Advertisement

“ಲವ್‌ ಮಾಕ್ಟೇಲ್‌-2’ಗೆ ಕೃಷ್ಣ ಸಿದ್ಧತೆ

09:51 AM Mar 20, 2020 | Lakshmi GovindaRaj |

“ಮದರಂಗಿ’ ಕೃಷ್ಣ ಮೊದಲ ಸಲ ನಿರ್ದೇಶಿಸಿ, ಅಭಿನಯಿಸಿದ “ಲವ್‌ ಮಾಕ್ಟೇಲ್‌’ ಸಿನಿಮಾ ಸಕ್ಸಸ್‌ ಆಗಿದ್ದು ಗೊತ್ತೇ ಇದೆ. ಎಲ್ಲೆಡೆ ಭರ್ಜರಿ ಪ್ರತಿಕ್ರಿಯೆ ಪಡೆದ ಚಿತ್ರದಿಂದ ಕೃಷ್ಣ ಸಖತ್‌ ಖುಷಿಯಲ್ಲಿದ್ದಾರೆ. ಅವರಿಗೆ ಇದೀಗ ಒಂದಷ್ಟು ಚಿತ್ರಗಳು ಹುಡುಕಿ ಬರುತ್ತಿವೆ. ಆದರೆ, ಕೃಷ್ಣ ಯಾವುದನ್ನು ಒಪ್ಪಬೇಕು, ಬಿಡಬೇಕು ಎಂಬ ಗೊಂದಲದಲ್ಲೂ ಇದ್ದಾರೆ. ಇವೆಲ್ಲದರ ನಡುವೆಯೂ ಅವರು ಮತ್ತೂಂದು ಸಿನಿಮಾ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ.

Advertisement

ಹೌದು, ಕೃಷ್ಣ “ಲವ್‌ ಮಾಕ್ಟೇಲ್‌’ ಯಶಸ್ಸು ಪಡೆಯುತ್ತಿದ್ದಂತೆಯೇ, ಮತ್ತೂಂದು ಚಿತ್ರಕ್ಕೆ ಕೈ ಹಾಕಿದ್ದು, ಈಗಾಗಲೇ ತಮ್ಮ ಎರಡನೇ ನಿರ್ದೇಶನದ ಚಿತ್ರಕ್ಕೆ ಶೀರ್ಷಿಕೆ ನೋಂದಣಿ ಮಾಡಿಸಿದ್ದಾರೆ. ಆ ಚಿತ್ರಕ್ಕೆ “ಲವ್‌ ಮಾಕ್ಟೇಲ್‌ 2′ ಎಂದು ನಾಮಕರಣ ಮಾಡಿದ್ದಾರೆ. ಈಗಾಗಲೇ ಅವರು ಒಂದೊಳ್ಳೆಯ ಯೋಚನೆ ಬಂದಿದ್ದೇ ತಡ, “ಲವ್‌ಮಾಕ್ಟೇಲ್‌ 2′ ಶೀರ್ಷಿಕೆ ನೋಂದಾಯಿಸಿದ್ದಾರೆ. ಸದ್ಯಕ್ಕೀಗ ಅದರದೇ ಕಥೆ ಬರೆಯುಲು ಕುಳಿತಿದ್ದಾರಂತೆ.

ಆ ಬಗ್ಗೆ ಹೇಳುವ ಕೃಷ್ಣ, “ಲವ್‌ ಮಾಕ್ಟೇಲ್‌’ ಚಿತ್ರದಲ್ಲಿ ಆದಿಯ ಹುಡುಗಿ ನಿಧಿಮಾ ನಿಧನದ ನಂತರ ಶುರುವಾಗುವ ಜರ್ನಿಯ ಕಥೆ ಅದಾಗಿದ್ದು, ಆದಿಯ ದಾರಿಯಲ್ಲಿ ಯಾರು ಸಿಗುತ್ತಾರೆ ಅನ್ನೋದೇ ಸಸ್ಪೆನ್ಸ್‌ ಅಂತೆ. ಆದರೆ, ಅವರು ನಿರ್ದೇಶನ, ನಟನೆ ಮಾಡುತ್ತಿದ್ದು, ಚಿತ್ರ ಯಾರ ಬ್ಯಾನರ್‌ನಲ್ಲಿ ಆಗಲಿದೆ ಅನ್ನೋದು ಗೊತ್ತಿಲ್ಲ. ಯಾಕೆಂದರೆ, ಈಗಾಗಲೇ ಸಾಕಷ್ಟು ಜನ ನನಗೊಂದು ಚಿತ್ರ ನಿರ್ದೇಶನ ಮಾಡಿಕೊಡಿ ಅಂತ ಬರುತ್ತಿದ್ದಾರಂತೆ.

ನಟನೆ ಜೊತೆ ನಿರ್ದೇಶನ ಮಾಡಿ, ನಾವು ನಿರ್ಮಾಣ ಮಾಡುತ್ತೇವೆ ಎಂಬ ಮಂದಿಯೇ ಹೆಚ್ಚಾಗುತ್ತಿದ್ದಾರೆ. ದಿನಕ್ಕೆ ಎರಡು, ಮೂರು ಕಥೆ ಕೇಳುತ್ತಿದ್ದೇನೆ. ಆದರೆ, ಯಾವುದನ್ನೂ ಅಂತಿಮ ಮಾಡಿಲ್ಲ. ಸದ್ಯಕ್ಕೆ “ಲವ್‌ ಮಾಕ್ಟೇಲ್‌ 2′ ಸಿನಿಮಾಗೆ ಕಥೆ ಶುರು ಮಾಡಿದ್ದೇನೆ. ಇದೇ ವರ್ಷ ಚಿತ್ರೀಕರಣಗೊಂಡು, ಬಿಡುಗಡೆಯಾದರೂ ಅಚ್ಚರಿ ಇಲ್ಲ. ಸದ್ಯಕ್ಕೆ ತುಂಬಾನೇ ಇಂಟ್ರೆಸ್ಟಿಂಗ್‌ ಲೈನ್‌ ಹೊಳೆದಿದ್ದು, ಅದರ ಮೇಲೆ ಸ್ಟೋರಿ ಮಾಡುತ್ತಿದ್ದೇನೆ’ ಎನ್ನುತ್ತಾರೆ ಕೃಷ್ಣ.

Advertisement

Udayavani is now on Telegram. Click here to join our channel and stay updated with the latest news.

Next