Advertisement

ಪ್ರವಾಸಿಗರಿಗೆ ಕೆಆರ್‌ಎಸ್‌ ಬೃಂದಾವನ ಮುಕ್ತ

04:53 PM Sep 16, 2020 | Suhan S |

ಮಂಡ್ಯ: ಕೋವಿಡ್ ದಿಂದ ಕಳೆದ 6 ತಿಂಗಳಿನಿಂದ ಬಂದ್‌ ಆಗಿದ್ದ ವಿಶ್ವ ಪ್ರಸಿದ್ಧ ಕೃಷ್ಣರಾಜಸಾಗರದ ‘ಬೃಂದಾವನ’ ಉದ್ಯಾನ ಪ್ರವೇಶಕ್ಕೆ ಸೆ.16ರಿಂದ ಪ್ರವಾಸಿಗರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

Advertisement

ಇದರಿಂದ ಬೃಂದಾವನ ತನ್ನ ವೈಭವಕ್ಕೆ ಮರಳಲಿದೆ.

ಕಾವೇರಿ ನೀರಾವರಿ ನಿಗಮ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ  ಸ್ಪಂದಿಸಿದ್ದು, ಬುಧವಾರದಿಂದ  ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಸುತ್ತೋಲೆ ಹೊರಡಿಸಿದೆ. ಇದಕ್ಕಾಗಿಕಾವೇರಿ ನೀರಾವರಿ ನಿಗಮಸಿದ್ಧತೆ ಮಾಡಿಕೊಂಡಿದೆ.

ಮುಂಜಾಗ್ರತೆ ಕ್ರಮ: ಖಾಸಗಿಗೆ ಏಜೆನ್ಸಿ ನೀಡಲಾಗಿದ್ದು, ಪ್ರವಾಸಿಗರ ಆರೋಗ್ಯ ದೃಷ್ಟಿಯಿಂದ ಹಾಗೂ ಕೋವಿಡ್ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದೆ. ಬರುವ ಪ್ರವಾಸಿಗರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ  ಕಾಪಾಡಿಕೊಳ್ಳಬೇಕು. ಏಜೆನ್ಸಿಯವರು ಪ್ರವಾಸಿಗರಿಗೆ ಸ್ಯಾನಿಟೈಸರ್‌ ಮಾಡಿ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ.

ಬೋಟಿಂಗ್‌ ಪ್ರಾರಂಭ: ಬೃಂದಾವನ ಉದ್ಯಾನದಲ್ಲಿಜಲಾಶಯ ನೀರಿನಿಂದ ನಡೆಯುವ ಬೋಟಿಂಗ್‌ ವ್ಯವಸ್ಥೆ ಇರಲಿದೆ. ನೀರಿನ ಚಿಲುಮೆ, ಕಾರಂಜಿಗಳು ಚಿಮ್ಮಲಿದ್ದು, ಪ್ರವಾಸಿಗರಿಗೆ ಮೊದಲಿನಂತೆ ಮುದ ನೀಡಲಿವೆ. ವಿವಿಧ ರೀತಿಯ ಬಣ್ಣ ಬಣ್ಣದ ಹೂವುಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯಲಿವೆ.

Advertisement

ವ್ಯಾಪಾರ-ವಹಿವಾಟು:  ಕೋವಿಡ್ ದಿಂದ ಬೃಂದಾವನ ಬಂದ್‌ ಮಾಡಿದ್ದರಿಂದ ಇಲ್ಲಿವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ವರ್ತಕರು, ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ತಮ್ಮಅಂಗಡಿ-ಮುಂಗಟ್ಟುಗಳನ್ನು ಮುಚ್ಚಿದ ಪರಿಣಾಮ ತೀವ್ರಸಂಕಷ್ಟಅನುಭವಿಸಿದ್ದರು. ಈಗ ಬೃಂದಾವನ ತೆರೆಯುತ್ತಿರು ವುದರಿಂದ ಅಂಗಡಿ-ಮುಂಗಟ್ಟು ಗಳುಮತ್ತೆ ಪ್ರಾರಂಭವಾಗಲಿವೆ.

ಸರ್‌ಎಂವಿ ಮತ್ಸ್ಯಾಲಯ ಕೇಂದ್ರ: ಬೃಂದಾವನದಲ್ಲಿರುವ ಸರ್‌ಎಂ.ವಿ.ವಿಶ್ವೇಶರಯ್ಯಮತ್ಸ್ಯಾಲಯ ಕೂಡ ಬಂದ್‌ ಆಗಿತ್ತು. ಈಗ ಬೃಂದಾವನ ತೆರೆಯುವುದರಿಂದ ಮತ್ಸ್ಯಾಲಯ ಕೇಂದ್ರ ತೆರೆಯಲಿದ್ದು, ಪ್ರವಾಸಿಗರು ಮತ್ಸ್ಯಗಳ ಪ್ರದರ್ಶನಕಣ್ತುಂಬಿಕೊಳ್ಳಬಹುದು.

ಹೆಚ್ಚು ಪ್ರವಾಸಿಗರು : ಪ್ರತಿ ವರ್ಷ ದಸರಾ ಸಂದರ್ಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ, ಈ ಬಾರಿ ಕೋವಿಡ್ ದಿಂದ ಸರಳ ದಸರಾ ಆಚರಣೆಗೆ ಮುಂದಾಗಿ ರುವುದರಿಂದ ಪ್ರವಾಸಿಗರ ಸಂಖ್ಯೆಕಡಿಮೆಯಾಗುವ ಸಾಧ್ಯತೆ ಇದೆ.

ಸರ್ಕಾರಕ್ಕೆ 1.5 ಕೋಟಿರೂ. ನಷ್ಟ “: ಕೋವಿಡ್ ದಿಂದ ಕೃಷ್ಣರಾಜಸಾಗರ ಜಲಾಶಯದ”ಬೃಂದಾವನ’ ಉದ್ಯಾನವನ್ನು ಬಂದ್‌ ಮಾಡಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ 1.5 ಕೋಟಿರೂ. ನಷ್ಟವಾಗಿದೆ. ಕೋವಿಡ್ ಗೂ ಮುಂಚೆ ಪ್ರತಿದಿನ ಸುಮಾರು 7ರಿಂದ 8 ಸಾವಿರ ಪ್ರವಾಸಿಗರು ಭೇಟಿನೀಡುತ್ತಿದ್ದರು. ವಾರದ ರಜಾ ದಿನಗಳಲ್ಲಿ 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಬರುತ್ತಿದ್ದರು. ಇದರಿಂದಲಕ್ಷಾಂತರ ರೂ. ಆದಾಯಬರುತ್ತಿತ್ತು. ಆದರೆ, ಕೊರೊನಾದಿಂದ ಆದಾಯ ವಿಲ್ಲದೆ ಕಳೆದ 6 ತಿಂಗಳಿನಿಂದಬೃಂದಾವನ ಬೀಕೋ ಎನ್ನುತ್ತಿತ್ತು.

ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವಾಸಿಗರ ಹೆಚ್ಚಳ :  ಕೋವಿಡ್ ಪರಿಣಾಮ ಶ್ರೀರಂಗಪಟ್ಟಣದ ರಂಗನತಿಟ್ಟು ಪಕ್ಷಿಧಾಮಕ್ಕೂ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು.ಈಗ ಬೃಂದಾವನ ಬಂದ್‌ ತೆರವುಗೊಳಿಸು ತ್ತಿರುವುದರಿಂದ ರಂಗನತಿಟ್ಟಿಗೆ ಪ್ರವಾಸಿಗರು ಹೆಚ್ಚಾಗುವ ಸಾಧ್ಯತೆ ಇದೆ. ಸೆ.1ರಿಂದ ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅವಕಾಶನೀಡಲಾಗಿತ್ತು. ಆದರೆ, ಪ್ರತಿದಿನ100ರಿಂದ150ಮಂದಿ ಮಾತ್ರ ಬರುತ್ತಿದ್ದಾರೆ.ಕೊರೊನಾಗೂ ಮುಂಚೆ ಪ್ರತಿದಿನ2 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಈಗ ಬೃಂದಾವನ ತೆರೆದಿರುವುದರಿಂದ ಪಕ್ಷಿಧಾಮಕ್ಕೂ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಪಕ್ಷಿಧಾಮದ ಅಧಿಕಾರಿಗಳು

ಬೋಟಿಂಗ್‌ ಸ್ಥಗಿತ :  ಕೆಆರ್‌ಎಸ್‌ ಜಲಾಶಯದಿಂದ 6 ಸಾವಿರಕ್ಕೂ ಹೆಚ್ಚುಕ್ಯೂಸೆಕ್‌ ನೀರು ಕಾವೇರಿ ನದಿಗೆ ಹರಿಸುತ್ತಿರುವುದ ರಿಂದ ಸೋಮವಾರ ಮಧ್ಯಾಹ್ನ ದಿಂದ ಪಕ್ಷಿಧಾಮದ ಬೋಟಿಂಗ್‌ ಸ್ಥಗಿತಗೊಳಿಸಲಾಗಿದೆ.

ಬೃಂದಾವನ ತೆರೆಯಲಿದ್ದು, ಪ್ರವಾಸಿಗರಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಪ್ರವಾಸಿಗರ ಆರೋಗ್ಯ ದೃಷ್ಟಿಯಿಂದ ಮುಂಜಾಗ್ರತೆ ಕ್ರಮಕೈಗೊಳ್ಳಲಾಗಿದೆ.ಕಡ್ಡಾಯಮಾಸ್ಕ್, ಸ್ಯಾನಿಟೈಸರ್‌ ಹಾಗೂ ಸಾಮಾಜಿಕ ಅಂತರಕಾಪಾಡಿ ಕೊಳ್ಳಲು ಒತ್ತು ನೀಡಲಾಗಿದೆ. ರಾಜು, ಕಾರ್ಯಪಾಲಕಇಂಜಿನಿಯರ್‌, ಕಾನೀನಿನಿ, ಕೆ.ಆರ್‌.ಸಾಗರ ವಿಭಾಗ

ಕೋವಿಡ್ ದಿಂದ ರಂಗನತಿಟ್ಟು ಪಕ್ಷಿ ಧಾಮವನ್ನು ಬಂದ್‌ ಮಾಡಲಾಗಿತ್ತು.ಇದರಿಂದ ಲಕ್ಷಾಂತರ ರೂ. ಸರ್ಕಾರದಬೊಕ್ಕಸಕ್ಕೆ ನಷ್ಟ ಉಂಟಾಗಿತ್ತು. ಸೆ.1ರಿಂದ ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಆದರೆ,ಕೊರೊನಾ ಮುಂಚೆ ಇದ್ದ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿ ಮುಖವಾಗಿದೆ. ಬೃಂದಾವನ ತೆರೆಯುತ್ತಿರುವು ದರಿಂದ ಪಕ್ಷಿಧಾಮಕ್ಕೂ ಪ್ರವಾಸಿ ಗರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. –ಅಲೆಗ್ಸ್ಯಾಂಡರ್‌, ಉಪ ಅರಣ್ಯಾಧಿಕಾರಿ, ಮೈಸೂರು ವನ್ಯಜೀವಿ ವಿಭಾಗ

– ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next