Advertisement

ಆಗ ಗಂಡಸ್ತನ ಎಲ್ಲಿ ಹೋಗುತ್ತೆ…ಸಿಎಂ ವಿರುದ್ಧ ಈಶ್ವರಪ್ಪ ಹೇಳಿದ್ದೇನು!

01:15 PM Mar 05, 2018 | Sharanya Alva |

ಬೈಂದೂರು: ಹಿಂದೂ, ಮಠ ಮಂದಿರ ವಶಪಡಿಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೇರೆ ಧರ್ಮದ ಧಾರ್ಮಿಕ ಕೇಂದ್ರವನ್ನು ಯಾಕೆ ಮುಟ್ಟಿ ನೋಡಲ್ಲ..ಆವಾಗ ನಿಮ್ಮ ಗಂಡಸ್ತನ ಎಲ್ಲಿ ಹೋಗುತ್ತೇ ಎಂದು ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Advertisement

ಸೋಮವಾರ ಬೈಂದೂರಿನಲ್ಲಿ ಬಿಜೆಪಿ ಜನ ಸುರಕ್ಷಾ ಯಾತ್ರೆಯ ಸಮಾವೇಶದಲ್ಲಿ ಭಾಗವಹಿಸಿದ್ದ ಅವರು, ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವೋಟಿಗಾಗಿ ಜಾತಿ, ಧರ್ಮಕ್ಕೆ ಬೆಂಕಿ ಇಡೋದು ಸುಲಭವಾಗಿದ್ಯಾ ಎಂದು ಪ್ರಶ್ನಿಸಿದ ಅವರು, ಒಲೈಕೆ ರಾಜಕಾರಣ ಮಾಡುತ್ತಿರುವುದಾಗಿ ಆರೋಪಿಸಿದರು.

ಸಿಎಂ ಸಿದ್ದರಾಮಯ್ಯಗೆ ಸೋನಿಯಾಗಾಂಧಿ ತಾಯಿ, ಮಹದಾಯಿ ವಿವಾದಕ್ಕೆ ಸಿದ್ದರಾಮಯ್ಯನ ತಾಯಿಯೇ ಕಾರಣ ಎಂದು ಟೀಕಿಸಿದರು. ಸಿಎಂ ಸಿದ್ದರಾಮಯ್ಯನವರ ನಡವಳಿಕೆಯೇ ಸರಿಯಿಲ್ಲ. ಸಿದ್ದು ಮೈಯಲ್ಲಿ ಟಿಪ್ಪು ವಂಶದ ರಕ್ತ ಹರಿಯುತ್ತಿದೆ. ಅದಕ್ಕಾಗಿಯೇ ಟಿಪ್ಪು ಜಯಂತಿ ಆಚರಿಸಿರುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next