Advertisement

“ಆಧುನಿಕ ಯುಗದಲ್ಲಿ  ಕ್ಷಣಕ್ಕೊಂದು ಹೊಸ ಆವಿಷ್ಕಾರ’

05:16 PM Feb 27, 2017 | Team Udayavani |

ದರ್ಬೆ : ಅತ್ಯಂತ ವೇಗವಾಗಿ ಬದಲಾಗುತ್ತಿರುವ ಈ ಸಂಪರ್ಕ, ತಂತ್ರಜ್ಞಾನದ ಯುಗದಲ್ಲಿ ಪ್ರತಿಯೊಂದು ಕ್ಷಣದಲ್ಲಿಯೂ ಹೊಸ ಆವಿಷ್ಕಾರಗಳನ್ನು ಕಾಣುವಂತಾಗಿದೆ ಎಂದು ಸಂತ ಫಿಲೋಮಿನಾ ಪ. ಪೂ. ಕಾಲೇಜಿನ ಪ್ರಾಂಶುಪಾಲ ವಂ| ವಿಜಯ್‌ ಲೋಬೊ ಅವರು ಹೇಳಿದರು.

Advertisement

ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಗಣಕಶಾಸ್ತ್ರ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ ಅಂತರ್‌ ಕಾಲೇಜು ಐಟಿ ಮತ್ತು ಸಾಂಸ್ಕೃತಿಕ ಉತ್ಸವ ಟೆಕ್ನೋಸ್ಪಾರ್ಕ್‌ – 2017 ಇದರ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸ್ಪರ್ಧಾ ಮನೋಭಾವನೆಯಿಂದ ಭಾಗವಹಿಸಿದ ಪ್ರತಿಯೊಬ್ಬರೂ ಅಭಿನಂದನಾರ್ಹರು ಎಂದು ಹೇಳಿದರು.

ಗೌರವ ಅತಿಥಿಯಾಗಿದ್ದ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ವಂ| ಡಾ| ಆ್ಯಂಟನಿ ಪ್ರಕಾಶ್‌ ಮೊಂತೆರೊ ಮಾತನಾಡಿ, ನಾವು ಆಧುನಿಕ ತಂತ್ರಜ್ಞಾನದ ಪ್ರಭಾವದಿಂದಾಗಿ ಮಾನವೀಯ ಸಂಬಂಧಗಳನ್ನು ಮರೆಯುತ್ತಿದ್ದೇವೆ. ಸಮಾಜದಲ್ಲಿ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳುವ ಸನ್ನಿವೇಶ ನಿರ್ಮಾಣವಾಗಬೇಕು ಎಂದರು.

ಸ್ನಾತಕೋತ್ತರ ಗಣಕಶಾಸ್ತ್ರ ವಿಭಾಗದ ಸಂಯೋಜಕ ಗೋವಿಂದ ಪ್ರಕಾಶ್‌ ಮತ್ತು ಟೆಕ್ನೋಸ್ಪಾರ್ಕ್‌ ಸಂಯೋಜಕ ಹರೀಶ್‌ ಭಾರದ್ವಾಜ್‌ ಉಪಸ್ಥಿತರಿದ್ದರು. ಗಣಕಶಾಸ್ತ್ರ ವಿಭಾಗದ ಉಪನ್ಯಾಸಕ ಸೂರ್ಯನಾರಾಯಣ ಭಟ್‌ ಬಿ. ಬಹುಮಾನ ವಿಜೇತರ ವಿವರ ನೀಡಿದರು. ನಾಗಶ್ರೀ ವಿ. ಸ್ವಾಗತಿಸಿ, ಕೌಶಲ್ಯಾ ಎಸ್‌. ವಂದಿಸಿದರು. ಸುರಕ್ಷಾ ಎಸ್‌. ಕಾರ್ಯಕ್ರಮ ನಿರ್ವಹಿಸಿದರು.

ಟೆಕ್ನೋಸ್ಪಾರ್ಕ್‌ ವಿಜೇತರು
ಮಂಗಳೂರು ವಿವಿ ಮಟ್ಟದಲ್ಲಿ ಜರಗಿದ ಸ್ಪರ್ಧೆಯಲ್ಲಿ 12 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, ಮಂಗಳೂರಿನ ಕೆನರಾ ಕಾಲೇಜು ತಂಡ ಸಮಗ್ರ ಪ್ರಶಸ್ತಿ, ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪುತ್ತೂರಿನ ವಿವೇಕಾನಂದ ಕಾಲೇಜು ತಂಡ ಪಡೆದುಕೊಂಡಿತು. ಪ್ರಸೆಂಟೇಷನ್‌ ಸ್ಪರ್ಧೆಯಲ್ಲಿ ಕಣಚೂರು ಕಾಲೇಜು ದೇರಳಕಟ್ಟೆ (ಪ್ರ), ಸಂತ ಫಿಲೋಮಿನಾ ಕಾಲೇಜು ಪುತ್ತೂರು (ದ್ವಿ), ವೆಬ್‌ ಡಿಸೈನಿಂಗ್‌ನಲ್ಲಿ ಸಂತ ಅಲೋ ಶಿಯಸ್‌ ಕಾಲೇಜು ಮಂಗಳೂರು (ಪ್ರ), ಸೇಕ್ರೆಡ್‌ ಹಾರ್ಟ್‌ ಕಾಲೇಜು ಮಡಂತ್ಯಾರು (ದ್ವಿ), ನೆಟ್‌ವರ್ಕ್‌ ಗೇಮಿಂಗ್‌ನಲ್ಲಿ ಫಿಲೋಮಿನಾ ಕಾಲೇಜು (ಪ್ರ), ಸಂತ ಅಲೋಶಿಯಸ್‌ ಕಾಲೇಜು ಮಂಗಳೂರು (ದ್ವಿ), ಕೊಲಾಜ್‌ನಲ್ಲಿ ವಿವೇಕಾನಂದ ಕಾಲೇಜು (ಪ್ರ), ಕಣಚೂರು ಕಾಲೇಜು ದೇರಳಕಟ್ಟೆ (ದ್ವಿ),  ಕೋಡಿಂಗ್‌ನಲ್ಲಿ  ವಿವೇಕಾನಂದ ಕಾಲೇಜು (ಪ್ರ), ಸೇಕ್ರೆಡ್‌ ಹಾರ್ಟ್‌ ಕಾಲೇಜು ಮಡಂತ್ಯಾರು (ದ್ವಿ), ಐಸ್‌ ಬ್ರೇಕರ್‌ನಲ್ಲಿ ಕೆನರಾ ಕಾಲೇಜು ಮಂಗಳೂರು (ಪ್ರ), ಸಂತ ಅಲೋಶಿಯಸ್‌ ಕಾಲೇಜು ಮಂಗಳೂರು (ದ್ವಿ), ಆ್ಯಪ್‌ ಚಾಲೆಂಜ್‌ನಲ್ಲಿ ಎಸ್‌ಎಂಎಸ್‌ ಕಾಲೇಜು ಬ್ರಹ್ಮಾವರ (ಪ್ರ), ವಿವೇಕಾನಂದ ಕಾಲೇಜು (ದ್ವಿ), ಜನಪದ ನೃತ್ಯದಲ್ಲಿ ಕೆನರಾ ಕಾಲೇಜು ಮಂಗಳೂರು (ಪ್ರ) ಮತ್ತು ಸೇಕ್ರೆಡ್‌ ಹಾರ್ಟ್‌ ಕಾಲೇಜು ಮಡಂತ್ಯಾರು (ದ್ವಿ) ಬಹುಮಾನ ಗಳಿಸಿತು.

Advertisement

ಮಾನವ ಸಂಪತ್ತಿನ ಕೊರತೆ
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ| ಲಿಯೊ ನೊರೊನ್ಹ ಮಾತನಾಡಿ,  ದೇಶದಲ್ಲಿ ಅತ್ಯಾ ಧುನಿಕ ರೀತಿಯ ಯಂತ್ರೋಪಕರಣಗಳು ಲಭ್ಯವಿವೆ. ಆದರೆ ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಾಮರ್ಥ್ಯವಿರುವ ಮಾನವ ಸಂಪತ್ತಿನ ಕೊರತೆ ಯಿದೆ. ಇಂದಿನ ದಿನಗಳಲ್ಲಿ ಗುಣಮಟ್ಟದ ಸಂಪ ನ್ಮೂಲಕ್ಕೆ  ಬಹಳಷ್ಟು  ಬೇಡಿಕೆಯಿದೆ ಎಂದರು.
 

Advertisement

Udayavani is now on Telegram. Click here to join our channel and stay updated with the latest news.

Next