Advertisement

ಪರ್ಯಾಯ ಮೆರವಣಿಗೆಗೆ ಸಾಂಪ್ರದಾಯಿಕ ಸ್ಪರ್ಶ

02:00 AM Jan 19, 2022 | Team Udayavani |

ಉಡುಪಿ: ಕೋವಿಡ್‌ ಹಿನ್ನೆಲೆಯಲ್ಲಿ ರಾತ್ರಿಕರ್ಫ್ಯೂ ವಿಧಿಸಿದ್ದರಿಂದ ವಿಜೃಂಭಣೆಯಿಂದ ನೆರವೇರಬೇಕಿದ್ದ ಪರ್ಯಾಯೋತ್ಸವದ ಮೆರವಣಿಗೆ ಮಂಗಳವಾರ ಮುಂಜಾನೆ ಸರಳವಾಗಿ ನಡೆಯಿತು.

Advertisement

ಜೋಡುಕಟ್ಟೆ ಬಳಿಯಿಂದ ಮಂಗಳವಾರ ಬೆಳಗಿನ ಜಾವ ಮೆರವಣಿಗೆ ಆರಂಭವಾಯಿತು. ಸಂಪ್ರದಾಯದಂತೆ ಉಡುಪಿ ಯಿಂದ 20 ಕಿ.ಮೀ ದೂರದ ದಂಡತೀರ್ಥದಲ್ಲಿ ಕೃಷ್ಣಾಪುರ ಶ್ರೀಗಳು ಪವಿತ್ರ ತೀರ್ಥಸ್ನಾನ ಪೂರೈಸಿ ಜೋಡುಕಟ್ಟೆಗೆ ಆಗಮಿಸಿದರು. ಶ್ರೀಪಾದರನ್ನು ಮಠದ ಇತರೆ ಮಠಾಧೀಶರು ಬರಮಾಡಿಕೊಂಡರು. ಜೋಡುಕಟ್ಟೆ ಮಂಟಪದಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಪರ್ಯಾಯ ಮೆರವಣಿಗೆ ಆರಂಭಗೊಂಡಿತು. ಕೆ.ಎಂ. ಮಾರ್ಗ, ತಾ. ಕಚೇರಿ ರಸ್ತೆಯ ಮೂಲಕ ರಥಬೀದಿಗೆ ಸಾಗಿತು. ವಿವಿಧ ಸ್ತಬ್ಧಚಿತ್ರಗಳು, ಕಲಾ ತಂಡಗಳು ಮೆರವಣಿಗೆಯಲ್ಲಿ ಒಳಗೊಂಡಿದ್ದು ಸಾಂಪ್ರ ದಾಯಿಕತೆಗೆ ಆದ್ಯತೆ ನೀಡಲಾಗಿತ್ತು.

ಮೆರವಣಿಗೆ ಕಣ್ತುಂಬಿಕೊಂಡ ಭಕ್ತರು
ಸಾರ್ವಜನಿಕರಿಗೆ ಮೆರವಣಿಗೆಯಲ್ಲಿ ಭಾಗವಹಿಸಲು ನಿರಾಕರಿಸಿದ ಹೊರ ತಾಗಿಯೂ ಜೋಡುಕಟ್ಟೆಯಿಂದ ಕೃಷ್ಣಮಠದವರೆಗೆ ರಸ್ತೆ ಬದಿಯಲ್ಲಿ ನೆರೆದಿದ್ದ ಭಕ್ತರು ಮೆರವಣಿಗೆ ನೋಡಿ ಸಂಭ್ರಮಿಸಿದರು. ಮೆರವಣಿಗೆ ಸಾಗಿ ಬಂದ ರಸ್ತೆ, ಇಕ್ಕೆಲಗಳಲ್ಲಿ ಜನರು ಮೆರವಣಿಗೆ ವೀಕ್ಷಿಸಿದರು. ಬೃಹತ್‌ ಕಟ್ಟಡಗಳ ಮಳಿಗೆಗಳಲ್ಲಿ, ಕಾಂಪೌಂಡ್‌ ಗೋಡೆಗಳ ಮೇಲೆ ನಿಂತು ಜನರು ಮೆರವಣಿಗೆ ವೀಕ್ಷಿಸಿದರು.

ಕಂಗೊಳಿಸಿದ ಸ್ತಬ್ಧಚಿತ್ರಗಳು
ಪರ್ಯಾಯೋತ್ಸವದ ಮೆರವಣಿಗೆಯ ವಿಶೇಷತೆಯೇ ಜಾನ ಪದ ತಂಡಗಳು.ಆದರೆ ಈ ಬಾರಿಯ ಮೆರವಣಿಗೆಯಲ್ಲಿ ನಿರ್ಬಂಧ ಹೇರಲಾದ ಕಾರಣ ಸುಮಾರು 40ರಷ್ಟು ಜಾನ ಪದ ತಂಡಗಳು ಭಾಗವಹಿಸಲಿಲ್ಲ. ಉಳಿದಂತೆ ಶ್ರೀಕೃಷ್ಣ ದೇವರ ಬೃಹತ್‌ ವಿಗ್ರಹ, ಯಕ್ಷಗಾನ, ಕಾಳಿಂಗ ಮಾರ್ಧನ, ಶೇಷಶಯನ, ಗಜೇಂದ್ರ ಮೋಕ್ಷ, ಜಾಂಬವಂತ ಕೃಷ್ಣ, ಗೀತೋಪದೇಶ ಶ್ರೀಕೃಷ್ಣಾರ್ಜುನ, ವಾಸುದೇವ ಕೃಷ್ಣ, ಹರೇಕೃಷ್ಣ ಕುಣಿತ ಭಜನೆ, ಸ್ಕೌಟ್ಸ್‌ ಗೈಡ್ಸ್‌ ವಿದ್ಯಾರ್ಥಿಗಳು, ಅಯೋಧ್ಯೆ ರಾಮಮಂದಿರ, ಅರಣ್ಯ ಇಲಾಖೆಯ ಹಸುರು ಉಳಿಸಿ ಜಾಗೃತಿ ಟ್ಯಾಬ್ಲೋಗಳು, ಭಜನೆ ತಂಡಗಳು, ಪೂರ್ಣಕುಂಭ, ಬಿರುದಾವಳಿ, ಚೆಂಡೆ ಬಳಗ, ಪಂಚವಾದ್ಯ, ಕೊಂಬುವಾದ್ಯ, ನಾಗಸ್ವರ ತಂಡ, ಸ್ಯಾಕೊÕàಫೋನ್‌ ತಂಡ, ನಾಸಿಕ್‌ ಬ್ಯಾಂಡ್‌, ಮರಕಾಲು ಕುಣಿತ, ದೊಂದಿಬೆಳಕಿನ ದೀಪಗಳೂ ಪರ್ಯಾಯೋತ್ಸವದಲ್ಲಿ ಕಂಗೊಳಿಸಿದವು.

ಪರದೆ ಮೂಲಕ ವೀಕ್ಷಣೆ
ಪರ್ಯಾಯ ಮಹೋತ್ಸವದ ಎಲ್ಲ ಕಾರ್ಯಕ್ರಮಗಳೂ ಜೋಡುಕಟ್ಟೆ ಯಿಂದ ರಥಬೀದಿ, ಪಾರ್ಕಿಂಗ್‌ ಪ್ರದೇಶದವರೆಗೆ ಬೃಹತ್‌ ಎಲ್‌ಇಡಿ ಪರದೆ ಮೇಲೆ ಪ್ರಸಾರವಾಯಿತು. ಅಲ್ಲದೆ ಟಿವಿಗಳಲ್ಲಿಯೂ ನೇರಪ್ರಸಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next