Advertisement
ರಾಮಮಂದಿರ ನಿರ್ಮಾಣ, ದೇಣಿಗೆ ಸಂಗ್ರಹ ವಿಚಾರದಲ್ಲಿ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ನಗರದಲ್ಲಿ ಗುರುವಾರ ಪ್ರತಿಕ್ರಿಯಿಸಿದ ಅವರು, 10 ರೂ. ದೇಣಿಗೆ ನೀಡದ ಇವರು ಲೆಕ್ಕ ಕೇಳಲು ಯಾರು. ದೇಣಿಗೆ ಕೊಟ್ಟವರಿಗೆ ಲೆಕ್ಕ ಕೇಳಲು ಯೋಗ್ಯತೆಯಿದೆ. ದೇಣಿಗೆ ನೀಡದ ಮನೆಗಳಿಗೆ ಗುರುತು ಹಾಕಿದ್ದರೆ ಅದನ್ನು ಎಚ್.ಡಿ. ಕುಮಾರಸ್ವಾಮಿಯವರು ತೋರಿಸಲಿ.
Related Articles
Advertisement
ಮೀಸಲಾತಿಗಾಗಿ ಕುರುಬ ಸಮುದಾಯ ನಡೆಸಿದ ಸಮಾವೇಶ ಯಶಸ್ವಿಯಾಗಿರುವುದು ಸಿದ್ದರಾಮಯ್ಯನವರಿಗೆ ಕಿರಿಕಿರಿ ತಂದಿದೆ. ಸಮಾವೇಶಕ್ಕೆ ಲಕ್ಷ ಲಕ್ಷ ಜನ ಬಂದಿದ್ದರು. ಸಮುದಾಯದ ಸ್ವಾಮೀಜಿಗಳು ಹೋಗಿ ಕರೆದರೂ ಹೋರಾಟ, ಸಮಾವೇಶಕ್ಕೆ ಸಿದ್ದರಾಮಯ್ಯ ಬರಲಿಲ್ಲ. ಇದು ನನಗೆ ನೋವು ತಂದಿದೆ. ಮಾಧ್ಯಮಗಳಲ್ಲಿ ಪಾದಯಾತ್ರೆ ನೋಡಿ, ಕುರುಬ ಸುನಾಮಿಯನ್ನು ಕಂಡು ಸಿದ್ದರಾಮಯ್ಯ ಗಾಬರಿಯಾದರು ಎಂದು ತಿರುಗೇಟು ನೀಡಿದರು.
ಎಚ್.ಡಿ. ಕುಮಾರಸ್ವಾಮಿಯವರ ಆಟಕ್ಕೆ ಅವರ ತಂದೆ ಏನು ಹೇಳಬೇಕೋ ಅದನ್ನು ಹೇಳಿದ್ದಾರೆ. ಸಿದ್ದರಾಮಯ್ಯನವರ ಮಾತನ್ನು ಕಾಂಗ್ರೆಸ್‌ನವರೇ ಒಪ್ಪುವುದಿಲ್ಲ. ಮತ್ತೆ ಅವರ ಸರ್ಕಾರ ಅಧಿಕಾರಕ್ಕೆ ಬರದಿರುವುದಕ್ಕೆ ಧರ್ಮ ವಿರೋಧಿ ಚಟುವಟಿಕೆ, ರಾಷ್ಟ್ರ ವಿರೋಧಿ ನಡವಳಿಕೆಯೇ ಕಾರಣ ಎಂದು ದೂರಿದರು.
ಇದನ್ನೂ ಓದಿ:ಅಭಿಮಾನಿಗಳ ಅಭಿಮಾನಕ್ಕೆ ಇದು ಮಾದರಿಯಾಗದಿರಲಿ : ರಾಮಕೃಷ್ಣನ ಸಾವಿಗೆ ನಟ ಯಶ್ ಸಂತಾಪ
ನನಗೆ ಸಿದ್ದರಾಮಯ್ಯನವರು ಆಡಿದ ಮಾತಿನಿಂದ ನೋವಾಗಿದೆ. ಈಗ ಸಿದ್ದರಾಮಯ್ಯ ಕುರುಬ ಸಮಾವೇಶ ಮಾಡುವುದಕ್ಕೆ ನನ್ನ ಅಭ್ಯಂತರ ಇಲ್ಲ. ಆದರೆ ರಾಜಕಾರಣ ಮಾಡುವುದನ್ನು ಒಪ್ಪುವುದಿಲ್ಲ. ಕಾಗಿನೆಲೆ ಸ್ವಾಮೀಜಿಗಳು ಅವರ ಮನೆಗೆ ಹೋದಾಗ ತಮ್ಮ ಬೆಂಬಲವಿದೆ ಎಂದಿದ್ದ ಸಿದ್ದರಾಮಯ್ಯ ಅವರು ನಂತರ ಆರ್‌ಎಸ್‌ಎಸ್ ಹಣ ಪಡೆದಿದ್ದಾರೆ ಎಂದು ಆರೋಪಿಸಿದರು. ಸಿದ್ದರಾಮಯ್ಯನವರ ಈ ಸ್ವಭಾವ ಒಳ್ಳೆಯದಲ್ಲ. 70 ವರ್ಷ ಕಾಂಗ್ರೆಸ್ ಇತ್ತಲ್ಲ, ಆಗ ಮಂಡಕ್ಕಿ ತಿನ್ನುತ್ತಿದ್ದರೆ?
ಎಚ್.ಡಿ.ದೇವೇಗೌಡರ ಅಧಿಕಾರಾವಧಿಯಲ್ಲಿ ಸಿದ್ದರಾಮಯ್ಯನವರು ಸಚಿವರಾಗಿದ್ದಾಗ ಏಕೆ ಮಾಡಲಿಲ್ಲ. ತಾನೇ ಹಿಂದುಳಿದ ವರ್ಗಗಳ ಚಾಂಪಿಯನ್, ದಲಿತ ಚಾಂಪಿಯನ್ ಎನ್ನುವ ಸಿದ್ದರಾಮಯ್ಯನವರು ಈಗ ಬರೀ ವೋಟಿಗಾಗಿ ಚಾಂಪಿಯನ್ನಾ ಎಂದು ಪ್ರಶ್ನಿಸಿದರು.
ಮೀಸಲಾತಿಗಾಗಿ ನಾನಾ ಸಮುದಾಯಗಳು ನಡೆಸುತ್ತಿರುವ ಹೋರಾಟವನ್ನು ನಾನು ಸ್ವಾಗತಿಸುತ್ತೇನೆ. ಅರ್ಹತೆಯಿರುವ ಸಮುದಾಯಗಳಿಗೆ ಮೀಸಲಾತಿ ಸಿಗಲಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಇದನ್ನೂ ಓದಿ:ಉದ್ಯಮಿಗಳ ಮನೆ ಬಾಗಿಲಿಗೆ ಸರ್ಕಾರ, ಜನಸ್ನೇಹಿ ಇಲಾಖೆಗೆ ಮೊದಲ ಆದ್ಯತೆ : ಸಚಿವ ನಿರಾಣಿ ಘೋಷಣೆ
ರಾಜ್ಯದಲ್ಲಿ ಮೀಸಲಾತಿಗಾಗಿ ಹೋರಾಟಗಳು ನಡೆಯುತ್ತಿರೋದು ಒಳ್ಳೆಯದು. ಕುಗ್ಗಿ ಹೋಗಿರುವ ದನಿಗಳಿಗೆ ಮೀಸಲಾತಿ ಅಗತ್ಯವಿದೆ. ಕುಲಶಾಸ್ತ್ರೀಯ ಅಧ್ಯಯನ, ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಪರಿಶೀಲಿಸಿ ಮುಖ್ಯಮಂತ್ರಿಗಳು ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.