Advertisement

ಅನಾಥ ಅಸ್ಥಿಗಳಿಗೆ ‌ಮುಕ್ತಿ: ಯಲಗೂರ ಬಳಿ ಸಾಮೂಹಿಕ ಕೃಷ್ಣಾರ್ಪಣ

03:02 PM Jun 13, 2021 | keerthan |

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್ ರೋಗ ಹಾಗೂ ಇತರೆ ಕಾರಣಗಳಿಂದ ಮೃತರಾದವರ ಅಸ್ಥಿಗಳನ್ನು ಪಡೆಯಲು ವಾರಸುದಾರರು ಮುಂದೆ ಬಾರದ ಕಾರಣ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾಳಜಿ‌ ಮೇರೆಗೆ ವಿಪ್ರ ಕ್ರಿಯಾಕರ್ಮ ಟ್ರಸ್ಟ್ ಆಶ್ರಯದಲ್ಲಿ ಕೃಷ್ಣಾ ನದಿಯಲ್ಲಿ ಸಾಮೂಹಿಕ ವಿಸರ್ಜನೆ ಮಾಡಿ, ಧಾರ್ಮಿಕ ಅಸ್ಥಿಗಳಿಗೆ ಮುಕ್ತಿ ಕಾರ್ಯ ನೆರವೇರಿಸಲಾಯಿತು.

Advertisement

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಯಲಗೂರ ಗ್ರಾಮದ ಗ್ರಾ.ಪಂ. ಅಧ್ಯಕ್ಷ, ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರದಿಂದ ಮಹಾಮಾರಿ ಕೋವಿಡ್ ಸೋಂಕು ರೋಗಕ್ಕೆ ಬಲಿಯಾದ 53 ಜನರ ಅಸ್ಥಿಗಳನ್ನು ಹಿಂದೂ ಸಂಪ್ರದಾಯದಂತೆ ಕೃಷ್ಣಾ ನದಿಯಲ್ಲಿ ಶಾಸ್ತ್ರೋಕ್ತವಾಗಿ ಸಾಮೂಹಿಕವಾಗಿ ವಿಸರ್ಜನೆ ಮಾಡಲಾಯಿತು.

ಇದನ್ನೂ ಓದಿ:ದಾವಣಗೆರೆ: ವರ್ಷದಿಂದ ಸಂಬಳ ಸಿಕ್ಕಿಲ್ಲ ಎಂದು ಬೇಸತ್ತು ಸಹಕಾರಿ ಸಂಘದ ಕಾರ್ಯದರ್ಶಿ ಆತ್ಮಹತ್ಯೆ

ಯಲಗೂರ ಬಳಿ ಕೃಷ್ಣಾ ನದಿಯಲ್ಲಿ ಇದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.

Advertisement

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಜಿ.ಪಂ. ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಗೋಪಾಲ ಗದ್ದನಕೇರಿ, ಬದರಿನಾರಾಯಣ ಚಿಮ್ಮಲಗಿ, ಶ್ರೀನಿವಾಸ ಬೆಟಗೇರಿ, ಪ್ರಸನ್ನಾಚಾರ್ಯ ಕಟ್ಟಿ, ಚಂದ್ರು ಚೌಧರಿ, ಪಿ.ಜಿ.ಕೆಂಗನಾಳ ಇತರರು ಅನಾಥ ಅಸ್ಥಿಗಳ ಸಾಮೂಹಿಕ ವಿಸರ್ಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next