Advertisement

ಕೃಷ್ಣಾಪುರ: ಫ್ರಿಡ್ಜ್ ಸಿಲಿಂಡರ್‌ ಸ್ಫೋಟ; ಮಹಿಳೆ ಗಂಭೀರ

02:13 AM Jun 11, 2019 | sudhir |

ಸುರತ್ಕಲ್: ಅಡುಗೆ ಮನೆಯಲ್ಲಿದ್ದ ರೆಫ್ರಿಜರೇಟರ್‌ನ ಸಿಲಿಂಡರ್‌ ಸ್ಫೋಟಗೊಂಡು ಮಹಿಳೆಯೋರ್ವರು ಗಂಭೀರ ಗಾಯಗೊಂಡ ಘಟನೆ ಕೃಷ್ಣಾಪುರ 4ನೇ ಬ್ಲಾಕಿನಲ್ಲಿ ಸಂಭವಿಸಿದೆ.

Advertisement

ಗಾಯಗೊಂಡಿರುವ ಫರ್ಝಾನ (33) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಪತಿ ಸಿದ್ದೀಕ್‌ ಹಾಗೂ 1 ವರ್ಷದ ಮಗು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಸಿದ್ದೀಕ್‌ ಅವರು ಕುಟುಂಬ ಸಹಿತ ಬಾಡಿಗೆ ಮನೆಯಲ್ಲಿ ವಾಸವಿದ್ದು, ಫರ್ಜಾನ ಸೋಮವಾರ ಬೆಳಗ್ಗೆ ಅಡುಗೆ ಮನೆಯಲ್ಲಿ ಗ್ಯಾಸ್‌ ಹೊತ್ತಿಸಲು ಬಂದಾಗ ಅವಘಡ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಮನೆಯ ಸಾಮಾನು ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಮೇಲ್ಛಾವಣಿಯ ಹಂಚುಗಳು ಭಾಗಶಃ ಹಾರಿ ಹೋಗಿವೆ.

ಅಗ್ನಿಶಾಮಕ ದಳದ ಸಿಬಂದಿ ಬೆಂಕಿ ನಂದಿಸಿದರು. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next