Advertisement

ನೀರಿನ ಸಮಸ್ಯೆ ನಿವಾರಿಸಲು ಕೃಷಿ ಹೊಂಡ ಸಹಕಾರಿ : ವೆಂಕಟೇಶ್‌

06:56 PM Feb 03, 2021 | Team Udayavani |

ಪಾತಪಾಳ್ಯ: ಮಳೆಯಾಧಾರಿತ ಕೃಷಿ ಮಾಡುತ್ತಿರುವವರಿಗೆ ನೀರಿನ ಸಮಸ್ಯೆ ನಿವಾರಿಸಲು ಕೃಷಿ ಹೊಂಡ ಸಹಕಾರಿ ಎಂದು ನರೇಗಾ ಅಭಿಯಂತರ ವೆಂಕಟೇಶ್‌ ತಿಳಿಸಿದರು.

Advertisement

ಗೊಲ್ಲಪಲ್ಲಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಕಾರ್ಮಿಕರು ನಿರ್ಮಿಸುತ್ತಿದ್ದ ಕೃಷಿ ಹೊಂಡ ಕಾಮಗಾರಿಯನ್ನು ಸೋಮವಾರ ಪರಿಶೀಲಿಸಿ ಮಾತನಾಡಿದರು. ಮಳೆ ನೀರನ್ನು ಕೃಷಿ ಹೊಂಡದ ಮೂಲಕ ಸಂಗ್ರಹಿಸಿದರೆ, ರೈತರ ಬೆಳೆಗಳಿಗೆ ಅನುಕೂಲ, ಜೊತೆಗೆ ಅಂತರ್ಜಲ ಮರುಪೂರ್ಣವಾಗುವುದರಿಂದ ಆ ಪ್ರದೇಶದಲ್ಲಿ ನೀರಿನ ಮಟ್ಟ ಹೆಚ್ಚುತ್ತದೆ ಎಂದರು.

ಇದನ್ನೂ ಓದಿ :ಒತ್ತಡಕ್ಕೆ ಮಣಿದ ರಾಜ್ಯಸರ್ಕಾರ: ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಅವಕಾಶ ನೀಡಲು ಮಾರ್ಗಸೂಚಿ

ಪಿಡಿಒ ಶ್ರೀನಿವಾಸ್‌ ಮಾತನಾಡಿ, ಕೃಷಿ ಹೊಂಡ ನಿರ್ಮಾಣ ಎತ್ತರದ ಜಾಗದಲ್ಲಿದ್ದರೆ ರೈತರಿಗೆ ಹೆಚ್ಚು ಅನುಕೂಲ. ಇದೀಗ ಪ್ಲಾಸ್ಟಿಕ್‌ ಹೊದಿಕೆ ಹಾಕಿ ನೀರನ್ನು ಸಂಗ್ರಹಿಸುವ ಸೌಲಭ್ಯವೂ ಬಂದಿದೆ. ಹೀಗಾಗಿ ನೀರನ್ನು ಯಾವಾಗ ಬೇಕಾದರೂ ಬಳಸಿಕೊಳ್ಳಬಹುದು ಎಂದರು. ಕರವಸೂಲಿಗಾರ ಎನ್‌.ಕೃಷ್ಣಪ್ಪ, ಗುಮಾಸ್ತ ಚಂದ್ರಾರೆಡ್ಡಿ, ಡಿಇಒ ಲವಾಣಿ ಸುಬಹಾನ್‌ಖಾನ್‌ ಹಾಗೂ ಕೂಲಿ ಕಾರ್ಮಿಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next