Advertisement

Chikkamagaluru: ಅಪ್ಪ ಮಕ್ಕಳ ಕೈಯಿಂದ ಬಿಜೆಪಿ ಪಕ್ಷ ಮುಕ್ತ ಮಾಡಬೇಕು… :ಈಶ್ವರಪ್ಪ ಕಿಡಿ

01:29 PM May 30, 2024 | Team Udayavani |

ಚಿಕ್ಕಮಗಳೂರು: ರಾಜ್ಯದಲ್ಲಿ ಬಿಜೆಪಿ ಪಕ್ಷ ಅಪ್ಪ ಮಕ್ಕಳ ಕೈಯಲ್ಲಿದೆ. ಸಾಮೂಹಿಕ ನಾಯಕತ್ವ ಪಕ್ಷದಲ್ಲಿ ಬರಬೇಕು. ಪಕ್ಷ ಶುದ್ದೀಕರಣ ಆಗಬೇಕು ಎನ್ನುವುದು ನನ್ನ ಹೋರಾಟದ ಉದ್ದೇಶ ಎಂದು ಕೆ.ಎಸ್. ಈಶ್ವರಪ್ಪ ಬಿಎಸ್ ವೈ ಹಾಗೂ ಮಕ್ಕಳ ವಿರುದ್ಧ ಗುಡುಗಿದರು.

Advertisement

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈ ಹಿಂದೆ ಬಿಜೆಪಿಯಲ್ಲಿ ಸಾಮೂಹಿಕ ನಾಯಕತ್ವ ಇತ್ತು. ಈಗ ಪಕ್ಷ ಅಪ್ಪ ಮಕ್ಕಳ ಕೈಯಲ್ಲಿ ಸಿಕ್ಕಿದೆ. ಅಪ್ಪ ಮಕ್ಕಳ ಕೈಯಿಂದ ಪಕ್ಷ ಮುಕ್ತ ಮಾಡಬೇಕು ಎಂಬ ಆಪೇಕ್ಷೆ ಕಾರ್ಯಕರ್ತರು ಮತ್ತು ನಾಯಕರಲ್ಲಿದೆ ಎಂದರು.

ನರೇಂದ್ರ ಮೋದಿ ಅವರು ಕಾಂಗ್ರೆಸ್ ಕುಟುಂಬ ರಾಜ ಕಾರಣ ಮುಕ್ತ ಮಾಡಬೇಕು ಎನ್ನುತ್ತಾರೆ. ಆದರೆ, ರಾಜ್ಯ ಬಿಜೆಪಿ ಬಿಎಸ್ ವೈ, ರಾಘವೇಂದ್ರ, ವಿಜಯೇಂದ್ರ ಕೈಯಲ್ಲಿದೆ. ಪಕ್ಷವನ್ನು ಅಪ್ಪ ಮಕ್ಕಳಿಂದ ಮುಕ್ತ ಮಾಡಬೇಕು ಎಂದು ಹೇಳಿದರು.

ಬಿಎಸ್ ವೈ ಏನೇ ಹೇಳಿದರೂ ಸರಿ ಇದೆ ಎಂಬ ಭ್ರಮೆಯಲ್ಲಿ ಕೇಂದ್ರದ ನಾಯಕರು ಇದ್ದಾರೆ. ಇದನ್ನು ಕೇಂದ್ರದ ನಾಯಕರಿಗೆ ತಿಳಿಸಬೇಕಿದೆ. ಹಾಗಾಗಿ ನಾನು ತಿರುಗಿ ಬಿದ್ದು ಚುನಾವಣೆಗೆ ನಿಂತೆ ಎಂದರು.

ಪಕ್ಷವನ್ನು ಶುದ್ದೀಕರಣ ಮಾಡದಿದ್ದರೇ ರಾಜ್ಯದಲ್ಲಿ ಬಿಜೆಪಿ ಅಡ್ರಸ್ ಇರಲ್ಲ. ಬಿಎಸ್ ವೈ ಅವರದ್ದು ಸ್ವಾರ್ಥ ರಾಜಕಾರಣ ಪಕ್ಷ ಶುದ್ದೀಕರಣ ಮಾಡಬೇಕೆನ್ನುವುದು ಪ್ರಾಮಾಣಿಕ ರಾಜಕಾರಣ. ನಾನು ಹೋರಾಟ ಶುರು ಮಾಡಿದ್ದೇನೆ. ಮುಂದೆ ನಮ್ಮೊಂದಿಗೆ ಇನಷ್ಟು ಜನರು ಸೇರ್ಪಡೆಗೊಳ್ಳಲಿದ್ದಾರೆ. ಬಿಜೆಪಿಯಲ್ಲಿ ಉಚ್ಚಾಟನೆಗೆ ಬೆಲೆ ಇಲ್ಲ. ಮುಖಂಡರು ಕಾರ್ಯಕರ್ತರು ಹೇದರದೆ ಪಕ್ಷ ಶುದ್ದೀಕರಣಕ್ಕೆ ಕೈ ಜೋಡಿಸಿ ಎಂದು ಕರೆ ನೀಡಿದರು.

Advertisement

ಇದನ್ನೂ ಓದಿ: Bribe: ದಾಖಲೆ ನೀಡಲು ಲಂಚ… ಉಪ್ಪೂರು ಪಿಡಿಒ, ಬಿಲ್‌ ಕಲೆಕ್ಟರ್ ಲೋಕಾಯುಕ್ತ ಬಲೆಗೆ

Advertisement

Udayavani is now on Telegram. Click here to join our channel and stay updated with the latest news.

Next