Advertisement

ಉತ್ತರ ಪ್ರದೇಶಕ್ಕೆ ಶರಣಾದ ಅಧ್ಯಕ್ಷರ ಇಲೆವೆನ್‌

06:00 AM Aug 08, 2018 | |

ಹೊಸದಿಲ್ಲಿ: ಇಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ತಿಮ್ಮಪ್ಪಯ್ಯ ಕ್ರಿಕೆಟ್‌ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯ ಮೂರನೇ ದಿನ ಮುಕ್ತಾಯವಾಗಿದ್ದು, ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್‌ ಪಡೆ, ಉತ್ತರ ಪ್ರದೇಶ ಕ್ರಿಕೆಟ್‌ ತಂಡದ ವಿರುದ್ಧ 9 ವಿಕೆಟ್‌ಗಳ ಸೋಲು ಕಂಡಿದೆ. ಇಲ್ಲಿನ ಜಸ್ಟ್‌ ಕ್ರಿಕೆಟ್‌ (ಟಿ) ಮೈದಾನದಲ್ಲಿ ನಡೆದ ಈ ಪಂದ್ಯದ ಮೂರನೇ ದಿನವಾದ ಮಂಗಳವಾರ, ಕೆಎಸ್‌ಸಿಎ ತಂಡ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 381 ರನ್ನಿಗೆ ಆಲೌಟ್‌ ಆಯಿತು. ಪಂದ್ಯದ ಮೊದಲೆರಡು ದಿನಗಳ ಆಟದಲ್ಲಿ, ಕೆಎಸ್‌ಸಿಎ ಮೊದಲ ಇನ್ನಿಂಗ್ಸ್‌ನಲ್ಲಿ 135 ದಾಖಲಿಸಿದ್ದರೆ, ಉತ್ತರ ಪ್ರದೇಶ 425 ರನ್‌ ಗಳಿಸಿತ್ತು. 

Advertisement

ಹಾಗಾಗಿ, ಮೂರನೇ ದಿನದಾಟದಲ್ಲಿ ಉತ್ತರ ಪ್ರದೇಶಕ್ಕೆ ಗೆಲುವಿಗಾಗಿ 91 ರನ್‌ ಸವಾಲು ಸಿಕ್ಕಿತು. ಅಂತೆಯೇ, ತನ್ನ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಉತ್ತರ ಪ್ರದೇಶ, ಶಿವರಾಮ್‌ ಚೌಧರಿ (41 ರನ್‌), ಉಮಂಗ್‌ ಶರ್ಮಾ (ಅಜೇಯ 37 ರನ್‌) ನೆರವಿನೊಂದಿಗೆ ಕೇವಲ 18 ಓವರ್‌ಗಳಲ್ಲಿ 93 ರನ್‌ ಗಳಿಸಿ ಗುರಿ ಮುಟ್ಟಿತು. ಆಲೂರಿನ ಮೈದಾನದಲ್ಲಿ ನಡೆಯುತ್ತಿರುವ ಮತ್ತೂಂದು ಸೆಮಿಫೈನಲ್‌ ಪಂದ್ಯದ ಮೂರನೇ ದಿನಾಂತ್ಯಕ್ಕೆ ಛತ್ತೀಸ್‌ಗಢ ತಂಡ, ಗುಜರಾತ್‌ ವಿರುದ್ಧ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 5 ವಿಕೆಟಿಗೆ 158 ರನ್‌ ಗಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next