Advertisement

ಬಸ್‌ ನಿಲುಗಡೆಗೆ ಆಗ್ರಹಿಸಿ ಕರವೇ ಕಾರ್ಯಕರ್ತರ ಪ್ರತಿಭಟನೆ

12:01 PM Feb 20, 2018 | |

ಸಿಂದಗಿ: ತಾಲೂಕಿನ ಯರಗಲ್‌ ಬಿ.ಕೆ. ಗ್ರಾಮದ ಕ್ರಾಸ್‌ಬಳಿ ಸಾರಿಗೆ ಬಸ್‌ ನಿಲುಗಡೆ ಮಾಡಬೇಕು ಎಂದು ಕರವೇ ಕಾರ್ಯಕರ್ತರು ಸೋಮವಾರ ರಾಷ್ಟ್ರೀಯ ಹೆದ್ದಾರಿ ರಸ್ತೆ ನಂ. 218 ರಸ್ತೆ ತಡೆಹಿಡಿದು ಪ್ರತಿಭಟನೆ ನಡೆಸಿ ಸಿಂದಗಿ ಸಾರಿಗೆ ಸಂಸ್ಥೆ ಘಟಕದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

Advertisement

ಪ್ರತಿಭಟನೆ ನೇತೃತ್ವ ವಹಿಸಿದ್ದ ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಮಾತನಾಡಿ, ಸಿಂದಗಿ ತಾಲೂಕಿನ ಯರಗಲ್‌ ಬಿಕೆ ಯರಗಲ್‌ ಕೆಡಿ, ಆಹೇರಿ ಗ್ರಾಮದ ಸಮಸ್ತ ಎಲ್ಲ ಸಾರ್ವಜನಿಕರಿಗೆ ಶಾಲಾ ವಿದ್ಯಾರ್ಥಿಗಳಿಗೆ ಸಿಂದಗಿ ಪಟ್ಟಣಕ್ಕೆ ಹೋಗಲು ಯರಗಲ್‌ ಬಿಕೆ ಗ್ರಾಮದ ಕ್ರಾಸ್‌ ಮಧ್ಯ ಕೇಂದ್ರವಾಗಿದೆ. ಆದ್ದರಿಂದ ವಿದ್ಯಾರ್ಥಿಗಳ ಅನಕೂಲಕರಕ್ಕಾಗಿ ಬಸ್‌ ನಿಲುಗಡೆ ಮಾಡಬೇಕು. ಈ ಕುರಿತು ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಸ್‌ ನಿಲುಗಡೆ ಮಾಡದಿದ್ದಲ್ಲಿ ಉಗ್ರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ ಸಿದ್ದು ಬುಳ್ಳಾ, ಶ್ರೀಕಾಂತ ಬಿಜಾಪುರ, ಚೇತನ ರಾಂಪುರ, ಮುತ್ತು ಹಿಪ್ಪರಗಿ, ಪ್ರಶಾಂತ ಕದ್ದರಗಿ, ಮಲ್ಲು ಬಗಲಿ, ಶಿವಶಂಕರ ಪರಗೊಂಡ , ಶಂಕರಲಿಂಗ ಪರಗೊಂಡ , ಶಿವು ಬದ್ರಿ,
ಕವನಗೌಡ ಬಿರಾದಾರ, ಬಸವರಾಜ ಕಕ್ಕಳಮೇಲಿ, ಪೀರು ಯಂಕಚಿ, ಕುಶಾಲ ಬಗಲಿ, ಯಮನಪ್ಪ, ಭಿಮನಗೌಡ ಬಿರಾದಾರ ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next