Advertisement

ಕೃಣಾಲ್‌ ಪಾಂಡ್ಯ ವೆಡ್ಸ್‌ ಪಂಕುರಿ

07:00 AM Dec 28, 2017 | Team Udayavani |

ಮುಂಬೈ: ಖ್ಯಾತ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಅವರ ಸಹೋದರ ಮುಂಬೈ ಇಂಡಿಯನ್ಸ್‌ ತಂಡದ ಆಲ್‌ರೌಂಡರ್‌ ಕೃಣಾಲ್‌ ಪಾಂಡ್ಯ ಬುಧವಾರ ಮುಂಬೈನಲ್ಲಿ ಪಂಕುರಿ ಶರ್ಮ ಅವರನ್ನು ವಿವಾಹವಾದರು. ಈ ಮೂಲಕ ಇತ್ತೀಚೆಗೆ ಮದುವೆಯಾದ ಜಹೀರ್‌ ಖಾನ್‌, ವಿರಾಟ್‌ ಕೊಹ್ಲಿ ಸಾಲಿಗೆ ಕೃಣಾಲ್‌ ಕೂಡ ಸೇರಿಕೊಂಡರು. ಇದೇ ವೇಳೆ ಸಹೋದರನ ಮದುವೆಯ ಸಂಭ್ರಮವನ್ನು ಹಾರ್ದಿಕ್‌ ಖುಷಿಯಿಂದ ಆನಂದಿಸಿದರು. ಮಂಗಳವಾರ ನಡೆದ ಮೆಹೆಂದಿ ಕಾರ್ಯಕ್ರಮದಲ್ಲಿ ಹಾರ್ದಿಕ್‌
ಪಂಜಾಬಿ ಹಾಡಿಗೆ ಡ್ಯಾನ್ಸ್‌ ಮಾಡಿದರು.

Advertisement

ಕುಣಿದು ಕುಪ್ಪಳಿಸಿದರು. ಕೃಣಾಲ್‌-ಪಂಕುರಿ ಮದುವೆ ಕಾರ್ಯಕ್ರಮದಲ್ಲಿ ಹಲವಾರು ಮಂದಿ ಮಾಜಿ, ಹಾಲಿ ಕ್ರಿಕೆಟಿಗರು, ಬಾಲಿವುಡ್‌ ನಟ-ನಟಿಯರು ಮತ್ತಿತರ ಗಣ್ಯರು ಹಾಜರಿದ್ದರು. ಕೃಣಾಲ್‌ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಪರ
ಆಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next