Advertisement

Krishna Matha: ಉಡುಪಿಗೆ ಆಗಮಿಸಿದ ಯೋಗಗುರು ಬಾಬಾ ರಾಮ್‌ದೇವ್‌

10:22 PM Oct 23, 2024 | Team Udayavani |

ಉಡುಪಿ: ಶ್ರೀ ಕೃಷ್ಣಮಠ ಶ್ರೀ ಪರ್ಯಾಯ ಪುತ್ತಿಗೆ ಮಠದ ಸಹಯೋಗದಲ್ಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ಭಾರತೀಯ ವಿದ್ವತ್‌ ಪರಿಷತ್‌ ಆಶ್ರಯದಲ್ಲಿ ಅ.24ರಿಂದ 26ರ ವರೆಗೆ ನಡೆಯಲಿರುವ 51ನೇ ಅಖಿಲ ಭಾರತ ಪ್ರಾಚ್ಯ ವಿದ್ಯಾಸಮ್ಮೇಳನವನ್ನು ಉದ್ಘಾಟಿಸಲಿರುವ ಹರಿದ್ವಾರದ ಪತಂಜಲಿ ಯೋಗ ಪೀಠದ ಸಂಸ್ಥಾಪಕರಾದ ಬಾಬಾ ರಾಮ್‌ದೇವ್‌ ಅವರು ಬುಧವಾರ ರಾತ್ರಿ ಉಡುಪಿಗೆ ಆಗಮಿಸಿ, ಶ್ರೀಕೃಷ್ಣ ದೇವರ ದರ್ಶನ ಪಡೆದರು.

Advertisement

ಅ.24ರ ಬೆಳಗ್ಗೆ 5.30ರಿಂದ 7.30ರವರೆಗೆ ರಾಜಾಂಗಣದಲ್ಲಿ ನಡೆಯಲ್ಲಿ ಯೋಗ ಶಿಬಿರದಲ್ಲಿ ಪಾಲ್ಗೊಂಡು, ಬೆಳಗ್ಗೆ 10ಕ್ಕೆ ರಾಜಾಂಗಣದಲ್ಲಿಯೇ ಸಮ್ಮೇಳನದ ಉದ್ಘಾಟನೆ ನೆರವೇರಿಸಲಿದ್ದಾರೆ.

ಬುಧವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಅವರು ಬಾಬಾ ರಾಮ್‌ದೇವ್‌ ಅವರನ್ನು ಸ್ವಾಗತಿಸಿದರು.

ಅನಂತರ ಶ್ರೀ ಕೃಷ್ಣಮಠದಲ್ಲಿ ವೇದ ಘೋಷಗಳ ನಡುವೆ ಪರ್ಯಾಯ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಬಾಬಾ ರಾಮ್‌ದೇವ್‌ ಅವರನ್ನು  ಬರಮಾಡಿಕೊಂಡು, ಶ್ರೀ ಕೃಷ್ಣ ದೇವರ ದರ್ಶನ ಮಾಡಿಸಲಾಯಿತು. ಅನಂತರ ಪರ್ಯಾಯ ಶ್ರೀಪಾದರ ಅಪೇಕ್ಷೆಯಂತೆ ಗೀತಾಮಂದಿರಕ್ಕೆ ತೆರಳಿ ಪೊಡವಿಗೊಡೆಯ ಶ್ರೀಕೃಷ್ಣನ ಗೀತಾ ಸಂದೇಶವನ್ನು ಜಗದಗಲ ಸಾರುವ ಹಾಗೂ ಪ್ರಪಂಚದಾದ್ಯಂತ ಇರುವ ಶ್ರೀಕೃಷ್ಣ ಭಕ್ತರಲ್ಲಿ ಧಾರ್ಮಿಕ,ಸಾಂಸ್ಕೃತಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಕೈಗೊಂಡ ವಿವಿಧ ಯೋಜನೆಗಳ ಬಗ್ಗೆ ತಿಳಿದುಕೊಂಡು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪತಂಜಲಿ ಯೋಗ ಪೀಠದ ಕುಲಪತಿ ಆಚಾರ್ಯ ಬಾಲಕೃಷ್ಣ, ಮಾತಾ ಸಾಧ್ವಿà ದೇವಪ್ರಿಯಾ ದೀದೀಜಿ, ಶ್ರೀಮಠದ ದಿವಾನರಾದ ನಾಗರಾಜ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next