Advertisement

ವಿಂಬಲ್ಡನ್‌ ಮಿಶ್ರ ಡಬಲ್ಸ್‌ ಪ್ರಶಸ್ತಿ ಉಳಿಸಿಕೊಂಡ ಕ್ರಾಜಿಕ್‌-ಸ್ಕಪ್‌ಸ್ಕಿ

11:36 PM Jul 08, 2022 | Team Udayavani |

ಅಮೆರಿಕನ್‌-ಬ್ರಿಟನ್‌ ಜೋಡಿಯಾದ ಡಿಸೈರ್‌ ಕ್ರಾಜಿಕ್‌-ನೀಲ್‌ ಸ್ಕಪ್‌ಸ್ಕಿ ವಿಂಬಲ್ಡನ್‌ ಮಿಶ್ರ ಡಬಲ್ಸ್‌ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಸೆಂಟರ್‌ ಕೋರ್ಟ್‌ನಲ್ಲಿ ನಡೆದ ಫೈನಲ್‌ ಮುಖಾಮುಖಿಯಲ್ಲಿ ಆಸ್ಟ್ರೇಲಿಯದ ಮ್ಯಾಥ್ಯೂ ಎಬೆxನ್‌-ಸಮಂತಾ ಸ್ಟೋಸರ್‌ ವಿರುದ್ಧ ಕ್ರಾಜಿಕ್‌-ಸ್ಕಪ್‌ಸ್ಕಿ 6-4, 6-3 ಅಂತರದ ಗೆಲುವು ಸಾಧಿಸಿದರು.

1997ರ ಬಳಿಕ ವಿಂಬಲ್ಡನ್‌ ಮಿಕ್ಸೆಡ್‌ ಡಬಲ್ಸ್‌ ಪ್ರಶಸ್ತಿ ಉಳಿಸಿಕೊಂಡ ಮೊದಲ ಜೋಡಿ ಎಂಬ ಹೆಗ್ಗಳಿಕೆ ಕ್ರಾಜಿಕ್‌-ಸ್ಕಪ್‌ಸ್ಕಿ ಅವರದಾಯಿತು. ಅಂದು ಜೆಕ್‌ ಸೋದರ-ಸೋದರಿಯರಾದ ಸಿರಿಲ್‌ ಸುಕ್‌-ಹೆಲೆನಾ ಸುಕೋವಾ ಈ ಸಾಧನೆಗೈದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next