ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.
Advertisement
ನಗರದ ತಾಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಬಿಜೆಪಿ ಪರಿವರ್ತನಾ ಯಾತ್ರೆ ಸಭೆಯಲ್ಲಿ ಅವರುಮಾತನಾಡಿದರು. ರಾಜ್ಯದಲ್ಲಿ ಹಿಂದು ಪರ ಸಂಘಟನೆಯ ಕಾರ್ಯಕರ್ತರ ಕೊಲೆಗಳು ನಿರಂತರವಾಗಿ ನಡೆಯುತ್ತಿದ್ದು, ಇದನ್ನು ತಡೆಯಲು ರಾಜ್ಯ
ಸರ್ಕಾರ ವಿಫಲವಾಗಿದೆ. ಕರ್ನಾಟಕವನ್ನು ಕೇರಳ ರಾಜ್ಯವನ್ನಾಗಿ ಮಾಡಲು ಬಿಡುವುದಿಲ್ಲ ಎಂದರು. 2009ರಲ್ಲಿ ರಾಜ್ಯದಲ್ಲಿ ಅತಿವೃಷ್ಟಿ ಉಂಟಾಗಿ ಈ
ಭಾಗದ ಜನರ ಮನೆ ಮಠಗಳು ಮುಳುಗಡೆಯಾದ ಪ್ರದೇಶಗಳಲ್ಲಿ ನವ ಗ್ರಾಮಗಳ ನಿರ್ಮಾಣಕ್ಕಾಗಿ 5 ರಿಂದ 6ಸಾವಿರ ಕೋಟಿ ರೂ.ಗಳನ್ನು ವೆಚ್ಚಮಾಡಿ ಜನರಿಗೆ ಆಶ್ರಯ ಕಲ್ಪಿಸಿದ್ದೇವೆ. ಕೆಲಸ ಮಾಡುವ ಮನಸ್ಸಿರಬೇಕು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಯಾವುದೇ ಕೆಲಸ
ಮಾಡುವ ಆಸಕ್ತಿಯಿಲ್ಲ, ಸುಮಾರು 25 ಸಾವಿರ ಜನ ಸಾಗರ ಸೇರಿದ್ದು, ಈ ಕ್ಷೇತ್ರದ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ 25ಸಾವಿರ
ಮತಗಳ ಅಂತರದಿಂದ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆರೋಪಿಸಿದರು. ನಾನು ಮುಖ್ಯಮಂತ್ರಿಯಾಗಿದ್ದಾಗ ಸಿರಗುಪ್ಪ ತಾಲೂಕಿನ ರಾರಾವಿ ಸೇತುವೆ ನಿರ್ಮಾಣಕ್ಕಾಗಿ 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಭೂಮಿ ಪೂಜೆ ಮಾಡಿ ಕಾಮಗಾರಿ ಆರಂಭಿಸಿದ್ದರೂ ಇಂದಿಗೂ ಸೇತುವೆಯ ಕಾಮಗಾರಿ ಮುಗಿದಿಲ್ಲ ಎಂದರು. ಜನ ಸಾಮಾನ್ಯರಿಗೆ ಸರಳ ರೀತಿಯಲ್ಲಿ ದೊರೆಯಬೇಕಾದ ಮರಳು ಸಿಗುತ್ತಿಲ್ಲ. ಕಾಂಗ್ರೆಸ್ ಶಾಸಕರು, ಅವರ ಸಂಬಂಧಿಕರಿಗೆ ಮಾತ್ರ ಮಾರಾಟ
ಮಾಡಲು ಮರಳು ದೊರೆಯುತ್ತಿದೆ. ಆದರೆ, ಜನಸಾಮಾನ್ಯರಿಗೆ ದೊರೆಯುತ್ತಿಲ್ಲವಾದರೂ ಮಲೇಷಿಯಾದಿಂದ ಮರಳು ತರಿಸುವ
ವ್ಯವಹಾರದಲ್ಲಿಯೂ ಪರ್ಸೆಂಟೇಜ್ ವ್ಯವಹಾರ ನಡೆಸಿದ್ದಾರೆ ಎಂದು ದೂರಿದರು.
Related Articles
ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಫೇಲಾದ ರಾಹುಲ್ ಗಾಂಧಿ ಯನ್ನು ಕರ್ನಾಟಕಕ್ಕೆ ಕರೆತಂದರೆ ಇಲ್ಲಿಯೂ ಸೋಲುವುದು ಖಚಿತ ಎಂದರು.
Advertisement
ಗಲಿಬಿಲಿ: ವೇದಿಕೆಯ ಎಡಭಾಗದಲ್ಲಿ ಅಳವಡಿಸಲಾದ ಫ್ಯಾನ್ ವಿದ್ಯುತ್ ಅವಘಡದಿಂದ ಸುಟ್ಟಿದ್ದರಿಂದ ಕೊಂಚಹೊತ್ತು ವೇದಿಕೆಯಲ್ಲಿಗಲಿಬಿಲಿ ಕಂಡುಬಂದಿತು. ಸಕಾಲಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದರು. ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ, ಶಿಸ್ತು ಸಮಿತಿ ರಾಜ್ಯಾಧ್ಯಕ್ಷ ಶಂಕ್ರಪ್ಪ, ಜಿಲ್ಲಾಧ್ಯಕ್ಷ ಕೆ. ಚನ್ನಬಸವನಗೌಡ ಮಾತನಾಡಿದರು. ಸಂಸದ ಕರಡಿಸಂಗಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ, ಮಾಜಿ ಸಂಸದರಾದ ಪಕ್ಕೀರಪ್ಪ, ಜೆ. ಶಾಂತಾ, ವಿರೂಪಾಕ್ಷಪ್ಪ, ಶಾಸಕ ಟಿ.ಎಚ್. ಸುರೇಶ್‌ಬಾಬು, ಮಾಜಿ ಸಚಿವ ರೇಣುಕಾಚಾರ್ಯ, ಮಾಜಿ
ಶಾಸಕ ಜಿ. ಸೋಮಶೇಖರರೆಡ್ಡಿ, ಜಿಲ್ಲಾ ಮುಖಂಡರಾದ ಗುತ್ತಿಗನೂರು ವಿರೂಪಾಕ್ಷಗೌಡ, ಗುರುಲಿಂಗನಗೌಡ, ಮೂಳ್ಳೂರು ಪಂಪಾಪತಿ ಶೆಟ್ಟಿ,
ಕೆ. ರಾಮಲಿಂಗಪ್ಪ, ಜಿಲ್ಲಾ ಸಂಚಾಲಕ ಅನಿಲ್‌ಕುಮಾರ್, ಡಾ| ಮಹಿಪಾಲ್, ಡಾ| ಬಿ.ಕೆ. ಸುಂದರ್ ಇತರರು ಇದ್ದರು. ಬಿಜೆಪಿ ರಾಜಾ ಜೆಪಿ ರಾಜ್ಯಾಧ್ಯಕ್ಷರಿಗೆ ಅದೂ ಗೆ ಅದ್ಧೂರಿ ಸ್ವಾಗತ
ಸಿರುಗುಪ್ಪ: ನಗರದಲ್ಲಿ ಶುಕ್ರವಾರ ಸಂಜೆ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಗೆ ಅಗಮಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ
ಸಾವಿರಾರು ಕಾರ್ಯಕರ್ತರು ಬೈಕ್ ರ್ಯಾಲಿ ಹಾಗೂ ಮಹಿಳಾ ತಂಡಗಳಿಂದ ಡೊಳ್ಳು ಕುಣಿತ, ವೀರಾಗಾಸೆ, ಹಗಲು ವೇಷಧಾರಿಗಳಿಂದ
ಕುಣಿತ, ರಾಮ್‌ಡೋಲ್‌ಗಳ ಮೂಲಕ ಸ್ವಾಗತಿಸಲಾಯಿತು. ನಂತರ ವೇದಿಕೆಗೆ ಅಗಮಿಸಿದ ರಾಜ್ಯ ಮುಖಂಡರನ್ನು ವಿಶೇಷವಾಗಿ ಮುಸ್ಲಿಂ
ಮಹಿಳಾ ಕಾರ್ಯಕರ್ತರು ಪುಷ್ಪ ಗುಚ್ಚಗಳನ್ನು ಅರ್ಪಿಸುವ ಮೂಲಕ ಸ್ವಾಗತ ಬಯಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಕಾರ್ಯಕರ್ತರನ್ನು ಹಿಡಿದಿಡುವ ನಿಟ್ಟಿನಲ್ಲಿ ನಿರಂತರವಾಗಿ ಮಧ್ಯಾಹ್ನದಿಂದ ಸಂಜೆವರೆಗೆ ಸಂಗೀತಾ, ಹಾಸ್ಯ,
ನೃತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಭೆಗೆ ಮುನ್ನ ಮನರಂಜನೆ ನೀಡಲಾಯಿತು.