Advertisement

BSY ಜೊತೆ ಹೊಂದಾಣಿಕೆ ಸಂಧಾನಕ್ಕೆ ಯತ್ನ ನಡೆದಿವೆ: ಯತ್ನಾಳ ಪಾಟೀಲ

08:52 AM Jun 21, 2024 | Kavyashree |

ವಿಜಯಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆ ನಾನು ಹೊಂದಾಣಿಕೆ ಮಾಡಿಕೊಳ್ಳುವಂತೆ ಸಂಧಾನ ಪ್ರಯತ್ನಗಳು ನಡೆದಿರುವುದು ಸತ್ಯ ಎಂದು ಯಡಿಯೂರಪ್ಪ ಕುಟುಂಬ ವಿರೋಧಿ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಪಷ್ಟಪಡಿಸಿದ್ದಾರೆ.

Advertisement

ಶುಕ್ರವಾರ ನಗರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ಪತ್ರಕರ್ತರ ಜೊತೆ ಮಾತನಾಡಿದ ಯತ್ನಾಳ, ನನಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡುವುದಾಗಿ ಹೇಳಿದರು. ವಿಜಯೇಂದ್ರನೇ ಅದನ್ನು ಇಟ್ಟುಕೊಳ್ಳಲಿ, ನಾನು ರಾಜ್ಯಾಧ್ಯಕ್ಷ ಆಗುತ್ತೇನೆ ಎಂದು ಸಂಧಾನಕಾರರಿಗೆ ಹೇಳಿದ್ದೇನೆ ಎಂದು ವಿವರಿಸಿದರು.

ಬಿಜೆಪಿ ಪಕ್ಷದಲ್ಲಿ ನಾನು ಪ್ರಬಲ ಪೈಪೋಟಿ ನೀಡುತ್ತೇನೆಂಬ ಕಾರಣಕ್ಕೆ ಈ ಹೊಂದಾಣಿಕೆ ಪ್ರಯತ್ನಗಳು ನಡೆದಿವೆ. ನಾನು ರಾಜ್ಯಾಧ್ಯಕ್ಷ ಸ್ಥಾನ ಕೇಳಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next