ಬೆಂಗಳೂರು: ಗೆಲುವಿನ ಓಟ ಮುಂದುವರಿಸಿರುವ ಹುಬ್ಬಳ್ಳಿ ಟೈಗರ್ ತಂಡವು ಬುಧವಾರ ನಡೆದ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಕೂಟದಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಿದೆ.
ಮನ್ವತ್ ಕುಮಾರ್ ಅರ ಆಲ್‌ರೌಂಡ್ ಪ್ರದರ್ಶನದಿಂದ ಹುಬ್ಬಳ್ಳಿ ತಂಡವು ಸತತ ಮೂರನೇ ಗೆಲುವು ದಾಖಲಿಸಿದೆ. ಬಿಗು ದಾಳಿ ಸಂಘಟಿಸಿದ ಅವರು ನಾಲ್ಕು ವಿಕೆಟ್ ಪಡೆದರಲ್ಲದೇ ಬ್ಯಾಟಿಂಗ್‌ನಲ್ಲಿ 28 ರನ್ ಗಳಿಸಿದ್ದರು. ಇದರಿಂದ ತಂಡವು ಇನ್ನೂ 39 ಎಸೆತಗಳು ಬಾಕಿ ಉಳಿದಿರುವಂತೆ ಐದು ವಿಕೆಟ್‌ಗಳ ಜಯ ಸಾಧಿಸಿತು.
ಬೆಂಗಳೂರು ಬ್ಲಾಸ್ಟರ್ ಪರ ಮಾಯಾಂಕ್ ಅಗರ್ವಾಲ್ ಅರ್ಧಶತಕ ದಾಖಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ ತಂಡವು 18.4 ಓವರ್‌ಗಳಲ್ಲಿ ಕೇವಲ 105 ರನ್ನಿಗೆ ಆಲೌಟಾಯಿತು. ಅಗರ್ವಾಲ್ 34 ಎಸೆತಗಳಿಂದ 50 ರನ್ ಹೊಡೆದರು. ಮನ್ವತ್ ಕುಮಾರ್ 15 ರನ್ನಿಗೆ 4 ವಿಕೆಟ್ ಕಿತ್ತು ಗಮನ ಸೆಳೆದರು. ಗೆಲ್ಲಲು ಸುಲಭ ಸವಾಲು ಪಡೆದ ಹುಬ್ಬಳ್ಳಿ ಟೈಗರ್ ತಂಡವು ಮನ್ವತ್, ಮನೀಷ್ ಪಾಂಡೆ ಮತ್ತು ಎಲ್. ಸಿಸೋಡಿಯ ಅವರ ಉತ್ತಮ ಆಟ ದಿಂದಾಗಿ 13.3 ಓವರ್‌ಗಳಲ್ಲಿ 5 ವಿಕೆಟಿಗೆ 111 ರನ್ ಗಳಿಸಿ ಜಯಭೇರಿ ಬಾರಿ ಸಿತು. ಸಿಸೋಡಿಯ 33, ಮನೀಷ್ ಅಜೇಯ 23 ರನ್ ಗಳಿಸಿದರು.
ಮೈಸೂರು ವಾರಿಯರ್ಗೆ ಜಯ
ದಿನದ ಇನ್ನೊಂದು ಪಂದ್ಯದಲ್ಲಿ ಮೈಸೂರು ವಾರಿಯರ್ ತಂಡವು ಗುಲ್ಬರ್ಗ ಮಿಸ್ಟಿಕ್ಸ್ ತಂಡವನ್ನು 54 ರನ್ನುಗಳಿಂದ ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ವಾರಿಯರ್ ತಂಡವು ನಿಗದಿತ 20 ಓವರ್ ಗಳಲ್ಲಿ 5 ವಿಕೆಟಿಗೆ 198 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಗುಲ್ಬರ್ಗ ತಂಡವು 19 ಓವರ್‌ಗಳಲ್ಲಿ 144 ರನ್ನಿಗೆ ಆಲೌಟಾಗಿ ಸೋಲನ್ನು ಒಪ್ಪಿಕೊಂಡಿತು.