Advertisement

ಬೆಚ್ಚಿ ಬೀಳಿಸಿದ ಕೃಷ್ಣ ಟಾಕೀಸ್‌

12:02 PM Mar 10, 2021 | Team Udayavani |

ನಟ ಅಜೇಯ ರಾವ್‌ ಅಭಿನಯದ “ಕೃಷ್ಣ ಟಾಕೀಸ್‌’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ ಚಿತ್ರದ ಪ್ರಮೋಶನ್‌ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಈ ವಾರ “ಕೃಷ್ಣ ಟಾಕೀಸ್‌’ನ ಮೊದಲ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ.

Advertisement

ಇನ್ನು ಬಿಡುಗಡೆಯಾಗಿರುವ “ಕೃಷ್ಣ ಟಾಕೀಸ್‌’ ಟ್ರೇಲರ್‌ನಲ್ಲಿ ನಟ ಅಜೇಯ್‌ ರಾವ್‌ ಮೊದಲ ಬಾರಿಗೆ ತುಂಬ ಗಂಭೀರ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಜೇಯ್‌ ರಾವ್‌ ಅವರ ಆ್ಯಕ್ಷನ್‌, ಹಾರರ್‌ ಗೆಟಪ್‌ ಅವರ ಪಾತ್ರದ ಬಗ್ಗೆ ಒಂದಷ್ಟು ಕುತೂಹಲ ಮೂಡಿಸುವಂತಿದೆ. ಸಸ್ಪೆನ್ಸ್‌, ಹಾರರ್‌, ಥ್ರಿಲ್ಲರ್‌, ಲವ್‌, ಆ್ಯಕ್ಷನ್‌ ಹೀಗೆ ಒಂದು ಕಮರ್ಷಿಯಲ್‌ ಎಂಟರ್‌ಟೈನ್ಮೆಂಟ್‌ ಚಿತ್ರದಲ್ಲಿ ಏನೆಲ್ಲ ಇರಬೇಕೋ, ಆ ಎಲ್ಲ ಅಂಶಗಳನ್ನೂ ನಿರ್ದೇಶಕ ವಿಜಯಾನಂದ್‌ ಟ್ರೇಲರ್‌ ಝಲಕ್‌ನಲ್ಲಿ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಟ್ರೇಲರ್‌ನಲ್ಲಿ ಬರುವ “ಮನಮೋಹನ…’ ಹಾಡಿನ ತುಣುಕಿನಲ್ಲಿ ನಾಯಕಿ ಅಪೂರ್ವ ಗಮನ ಸೆಳೆಯುತ್ತಾರೆ. ಸಿಂಧೂ ಲೋಕನಾಥ್‌ ಅವರ ಪಾತ್ರವೂ ಕುತೂಹಲ ಹುಟ್ಟಿಸುವಂತಿದೆ.

ಇದನ್ನೂ ಓದಿ :ರಾಬರ್ಟ್‌ ಹಬ್ಬಕ್ಕೆ ಒಂದೇ ದಿನ ಬಾಕಿ: ಅಭಿಮಾನಿಗಳ ಜೊತೆಗೆ ಇಡೀ ಚಿತ್ರರಂಗಕ್ಕೂ ನಿರೀಕ್ಷೆ..!

ಚಿಕ್ಕಣ್ಣ, ಪ್ರಮೋದ್‌ ಶೆಟ್ಟಿ, ಶೋಭರಾಜ್‌, ಶ್ರೀನಿವಾಸ ಪ್ರಭು, ಪ್ರಕಾಶ್‌ ತುಮ್ಮಿನಾಡ್‌ ಹೀಗೆ ದೊಡ್ಡ ಕಲಾವಿದರ ದಂಡೇ ಟ್ರೇಲರ್‌ನಲ್ಲಿ ಕಾಣುತ್ತಿದೆ. ಕ್ಯಾಮರಾ ವರ್ಕ್‌, ಸಂಕಲನ, ಕಲರಿಂಗ್‌,

ಹಿನ್ನೆಲೆ ಸಂಗೀತ ಹೀಗೆ ಎಲ್ಲ ತಾಂತ್ರಿಕ ಕೆಲಸಗಳು ಅಚ್ಚುಕಟ್ಟಾಗಿ ಮೂಡಿಬಂದಿದ್ದು, “ಕೃಷ್ಣ ಟಾಕೀಸ್‌’ ಟ್ರೇಲರ್‌ ಮೊದಲ ಬಾರಿ ನೋಡುವವರಿಗೆ ಒಂದು ಕ್ಷಣ ಬೆಚ್ಚಿಬೀಳಿಸುವಂತೆ ಮಾಡಲು ಯಶಸ್ವಿಯಾಗಿದೆ.

Advertisement

ಒಟ್ಟಾರೆ, ಅಜೇಯ್‌ ರಾವ್‌ “ಕೃಷ್ಣ ಟಾಕೀಸ್‌’ ಟ್ರೇಲರ್‌ ನೋಡುಗರಿಗೆ ಒಂದಷ್ಟು ನಿರೀಕ್ಷೆ ಮೂಡಿಸಲು ಯಶಸ್ವಿಯಾಗಿದ್ದು, ಸಂಪೂರ್ಣ ಚಿತ್ರ ಹೇಗಿರಲಿದೆ ಅನ್ನೋದು ಇದೇ, ಏಪ್ರಿಲ್‌ 9ಕ್ಕೆ ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next