Advertisement

ಕೃಷ್ಣಾ-ಮಹದಾಯಿ ಪರ ಸಮರ್ಥ ವಾದ ಮಂಡನೆ: ಮಾಧುಸ್ವಾಮಿ

11:39 PM Sep 30, 2019 | Team Udayavani |

ಹುಬ್ಬಳ್ಳಿ: “ಕೃಷ್ಣಾ ಹಾಗೂ ಮಹದಾಯಿ ಜಲ ವಿವಾದವನ್ನು ರಾಜ್ಯ ಸರ್ಕಾರ ಗಂಭೀರವಾಗಿಯೇ ಪರಿಗಣಿಸಿದೆ. ರಾಜ್ಯದಲ್ಲಿನ ಯಾವುದೇ ನದಿಯಿಂದ ರಾಜ್ಯದ ಪಾಲಿನ ನೀರು ಪಡೆಯುವ ನಿಟ್ಟಿನಲ್ಲಿ ರಾಜಿ ಇಲ್ಲವೇ ಇಲ್ಲ. ಪ್ರತಿಭಾವಂತ ವಕೀಲರಿಂದ ಸಮರ್ಥ ವಾದ ಮಂಡನೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ಕೈಗಾರಿಕಾ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೂರು ದಿನಗಳ ಹಿಂದೆಯೇ ತಮಿಳುನಾಡಿನಲ್ಲಿ ಜಲ ಹಂಚಿಕೆ ವಿಷಯವಾಗಿ ಸಭೆ ನಡೆಯಬೇಕಾಗಿತ್ತು. ಅದು ಸಾಧ್ಯವಾಗಿಲ್ಲ. ಜಲ ವಿವಾದ ಇತ್ಯರ್ಥ ಹಾಗೂ ನೆರೆ ರಾಜ್ಯಗಳೊಂದಿಗೆ ಸೌಹಾರ್ದ ಮಾತುಕತೆ, ಕಾನೂನು ಹೋರಾಟಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಸಚಿವ ಸಂಪುಟದ ಉಪ ಸಮಿತಿ ರಚನೆ ಮಾಡಿದ್ದು, ಈ ಹಿಂದೆ ಜಲಸಂಪನ್ಮೂಲ ಖಾತೆ ನಿರ್ವಹಿಸಿದ, ಪ್ರಸ್ತುತ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಸಹ ಸಮಿತಿ ಸದಸ್ಯರಾಗಿದ್ದಾರೆ ಎಂದರು.

ಮಹದಾಯಿ ನ್ಯಾಯಾಧಿಕರಣ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರದಿಂದ ಅಧಿಸೂಚನೆ ಹೊರಡಿಸುವ ನಿಟ್ಟಿನಲ್ಲಿ ಯತ್ನ ನಡೆಯುತ್ತಿದೆ. ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ಜಲ ವಿವಾದ ಇನ್ನಿತರ ವಿಷಯಗಳ ಕುರಿತು ಕಾನೂನು ಸಮರಕ್ಕೆ ಎಲ್ಲ ರೀತಿಯಿಂದ ಸಮರ್ಪಕ ವಾದ ಮಂಡನೆಗೆ ಕ್ರಮ ಕೈಗೊಳ್ಳಲಾಗುವುದು. ಇದರಲ್ಲಿ ಅನುಮಾನವೇ ಬೇಡ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next