Advertisement

ಆದಿಪುರುಷನಿಗೆ ಜೊತೆಯಾಗಲಿದ್ದಾರಂತೆ ಕೃತಿ ಸನನ್

11:35 AM Nov 29, 2020 | Adarsha |

ನವದೆಹಲಿ: ಖ್ಯಾತ ಬಾಲಿವುಡ್ ನಿರ್ದೇಶಕ ಓಂ ರಾವತ್ ಹಾಗೂ ಬಾಹುಬಲಿ ಖ್ಯಾತಿಯ ಪ್ರಭಾಸ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಆದಿಪುರುಷ್ ಚಿತ್ರಕ್ಕೆ ನಾಯಕಿಯಾಗಿ ನಟಿ ಕೃತಿ ಕೃತಿ ಸನನ್ ಅವರನ್ನು ಚಿತ್ರತಂಡ ಆಯ್ಕೆಮಾಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

Advertisement

ಕೆಲದಿನಗಳ ಹಿಂದೆಯಷ್ಟೇ ಚಿತ್ರತಂಡ ಆದಿಪುರುಷ್ ಸಿನಿಮಾದ ಪೋಸ್ಟರ್ ಮತ್ತು ಮೋಷನ್ ಪಿಕ್ಚರ್ ಬಿಡುಗಡೆಗೊಳಿಸಿದ್ದು, ನಟ ಪ್ರಭಾಸ್, ರಾಮನ ಪಾತ್ರಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಚಿತ್ರತಂಡ ಖಚಿತಪಡಿಸಿತ್ತು.

ರಾಮನ ಪಾತ್ರಧಾರಿಗೆ ಜೋಡಿಯಾಗಿ ಯಾರು ನಟಿಸುತ್ತಾರೆ ಎಂಬುದನ್ನು ಚಿತ್ರ ತಂಡ ತಿಳಿಸಿರಲಿಲ್ಲ. ಆದರೆ ಈ ಪಾತ್ರಕ್ಕಾಗಿ ನಟಿ ಕೃತಿ ಸನನ್ ಅವರು ಆಯ್ಕೆಯಾಗಲಿದ್ದಾರೆ ಎಂದು ಮುಂಬೈ ಮಿರರ್ ವರದಿ ಮಾಡಿದೆ, ಈ ಕುರಿತಾಗಿ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಈ ಹಿಂದೆ ಆದಿಪುರುಷ್ ಚಿತ್ರಕ್ಕೆ ನಾಯಕಿಯಾಗಿ ಅನುಷ್ಕಾ ಶೆಟ್ಟಿ, ಅನುಷ್ಕಾ ಶರ್ಮಾ, ಕಿಯಾರಾ ಅಡ್ವಾಣಿ ಮತ್ತು ಕೀರ್ತಿ ಸುರೇಶ್ ಆಯ್ಕೆಯಾಗುವ ಸಾಧ್ಯತೆಗಳಿವೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸದ್ದು ಮಾಡಿತ್ತು , ಆದರೆ ಚಿತ್ರತಂಡ ಇದೀಗ ಕೃತಿ ಕೃತಿ ಸನನ್  ಆಯ್ಕೆ ಮಾಡುವ  ವಿಚಾರ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next