂದಿರಲಿದೆ.

Advertisement

ಮುಖ್ಯವಾಗಿ ಈ ಕೂಟ ಕೆಪಿಎಲ್‌ನಂತೆ ಫ್ರಾಂಚೈಸಿ ಆಧಾರಿತವಾಗಿರುವುದಿಲ್ಲ. ಅಂದರೆ ಫ್ರಾಂಚೈಸಿಗಳ ಬಳಿ ಮಾಲಿಕತ್ವವಿರುವುದಿಲ್ಲ, ಕಂಪನಿ ಗಳು ತಂಡದ ಪ್ರಾಯೋಜಕತ್ವವನ್ನು ಮಾತ್ರ ವಹಿಸುತ್ತವೆ. ಸದ್ಯದ ಪ್ರಕಾರ ತಂಡಗಳ ಮಾಲಿಕತ್ವವನ್ನು ಕೆಎಸ್‌ಸಿಎ ತಾನೇ ಉಳಿಸಿಕೊಳ್ಳಲಿದೆ. ಹೀಗಾಗಿ ಇಲ್ಲಿಯವರೆಗೆ ಕೆಪಿಎಲ್‌ ನಲ್ಲಿ ಆಡಿದ್ದ ತಂಡಗಳು ಇನ್ನು ಇರುವುದಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಎಸ್‌ಸಿಎ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಿದೆ.

ಇಒಐಗೆ ಆಹ್ವಾನ: ಕೆಎಸ್‌ಸಿಎ ಕೂಟ ಬೆಂಗಳೂರು, ಹುಬ್ಬಳ್ಳಿ, ಮೈಸೂರಿನಲ್ಲಿ ನಡೆಯಲಿದೆ. ರಾಜ್ಯ ಕ್ರಿಕೆಟ್‌ ಸಂಸ್ಥೆ ಖ್ಯಾತ ಕಂಪನಿಗಳಿಂದ ಇಒಐಯನ್ನು (ಎಕ್ಸ್‌ಪ್ರೆಶನ್‌ ಆಫ್ ಇಂಟರೆಸ್ಟ್‌) ಆಹ್ವಾನಿಸಿದೆ. ಜೂ.29ರಿಂದ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೆಎಸ್‌ಸಿಎ ಕಚೇರಿಯಲ್ಲಿ 11,800 ರೂ. ನೀಡಿ ಖರೀದಿಸಬಹುದು. ಜು.5, ಸಂಜೆ 4 ಗಂಟೆಗಳೊಳಗೆ ಸಂಬಂಧಪಟ್ಟ ದಾಖಲೆಗಳೊಂದಿಗೆ ಇಒಐಯನ್ನು ಚಿನ್ನಸ್ವಾಮಿ ಮೈದಾನದಲ್ಲಿರುವ ಕೆಎಸ್‌ಸಿಎ ಕಚೇರಿಗೆ ಮತ್ತೆ ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ:ಲಂಕಾ-ಆಸೀಸ್ ಟೆಸ್ಟ್: ಭಾರೀ ಗಾಳಿಗೆ ಕುಸಿದು ಬಿದ್ದ ಪ್ರೇಕ್ಷಕರ ಗ್ಯಾಲರಿ; ತಪ್ಪಿದ ಅನಾಹುತ

ಬೆಂಗಳೂರು ನಗರ, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ರಾಯಚೂರು, ಮಂಗಳೂರು ತಂಡಗಳ ಪ್ರಾಯೋಜಕತ್ವ ವಹಿಸಲು, ಅವುಗಳ ಹೆಸರಿನ ಮೇಲೆ ಅಧಿಕಾರ ಪಡೆಯಲು ಕಂಪನಿಗಳು ಯತ್ನಿಸಬಹುದು. ಆದರೆ ಈ ಪ್ರಕ್ರಿಯೆಯಲ್ಲಿ ಎಲ್ಲ ಪ್ರಕ್ರಿಯೆಗಳನ್ನು ಕೆಎಸ್‌ಸಿಎ ತಾನೇ ಉಳಿಸಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next