Advertisement

ದೇಶದಲ್ಲಿ ಯಾವುದೇ ಚುನಾವಣೆ ನಡೆದರೂ ಗೆಲುವು ಬಿಜೆಪಿಯದ್ದೇ: ಈಶ್ವರಪ್ಪ

03:36 PM Dec 06, 2022 | Team Udayavani |

ಶಿವಮೊಗ್ಗ : ದೇಶದಲ್ಲಿ ಇನ್ನು ಮುಂದಿನ ದಿನಗಳಲ್ಲಿ ಯಾವುದೇ ಚುನಾವಣೆ ನಡೆದರೂ ಗೆಲುವು ಬಿಜೆಪಿಯದ್ದೇ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸೋಮವಾರ ನಡೆದ ಚುನಾವಣಾ ಸಮೀಕ್ಷೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದಾಗಿ ಹೇಳಿತ್ತು, ಅದರಂತೆ ಇನ್ನು ಮುಂದಿನ ದಿನಗಳಲ್ಲಿ ಅಸೆಂಬ್ಲಿ, ಪಾರ್ಲಿಮೆಂಟ್ ಸೇರಿದಂತೆ ಯಾವುದೇ ಚುನಾವಣೆ ನಡೆದರೂ ಅದರಲ್ಲಿ ಗೆಲುವು ಬಿಜೆಪಿಯದ್ದೇ ಇರುತ್ತದೆ ಎಂದು ಹೇಳಿದರು.

Advertisement

ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ…? ಹಾಗೋ ಹೀಗೋ ಕಾಂಗ್ರೆಸ್ ಕರ್ನಾಟಕದಲ್ಲಿತ್ತು. ರಾಜ್ಯದಲ್ಲಿ ಇಬ್ಬರು ಪೈಲ್ವಾನ್ ಗಳು ನಾಯಕತ್ವಕ್ಕಾಗಿ ಹೊಡೆದಾಡುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕುರಿತು ವ್ಯಂಗ್ಯವಾಡಿದರು.

ಸಿದ್ದರಾಮಯ್ಯನವರ ಪರಿಸ್ಥಿತಿ ನೋಡಿದ್ರೇ ಅವರಿಗೆ ಕ್ಷೇತ್ರವೇ ಇಲ್ಲದಂತಾಗಿದೆ. ಮಾರ್ಯಾದೆ ಉಳಿಸಿಕೊಳ್ಳಲು ರಾಜ್ಯದ ಯಾವುದೇ ಕ್ಷೇತ್ರ ಕೊಟ್ಟರೂ ನಿಲ್ಲಲು ಸಿದ್ಧನಿದ್ದೇನೆ ಎನ್ನುತ್ತಾರೆ ಸಿದ್ದರಾಮಯ್ಯನವರು. ಯಾಕೇ ಕೋಲಾರ ಬೇಡ, ಯಾಕೇ ಬಾದಾಮಿ, ಚಾಮುಂಡೇಶ್ವರಿ ಯಾಕೇ ಬೇಡ…? ಆ 224 ಕ್ಷೇತ್ರದಲ್ಲಿ ಈ ಮೂರು ಕ್ಷೇತ್ರ ಇಲ್ವಾ? ಯಾಕೇ ಹೊಸದನ್ನು ಹುಡುಕಿ ಹೋಗ್ತಾ ಇದ್ದೀರಿ? ಕಾಂಗ್ರೆಸ್ ನ ನಾಯಕರಿಗೆ ಕ್ಷೇತ್ರ ಕ್ಲಿಯರ್ ಅಗಿಲ್ಲ ಅಂದ್ರೇ ಹೇಗೆ..? ಬಹುಮತ ಇರಲಿ, ಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವು ಸಿಗಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಸಂಘಟನಾತ್ಮಕ ಪೇಜ್ ಪ್ರಮುಖ್ ವರೆಗೂ ಕೆಲಸ ಮಾಡುತ್ತಿದೆ. ಕಾರ್ಯಕರ್ತರ ಮನೆ ಮನೆಗೂ ಹೋಗಿ, ಕೆಲಸ ಮಾಡಲಾಗುತ್ತಿದೆ. ಅವರ ಅಭಿಪ್ರಾಯದಂತೆ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ರಾಜ್ಯದಲ್ಲೂ ಬರುತ್ತೇ… ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಗುಜರಾತ್ ಹಾಗೂ ಹಿಮಾಚಲ್ ಪ್ರದೇಶದಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತೆ ಎಂದು ಹೇಳಿದ್ದಾರೆ.

ಜನಾರ್ಧನ್ ರೆಡ್ಡಿ ಗಂಗಾವತಿ ಸ್ಫರ್ಧೆ ವಿಚಾರವಾಗಿ ಮಾತನಾಡಿದ ಅವರು ನನಗೂ ಈ ವಿಚಾರ ಮಾಧ್ಯಮದ ಮೂಲಕ ತಿಳಿಯಿತು ದೇಶದಲ್ಲಿನ ಪ್ರತಿ ವ್ಯಕ್ತಿಗೂ ಯಾವುದೇ ಪಕ್ಷಕ್ಕೂ ಹೋಗುವ ಅಧಿಕಾರ ಇದೆ. ರಾಜ್ಯದ ಯಾವ ನಾಯಕರ ಜೊತೆ ಮಾತನಾಡಿದ್ದಾರೆ, ಬಿಟ್ಟಿದ್ದಾರೆ ನನಗೆ ಗೊತ್ತಿಲ್ಲ, ಬಿಜೆಪಿ ಸೇರ್ತಾರೋ ಬೇರೆ ಪಕ್ಷಕ್ಕೇ ಹೋಗ್ತಾರೋ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

Advertisement

ಇದನ್ನೂ ಓದಿ: ನೀವು ನಮ್ಮ ಸೋಲು, ಸಂಕಟಗಳಿಂದ ಲಾಭ ಪಡೆದುಕೊಂಡಿದ್ದೀರಿ…ಭಾರತದ ವಿರುದ್ಧ ಉಕ್ರೇನ್ ಅಸಮಾಧಾನ

ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಅವರು ಈ ಬಗ್ಗೆ ನನಗೆ ಯಾವುದೇ ವಿಚಾರ ಗೊತ್ತಿಲ್ಲ ಬಿಜೆಪಿ ಕೇಂದ್ರದ ನಾಯಕರು ಜೊತೆಯಾಗಿ ತೀರ್ಮಾನ ಮಾಡುತ್ತಾರೆ, ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆಯಲು ತಂತ್ರಗಾರಿಕೆ ನಾಯಕರು ಮಾಡುತ್ತಾರೆ ಹಾಗಾಗೀ ಸಂಪುಟ ವಿಸ್ತರಣೆ ಮಾಡಬಹುದು ಅಥವಾ ಹಾಗೇ ಮುಂದುವರೆಸಬಹುದು ಎಂದು ಹೇಳಿದರು.

ಮಹಾರಾಷ್ಟ್ರ ಗಡಿ ಗಲಾಟೆ ವಿಚಾರದಲ್ಲಿ ಮಹಾರಾಷ್ಟ್ರದವರಿಗೆ ಏನು ಉದ್ಯೋಗ ಇಲ್ಲ, ಅವರಿಗೆ ಕರ್ನಾಟಕದ ಒಂದಿಂಚೂ ಭೂಮಿ ಸಿಗಲ್ಲ, ಒಂದು ಹನಿ ನೀರು ಸಿಗಲ್ಲ. ದೇಶ ಒಂದಾಗಬೇಕು ಎಂದು ಬಿಜೆಪಿ ಪ್ರಯತ್ನ ಮಾಡುತ್ತಾ ಇದೆ. ರಾಜ್ಯದಲ್ಲಿ ಇರುವ ಮರಾಠಿಗರು ಸಂತೋಷದಿಂದ ಕೆಲಸ ಮಾಡಿಕೊಂಡು ಹೋಗ್ತ ಇದ್ದಾರೆ. ಮಹಾರಾಷ್ಟ್ರದಲ್ಲಿ ಕೂಡ ಕನ್ನಡಿಗರು ಉದ್ಯೋಗ ಮಾಡಿಕೊಂಡು ಇದ್ದಾರೆ. ಎರಡು ರಾಜ್ಯದವರು ಅಣ್ಣ- ತಮ್ಮಂದಿರಂತೆ ಇದ್ದೀವಿ, ಮಹಾರಾಷ್ಟ್ರದ ಕೆಲ ರಾಜಕಾರಣಿಗಳು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಾ ಇದ್ದಾರೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next