Advertisement

ಕೃತಿಗೆ ಲಾಕ್‌ಡೌನ್‌ ಬೇಸರ ತರಿಸಿದೆಯಂತೆ

04:10 AM May 31, 2020 | Lakshmi GovindaRaj |

ಕೋವಿಡ್‌ 19 ಲಾಕ್‌ ಡೌನ್‌ ಸಮಯದಲ್ಲಿ ಗೂಗ್ಲಿ ಬೆಡಗಿ ಕೃತಿ ಕರಬಂಧ ತಾವು ಪೋಲ್‌ ಡ್ಯಾನ್ಸ್‌ ಮಾಡುತ್ತಿರುವ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ಲಾಕ್‌ ಡೌನ್‌ ಸಮಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕೋವಿಡ್‌ 19 ಲಾಕ್‌ಡೌನ್‌ ನಡುವೆ ತನ್ನ ಪ್ರಿಯಕರ ಪುಲ್ಕಿತ್‌ ಸಾಮ್ರಾಟ್‌ ಜೊತೆ ಕಾಲಕಳೆಯುತ್ತಿರುವ ನಟಿ ಕೃತಿ ಕರಬಂಧ, ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯವಾಗಿ ಇದ್ದಾರೆ. ಸದ್ಯ ಶೂಟಿಂಗ್‌ ಇಲ್ಲದೇ ಮನೆಯಲ್ಲೇ ಉಳಿದಿರುವ ಕೃತಿ ತಾವು ಪೋಲ್‌ ಹಿಡಿದು ಸೊಂಟ ಬಳುಕಿಸಿರುವ ವಿಡಿಯೋವನ್ನು ಶೇರ್‌ ಮಾಡಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಾಕಿಕೊಂಡಿರುವ ಕೃತಿ, ಈ ವಿಡಿಯೋ ಈ ಹಿಂದೆ ಶೂಟ್‌ ಮಾಡಲಾಗಿತ್ತು.

Advertisement

ವಕೌìಟ್‌  ಸಮಯದಲ್ಲಿ ನನಗೆ ಇದನ್ನು ಮಾಡಲು ಇಷ್ಟ. ಆದರೆ ಈ ಪೋಲ್‌ ನಮ್ಮ ಮನೆಯಲ್ಲಿ ಇಲ್ಲ ಎಂದು ನಿಜಕ್ಕೂ ಬೇಸರವಾಗುತ್ತಿದೆ. ಪೋಲ್‌ ಇದ್ದಿದ್ದರೆ ಲಾಕ್‌ಡೌನ್‌ ವೇಳೆ ನಾನು ಮಾಡುವ ವೇಳಾಪಟ್ಟಿಯಲ್ಲಿ ಇದನ್ನು ಸೇರಿಸಿಕೊಳ್ಳುತ್ತಿದ್ದೆ  ಎಂದು ಬರೆದುಕೊಂಡಿದ್ದಾರೆ. ಮೊದಲಿನಿಂದಲೂ ಪೋಲ್‌ ಡ್ಯಾನ್ಸ್‌ ಎಂದರೆ ಇಷ್ಟವಿರುವ ಕೃತಿ, ಕಳೆದ ವರ್ಷ ತಾನು ಮತ್ತು ತನ್ನ ಪ್ರಿಯಕರ ಪುಲ್ಕಿತ್‌ ಸಾಮ್ರಾಟ್‌ ಪೋಲ್‌ ಡ್ಯಾನ್ಸ್‌ ಮಾಡುತ್ತಿರುವ ಫೋಟೋವನ್ನು ತಮ್ಮ  ಇನ್‌ಸ್ಟಾಗ್ರಾಮ್‌ ನಲ್ಲಿ ಹಂಚಿಕೊಂಡಿದ್ದರು.  ಜೊತೆಗೆ ನಮ್ಮಿಬ್ಬರಲ್ಲಿ ಯಾರು ಚೆನ್ನಾಗಿ ಪೋಲ್‌ ಡ್ಯಾನ್ಸ್‌ ಮಾಡುತ್ತಾರೆ ಕಮೆಂಟ್‌ ಮಾಡಿ ಎಂದು ಬರೆದುಕೊಂಡಿದ್ದರು.

ಅಂದು ಈ ಫೋಟೋ ಕೂಡ ಸಖತ್‌ ವೈರಲ್‌ ಆಗಿತ್ತು. ಸದ್ಯ ಸಾಮ್ರಾಟ್‌ ಮತ್ತು ಕೃತಿ  ಒಂದೇ ಮನೆಯಲ್ಲಿ ಇದ್ದಾರೆ. ಇದರ ಜೊತೆಗೆ ಕೃತಿ ಖಾಸಗಿ ವಾಹಿನಿಗಳಿಗೆ ಸಂದರ್ಶನವನ್ನು ನೀಡುತ್ತಿರುತ್ತಾರೆ. ಹೀಗೆ ಸಂದರ್ಶನ ನೀಡುವ ಸಮಯದಲ್ಲಿ ತಮ್ಮ ಮದುವೆಯ ಬಗ್ಗೆ ಮಾತನಾಡಿರುವ ಕೃತಿ, ಈಗಲೇ ನಮಗೆ ಮದುವೆಯಗಲೂ  ಇಷ್ಟವಿಲ್ಲ. ಪುಲ್ಕಿತ್‌ಗೆ ಕೂಡ ಈಗ ಮದುವೆಯಾಗುವುದು ಇಷ್ಟವಿಲ್ಲ. ಅವನು ಇನ್ನು ಬಚ್ಚಾ, ಸ್ವಲ್ಪ ಸಮಯದ ಬಳಿಕ ಮದುವೆಯಾಗುವ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಹೇಳಿದ್ದರು. ಇನ್ನು ಕೃತಿ ಕೊನೆಯದಾಗಿ ಕನ್ನಡದಲ್ಲಿ  ಮಾಸ್ತಿಗುಡಿ ಸಿನಿಮಾದಲ್ಲಿ ನಟಿಸಿದ್ದರು. ಇದಾದ ನಂತರ ಬಾಲಿವುಡ್‌ಗೆ ಹಾರಿದ ಕೃತಿ ಸದ್ಯ ಅಲ್ಲಿಯೇ ಒಂದಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next