Advertisement

Krishna Janmabhoomi Case: ಮುಸ್ಲಿಂ ಪರ ಅರ್ಜಿಯನ್ನು ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್

04:01 PM Aug 01, 2024 | Team Udayavani |

ನವದೆಹಲಿ: ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಗುರುವಾರ(ಆಗಸ್ಟ್ 1) ರಂದು ಮಹತ್ವದ ತೀರ್ಪು ನೀಡಿದೆ.

Advertisement

ಮಥುರಾದ ಕೃಷ್ಣ ಜನ್ಮಭೂಮಿ – ಶಾಹಿ ಈದ್ಗಾ ವಿವಾದದಲ್ಲಿ ದಾವೆಗಳ ನಿರ್ವಹಣೆಯನ್ನು ಪ್ರಶ್ನಿಸಿ ಮುಸ್ಲಿಂ ಪರ ಮುಖಂಡರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ. ನ್ಯಾಯಮೂರ್ತಿ ಮಯಾಂಕ್ ಕುಮಾರ್ ಜೈನ್ ಅವರಿದ್ದ ಏಕ ಸದಸ್ಯ ಪೀಠ ಈ ತೀರ್ಪು ನೀಡಿದೆ.

ಕತ್ರಾ ಕೇಶವ್ ದೇವ್ ದೇವಸ್ಥಾನದೊಂದಿಗೆ ಹಂಚಿಕೊಂಡಿರುವ 13.37 ಎಕರೆ ಸಂಕೀರ್ಣದಲ್ಲಿರುವ ಮಸೀದಿಯನ್ನು ತೆಗೆದುಹಾಕುವಂತೆ ಹಿಂದೂ ಪರ ಮುಖಂಡರು 18 ಅರ್ಜಿ ಸಲ್ಲಿಸಿದ್ದರು ಆದರೆ ಈ ಮೊಕದ್ದಮೆಯನ್ನು ಪ್ರಶ್ನಿಸಿ ಮುಸ್ಲಿಂ ಕಡೆಯವರು ಅರ್ಜಿ ಸಲ್ಲಿಸಿದ್ದರು ಆದರೆ ಹೈಕೋರ್ಟ್ ಮುಸ್ಲಿಂ ಪರ ವಾದವನ್ನು ಸ್ವೀಕರಿಸದೆ ಅರ್ಜಿಗಳನ್ನು ತಿರಸ್ಕರಿಸಿತು.

ಮುಂದಿನ ಅರ್ಜಿ ವಿಚಾರಣೆಯನ್ನು ಕೋರ್ಟ್ ಆಗಸ್ಟ್ 12 ಕ್ಕೆ ಮುಂದೂಡಿದೆ.

ಹಿಂದೂ ಪರ ಅರ್ಜಿಗಳ ವಿಚಾರಣೆ ಮುಂದುವರಿಕೆ:
ನ್ಯಾಯಮೂರ್ತಿ ಮಯಾಂಕ್ ಕುಮಾರ್ ಜೈನ್ ಅವರಿದ್ದ ಏಕ ಸದಸ್ಯ ಪೀಠ ಈ ತೀರ್ಪು ನೀಡಿದೆ. ತಾಂತ್ರಿಕ ಪರಿಭಾಷೆಯಲ್ಲಿ, ಅಲಹಾಬಾದ್ ಹೈಕೋರ್ಟ್ ಆದೇಶ 7 ನಿಯಮ 11 ಅನ್ನು ಆಕ್ಷೇಪಿಸಿ ಮುಸ್ಲಿಂ ಕಡೆಯ ಅರ್ಜಿಯನ್ನು ತಿರಸ್ಕರಿಸಿದ್ದು ಹಿಂದೂಗಳ ಕಡೆಯ ಅರ್ಜಿಗಳ ವಿಚಾರಣೆ ಮುಂದುವರಿಯಲಿದೆ.

Advertisement

18 ಅರ್ಜಿಗಳ ವಿಚಾರಣೆ:
ಹಿಂದೂ ಕಡೆಯ ಅರ್ಜಿಯ ನಂತರ, ಮುಸ್ಲಿಂ ಕಡೆಯವರು ಪೂಜಾ ಸ್ಥಳಗಳ ಕಾಯಿದೆ, ವಕ್ಫ್ ಕಾಯಿದೆ, ಮಿತಿ ಕಾಯಿದೆ ಮತ್ತು ನಿರ್ದಿಷ್ಟ ಸ್ವಾಧೀನ ಪರಿಹಾರ ಕಾಯ್ದೆಯನ್ನು ಉಲ್ಲೇಖಿಸಿ ಹಿಂದೂ ಕಡೆಯ ಅರ್ಜಿಗಳನ್ನು ವಜಾಗೊಳಿಸುವಂತೆ ಒತ್ತಾಯಿಸಿದರು. ಆದರೆ ಅಲಹಾಬಾದ್ ಹೈಕೋರ್ಟ್ ಮುಸ್ಲಿಂ ಪರ ಅರ್ಜಿಯನ್ನು ತಿರಸ್ಕರಿಸಿದೆ. ಈಗ ಅಲಹಾಬಾದ್ ಹೈಕೋರ್ಟ್‌ನಲ್ಲಿ ಹಿಂದೂಗಳ 18 ಅರ್ಜಿಗಳು ಒಟ್ಟಾಗಿ ವಿಚಾರಣೆಗೆ ಬರಲಿವೆ.

ಹಿಂದೂಗಳ ವಾದವೇನು?
1. ಈದ್ಗಾದ ಸಂಪೂರ್ಣ ಎರಡೂವರೆ ಎಕರೆ ಪ್ರದೇಶವು ಶ್ರೀ ಕೃಷ್ಣನ ಗರ್ಭಗುಡಿಯಾಗಿದೆ.
2. ಮಸೀದಿ ಸಮಿತಿಯು ಭೂಮಿಯ ಯಾವುದೇ ದಾಖಲೆಯನ್ನು ಹೊಂದಿಲ್ಲ.
3. ಈ ಅರ್ಜಿಯಲ್ಲಿ ಸಿವಿಲ್ ಪ್ರೊಸೀಜರ್ ಕೋಡ್ ನ ಆದೇಶ-7, ನಿಯಮ-11 ಅನ್ವಯಿಸುವುದಿಲ್ಲ.
4. ದೇವಸ್ಥಾನವನ್ನು ಕೆಡವಿ ಅಕ್ರಮವಾಗಿ ಮಸೀದಿ ನಿರ್ಮಿಸಲಾಗಿದೆ.
5. ಜಮೀನು ಕತ್ರಾ ಕೇಶವ್ ದೇವ್ ಅವರ ಒಡೆತನದಲ್ಲಿದೆ.
6. ಮಾಲೀಕತ್ವದ ಯಾವುದೇ ದಾಖಲೆಗಳಿಲ್ಲದೆ, ವಕ್ಫ್ ಮಂಡಳಿಯು ಯಾವುದೇ ಕಾನೂನು ಪ್ರಕ್ರಿಯೆಯಿಲ್ಲದೆ ಈ ಭೂಮಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಿದೆ.
7. ಕಟ್ಟಡವನ್ನು ಪುರಾತತ್ವ ಇಲಾಖೆಯು ರಕ್ಷಿಸಿದೆ ಎಂದು ಘೋಷಿಸಲಾಗಿದೆ, ಆದ್ದರಿಂದ ಪೂಜಾ ಸ್ಥಳಗಳ ಕಾಯಿದೆಯು ಇದಕ್ಕೆ ಅನ್ವಯಿಸುವುದಿಲ್ಲ.

ಇದನ್ನೂ ಓದಿ: Renukaswamy case: ದರ್ಶನ್‌ ಸೇರಿ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ

 

Advertisement

Udayavani is now on Telegram. Click here to join our channel and stay updated with the latest news.

Next