Advertisement

ಪರ್ಯಾಯೋತ್ಸವಕ್ಕೆ: ದಾಖಲೆ ಹೊರೆಕಾಣಿಕೆ ಸಂಗ್ರಹ

02:16 AM Jan 16, 2022 | Team Udayavani |

ಕೃಷ್ಣಾಪುರ ಚತುರ್ಥ ಪರ್ಯಾಯೋತ್ಸವಕ್ಕೆ ದಾಖಲೆ ಮಟ್ಟದಲ್ಲಿ ಹೊರೆ ಕಾಣಿಕೆ ಸಂಗ್ರಹ ವಾಗಿದೆ. ಸೋಮವಾರವೂ ಹೊರಕಾಣಿಕೆ ಬರಲಿದೆ. ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪಂಚಮ ಪರ್ಯಾಯ ಹೊರತು ಪಡಿಸಿದರೆ ಈ ಬಾರಿಯೇ ದಾಖಲೆಯ ಹೊರೆ ಕಾಣಿಕೆ ಸಂಗ್ರಹವಾಗಿದೆ.

Advertisement

92 ಟನ್‌ ಅಕ್ಕಿ, 33 ಟನ್‌ ಬೆಲ್ಲ, 1.67, 800 ತೆಂಗಿನ ಕಾಯಿ, 5 ಟನ್‌ ಸಕ್ಕರೆ, 2 ಟನ್‌ ಬೇಳೆಕಾಳು, 215 ಕೆ.ಜಿ. ಅವಲಕ್ಕಿ, 340 ಲೀ. ಎಳ್ಳೆಣ್ಣೆ, 15, 508 ಲೀ. ತುಪ್ಪ, 20 ಕೆ.ಜಿ. ಅರಳು, 42 ಕೆ.ಜಿ. ಕೊತ್ತಂಬರಿ, 20 ಕೆ.ಜಿ. ಜೀರಿಗೆ, 5 ಕೆ.ಜಿ. ಒಣದ್ರಾಕ್ಷಿ , 15 ಕೆ.ಜಿ. ಶುಂಠಿ, 90 ಕೆ.ಜಿ. ಗೋಧಿ, 50 ಕೆ.ಜಿ. ಬಾಂಬೆ ರವೆ, 15 ಕೆ.ಜಿ. ಮೆಣಸು, ಒಂದು ಬಾಕ್ಸ್‌ ಜೇನು ತುಪ್ಪ, 500 ಬಾಳೆಗೊನೆ, 2 ಸಾವಿರ ಸೀಯಾಳ, 10 ಸಾವಿರ ಕೆ.ಜಿ. ತರಕಾರಿ (ಕುಂಬಳಕಾಯಿ, ಸೌತೆ, ಚೀನಿಕಾಯಿ, ಬೀನ್ಸ್‌ ಇತರ ತರಕಾರಿ), 10 ಸಾವಿರ ಕೆ.ಜಿ. ಗೆಡ್ಡೆ ಗೆಣಸು, 300 ಹಲಸಿನ ಕಾಯಿ ಸಂಗ್ರಹಗೊಂಡಿದೆ.

ಉಗ್ರಾಣ ಭರ್ತಿಯಾಗುತ್ತಿದ್ದು, ಐದು ಕೌಂಟರ್‌ಗಳಲ್ಲಿ ಅಕ್ಕಿ, ತರಕಾರಿ, ಬೇಳೆ, ಕಾಳು, ಎಣ್ಣೆ, ಗೆಡ್ಡೆ, ಗೆಣಸುಗಳನ್ನು ವ್ಯವಸ್ಥಿತವಾಗಿ ಜೋಡಿಸಿಡಲಾಗುತ್ತಿದೆ.

ಜ. 11ರಿಂದ 15ರ ಮಧ್ಯಾಹ್ನದ ವರೆಗೆ ಇಷ್ಟು ಹೊರೆ ಕಾಣಿಕೆ ಸಂಗ್ರಹವಾಗಿದೆ ಎಂದು ಸಮಿತಿ ತಿಳಿಸಿದೆ.
ಜ. 17ರಂದು ನಿಡಂಬೂರು ಮಾಗಣೆ, ಕಟಪಾಡಿ ಮಟ್ಟುಗುಳ್ಳ, ಪೆರ್ಡೂರು, ಕಾರ್ಕಳ, ಬಜಗೋಳಿ, ಹೆಬ್ರಿ, ಮಂಗಳೂರು ಕಟೀಲು, ಮೂಡುಬಿದಿರೆ, ಮೂಲ್ಕಿ, ಕಿನ್ನಿಗೋಳಿ ಕಡೆಯಿಂದ ಹೊರೆ ಕಾಣಿಕೆ ಸಂಗ್ರಹವಾಗಲಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next